ಬ್ರೇಕಿಂಗ್ ನ್ಯೂಸ್
16-06-24 10:50 pm HK News Desk ದೇಶ - ವಿದೇಶ
ಲಕ್ನೋ, ಜೂನ್ 16: ದಾಖಲೆ ನಿರ್ಮಿಸುವುದಕ್ಕಾಗಿ ಕೆಲವು ಯುವ ಜೋಡಿಗಳು ನೀರಿನಾಳದಲ್ಲಿ, ಆಕಾಶದಲ್ಲಿ ಹಾರ ಬದಲಾಯಿಸಿ ಮದುವೆ ಮಾಡಿಕೊಂಡಿದ್ದು ಇದೆ. ಸಂಭ್ರಮದಲ್ಲಿ ನಡೆಯಬೇಕಿದ್ದ ಮದುವೆಯನ್ನು ಬೇರೆ ಯಾರೂ ಮಾಡದ ರೀತಿ ಮಾಡಿಕೊಂಡವರು ಇದ್ದಾರೆ. ಇಲ್ಲೊಂದು ಯುವ ಜೋಡಿ ಆಸ್ಪತ್ರೆಯ ಐಸಿಯುನಲ್ಲೇ ಮದುವೆಯಾಗಿ ಸುದ್ದಿಯಾಗಿದ್ದಾರೆ.
ಉತ್ತರ ಪ್ರದೇಶದ ಲಕ್ನೋ ನಗರದ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಮದುವೆ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಲಕ್ನೋ ಚೌಕ್ ನಿವಾಸಿ ಮೊಹಮ್ಮದ್ ಇಕ್ಬಾಲ್ ಅವರು ತಮ್ಮ ಪುತ್ರಿಯ ಮದುವೆಯ ದಿನಾಂಕ ಸಮೀಪಿಸುತ್ತಿದ್ದಂತೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ತಂದೆಗೆ ಮಗಳ ಮದುವೆ ತನ್ನ ಮುಂದೆಯೇ ನಡೆಯಬೇಕೆನ್ನುವ ಪರಮಾಸೆ ಇತ್ತು. ಹೀಗಾಗಿ ಎರಡೂ ಕುಟುಂಬದ ಹಿರಿಯರು ಒಂದು ನಿರ್ಧಾರಕ್ಕೆ ಬಂದಿದ್ದು ವೈದ್ಯರು ಅವಕಾಶ ಕೊಟ್ಟರೆ ನಿಖಾ ಮಾಡಲು ನಿರ್ಣಯಿಸಿದ್ದಾರೆ.
ಇಕ್ಬಾಲ್ ಐಸಿಯುನಲ್ಲಿ ದಾಖಲಾಗಿದ್ದರೆ, ಅವರೆದುರಲ್ಲೇ ವೈದ್ಯರ ದಿರಿಸಿನಲ್ಲೇ ವಧೂ- ವರರು ತಮ್ಮ ಹಿರಿಯರ ಸಮ್ಮುಖದಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ವೈದ್ಯಕೀಯ ಕಾಲೇಜಿನ ವೈದ್ಯರ ಸಹಕಾರದೊಂದಿಗೆ ಇಕ್ಬಾಲ್ ಅವರ ಆಸೆಯನ್ನು ನೆರವೇರಿಸಲಾಗಿದೆ. ಎರಡೂ ಕುಟುಂಬದ ಪ್ರಮುಖರು ಐಸಿಯುನಲ್ಲಿ ಮಾಸ್ಕ್ ಧರಿಸಿಕೊಂಡು ಮೌಲಾನಾ ಅವರನ್ನು ಕರೆಸಿ ನಿಕಾಹ್ ನಡೆಸಿಕೊಟ್ಟಿದ್ದಾರೆ. ಬೆಡ್ ನಲ್ಲಿ ಅನಾರೋಗ್ಯದಿಂದ ಮಲಗಿದ್ದ ಇಕ್ಬಾಲ್ ಮಗಳ ಮದುವೆಯನ್ನು ನೋಡಿ ಖುಷಿಪಟ್ಟಿದ್ದಾರೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎರಡು ಕುಟುಂಬಗಳ ನಡುವಿನ ಹೊಂದಾಣಿಕೆ ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
A hospital in UP's Lucknow organised an ICU Wedding to fulfill ailing father's wish to see his daughters getting married. pic.twitter.com/qSUf9SAnfH
— Piyush Rai (@Benarasiyaa) June 15, 2024
A unique wedding ceremony took place in the intensive care unit (ICU) of a hospital in Lucknow and the video of it has now gone viral. Mohammad Iqbal, a resident of Lucknow Chowk, found himself hospitalised in critical condition just as his daughters' wedding dates approached. Faced with the difficult situation of their father's illness, the family made a heartfelt decision.
06-10-25 10:47 pm
Bangalore Correspondent
ಕಫ್ ಸಿರಪ್ ದುರಂತ ; ರಾಜ್ಯದಲ್ಲಿ ಕಟ್ಟೆಚ್ಚರ, ಎಲ್ಲ...
06-10-25 05:27 pm
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
06-10-25 07:56 pm
HK News Desk
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
06-10-25 10:42 pm
Mangalore Correspondent
ದಕ್ಷಿಣ ಕನ್ನಡದ 38 ಕಡೆ ಆಯುಷ್ಮಾನ್ ಭಾರತ್- ಆರೋಗ್ಯ...
06-10-25 07:19 pm
ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ...
06-10-25 04:57 pm
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm