ಬ್ರೇಕಿಂಗ್ ನ್ಯೂಸ್
22-06-24 08:59 pm HK News Desk ದೇಶ - ವಿದೇಶ
ಮುಂಬೈ, ಜೂನ್.22: ಮಾಜಿ ಸಂಸದ ಶತ್ರುಘ್ನಾ ಸಿನ್ಹಾ ಅವರ ಪುತ್ರಿ ನಟಿ ಸೋನಾಕ್ಷಿ ಸಿನ್ಹಾ ತನ್ನ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗುವುದಕ್ಕೆ ವೇದಿಕೆ ಸಿದ್ಧವಾಗಿದೆ. ಎರಡು ದಿನಗಳ ಹಿಂದೆ ಶತ್ರುಘ್ನಾ ಸಿನ್ಹಾ ಅವರು ತನ್ನ ಮಗಳ ಬಯಕೆಗೆ ಒಪ್ಪಿಗೆ ನೀಡಿದ್ದಾರೆ. ಇದರ ಬೆನ್ನಲ್ಲೇ ಜಹೀರ್ ಇಕ್ಬಾಲ್ ಅವರ ಇಕ್ಬಾಲ್ ರತನ್ಸಿ ಹೇಳಿಕೆ ನೀಡಿದ್ದು, ಮದುವೆಯಾದ ಬಳಿಕ ಸೋನಾಕ್ಷಿ ಸಿನ್ಹಾ ಇಸ್ಲಾಂಗೆ ಮತಾಂತರ ಆಗಲ್ಲ ಎಂದಿದ್ದಾರೆ.
ಜೂನ್ 23ರಂದು ಅವರು ಸಿವಿಲ್ ಮ್ಯಾರೇಜ್ ಆಗಲಿದ್ದಾರೆ. ಹಿಂದು ಪದ್ಧತಿ ಅಥವಾ ಮುಸ್ಲಿಂ ವಿಧಿಯಂತೆ ಮದುವೆ ಆಗೋದಿಲ್ಲ. ನಾಗರಿಕ ಕಾನೂನು ಪ್ರಕಾರ ರಿಜಿಸ್ಟರ್ ಅಷ್ಟೇ ಆಗಲಿದ್ದಾರೆ. ಮದುವೆ ಬಳಿಕ ಆಕೆ ಮತಾಂತರ ಆಗೋದೂ ಇಲ್ಲ. ಅವರಿಬ್ಬರ ಹೃದಯಗಳು ಬೆಸೆದಿವೆ, ಧರ್ಮ ಅದಕ್ಕೆ ಅಡ್ಡ ಬರೋದಿಲ್ಲ ಎಂದು ಇಕ್ಬಾಲ್ ರತನ್ಸಿ ಹೇಳಿದ್ದಾರೆ.

ಸೋನಾಕ್ಷಿ ಸಿನ್ಹಾ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವುದಕ್ಕೆ ತಂದೆ ಶತ್ರುಘ್ನಾ ಸಿನ್ಹಾ ಒಪ್ಪಿಕೊಂಡಿಲ್ಲ, ಅಸಮ್ಮತಿ ತೋರಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರ ಬೆನ್ನಲ್ಲೇ ಶತ್ರುಘ್ನಾ ಸಿನ್ಹಾ ಪ್ರತಿಕ್ರಿಯೆ ಕೊಟ್ಟಿದ್ದು ಮದುವೆಗೆ ತನ್ನದೇನೂ ಆಕ್ಷೇಪ ಇಲ್ಲ ಎಂದಿದ್ದರು. ನನ್ನ ಕುಟುಂಬದ ಬಗ್ಗೆ ಸುಳ್ಳು ವರದಿಗಳನ್ನು ಬಿತ್ತರಿಸಲಾಗುತ್ತಿದೆ. ಯಾರ ಜೀವನ ಹೇಗಿದೆಯೋ ಯಾರಿಗೊತ್ತು. ಇದು ನನ್ನ ಒಬ್ಬಳೇ ಮಗಳ ಜೀವನದ ಪ್ರಶ್ನೆ. ನನಗೆ ಆಕೆಯ ಬಗ್ಗೆ ಹೆಮ್ಮೆ ಇದೆ, ನಾನು ಮದುವೆಯಲ್ಲಿ ಪಾಲ್ಗೊಳ್ಳುತ್ತೇನೆ, ನಾನು ಮದುವೆಗೆ ಹೋಗದೇ ಇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಒಂದೆಡೆ ಸೋನಾಕ್ಷಿ – ಜಹೀರ್ ಮದುವೆಯನ್ನು ಅದ್ದೂರಿಯಾಗಿ ಮಾಡಲು ಸಿದ್ಧತೆ ನಡೆಸಲಾಗಿದ್ದರೆ, ಜಾಲತಾಣದಲ್ಲಿ ಇವರ ಮದುವೆಗೆ ಪರ- ವಿರೋಧ ಚರ್ಚೆ ನಡೆಸಿದ್ದಾರೆ.
Sonakshi Sinha and her longtime boyfriend Zaheer Iqbal are all set to tie the knot. The couple will have a civil marriage on June 23, the groom-to-be’s father, Iqbal Ratansi has revealed. In a recent interview, Zaheer’s father shed light on their marriage when he told Free Press Journal, “It will have neither Hindu nor Muslim rituals. It will be a civil marriage.”
07-03-26 08:05 pm
HK News Staffer
ಗ್ಯಾರಂಟಿ ಯೋಜನೆ ಸರಿದೂಗಿಸಲು ಸಿದ್ದರಾಮಯ್ಯ ಎಂಟು ಲಕ...
07-03-26 07:17 pm
ಜನಸಂಖ್ಯೆ ಕುಸಿತ ತಡೆಯಲು ಆಂಧ್ರ ಸರ್ಕಾರ ಹೊಸ ಯೋಜನೆ...
07-03-26 12:01 pm
ಕಾರವಾರ, ಯಾದಗಿರಿಗೆ 100 ಕೋಟಿ ರೂ. ವೆಚ್ಚದಲ್ಲಿ ಸೂಪ...
06-03-26 07:03 pm
ಅನ್ನಭಾಗ್ಯದಲ್ಲಿ ದೊಡ್ಡ ಬದಲಾವಣೆ ; ಹೆಚ್ಚುವರಿ ಅಕ್...
06-03-26 03:50 pm
07-03-26 11:58 am
HK News Staffer
ರಾಜಧಾನಿ ಟೆಹ್ರಾನಲ್ಲಿದ್ದ ಅಯತೊಲ್ಲಾ ಖಮೇನಿಗೆ ಸೇರಿದ...
06-03-26 11:04 pm
ಲವ್ ಜಿಹಾದ್ ಕಡಿವಾಣಕ್ಕೆ ಮಹಾರಾಷ್ಟ್ರದಲ್ಲಿ ಹೊಸ ಮಸೂ...
06-03-26 10:58 pm
ಹರ್ಮುಜ್ ಜಲಸಂಧಿ ಅಮೆರಿಕ ಮಿತ್ರ ರಾಷ್ಟ್ರಗಳಿಗೆ ಮಾತ್...
06-03-26 11:40 am
ಮಾರ್ಕ್-48 ಜಗತ್ತಿನ ಅತಿ ಶಕ್ತಿಶಾಲಿ ಜಲಾಂತರ್ಗಾಮಿ ಸ...
06-03-26 09:50 am
07-03-26 11:31 pm
HK News Desk
ಮಂಗಳೂರು ರಿಫೈನರಿ ಸ್ಥಗಿತ ವದಂತಿ ತಳ್ಳಿಹಾಕಿದ ಎಂಆರ್...
07-03-26 10:17 pm
ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ; ಹೆರಿಗೆ ಸ...
07-03-26 09:45 pm
ನೇತ್ರಾವತಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್...
07-03-26 07:20 pm
ಬಜೆಟ್ ನಲ್ಲಿ ಮೀನುಗಾರಿಕೆ ಕ್ಷೇತ್ರಕ್ಕೆ ಬಂಪರ್; ಉಚಿ...
06-03-26 07:01 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm