ಬ್ರೇಕಿಂಗ್ ನ್ಯೂಸ್
14-06-24 08:16 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 14: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಯಾಗಿರುವುದಕ್ಕೆ ನಾಯಕರ ದುರಹಂಕಾರವೇ ಕಾರಣ ಎಂದು ಮತ್ತೊಬ್ಬ ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಟೀಕಿಸಿದ್ದಾರೆ. ರಾಮನ ಮೇಲೆ ಭಕ್ತಿ ಇಟ್ಟ ಕಾರಣಕ್ಕೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ದೊಡ್ಡ ಪಕ್ಷವಾಗಿಸಿದ. ಆದರೆ ದುರಹಂಕಾರ ತೋರಿದ್ದಕ್ಕಾಗಿ ರಾಮನೇ ಅವರನ್ನು 241ಕ್ಕೆ ಸೀಮಿತಗೊಳಿಸಿದ ಎಂದು ಬಿಜೆಪಿ ಹೆಸರೆತ್ತದೆ ಇಂದ್ರೇಶ್ ಕುಮಾರ್ ಟೀಕಿಸಿದ್ದಾರೆ.
ಜೈಪುರದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಇಂದ್ರೇಶ್ ಕುಮಾರ್ ಈ ಮಾತುಗಳನ್ನಾಡಿದ್ದಾರೆ. ಇತ್ತೀಚೆಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ನಿಜವಾದ ಜನ ಸೇವಕನಿಗೆ ಅಹಂಕಾರ ಇರಬಾರದು ಎಂದು ಹೇಳಿದ ಮಾತುಗಳನ್ನೇ ಉದ್ಧರಿಸುವಂತೆ ಇಂದ್ರೇಶ್ ಕುಮಾರ್ ಟೀಕೆ ಮಾಡಿದ್ದಾರೆ. ಇದೇ ವೇಳೆ, ವಿರೋಧಿ ಇಂಡಿಯಾ ಒಕ್ಕೂಟದ ಹೆಸರೆತ್ತದೆ, ರಾಮನ ಬಗ್ಗೆ ನಂಬಿಕೆ ಇರಿಸದವರು ಎಲ್ಲ ಒಟ್ಟು ಸೇರಿದರೂ ಅವರನ್ನು ಕೇವಲ 234ಕ್ಕೆ ನಿಲ್ಲಿಸಿಬಿಟ್ಟ. ದೇವರ ತೀರ್ಪು ಸತ್ಯವನ್ನು ತೋರಿಸಿದೆ. ನಾವದನ್ನು ಎಂಜಾಯ್ ಮಾಡಬೇಕು ಎಂದು ಇಂಡಿಯಾ ಒಕ್ಕೂಟ 234 ಸ್ಥಾನ ಪಡೆದಿರುವುದನ್ನು ಪರೋಕ್ಷವಾಗಿ ಕುಟುಕಿದ್ದಾರೆ.
ಆರೆಸ್ಸೆಸ್ ನಾಯಕರ ಟೀಕೆಯ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ಆರೆಸ್ಸೆಸ್ ಟೀಕೆಯನ್ನು ಮೋದಿಯವರೇ ಗಂಭೀರವಾಗಿ ಪರಿಗಣಿಸಿಲ್ಲ. ನಾವು ಯಾಕೆ ಸ್ವೀಕರಿಸಬೇಕು. ಸರಿಯಾದ ಸಮಯದಲ್ಲಿ ಇಂಥ ಮಾತುಗಳನ್ನು ಆಡುತ್ತಿದ್ದರೆ ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು. ಹೇಳಬೇಕಿದ್ದ ಸಮಯದಲ್ಲಿ ಸೈಲಂಟ್ ಇದ್ದರು. ಅಧಿಕಾರವನ್ನೂ ಅನುಭವಿಸಿದ್ದರು. ಈಗ ಯಾರು ಅವರ ಮಾತನ್ನು ಕೇಳುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
In signs of an intensifying rift between the Bharatiya Janata Party and its ideological mentor, Rashtriya Swayamsevak Sangh leader Indresh Kumar on Thursday sought to take a critical view of the saffron party’s lower-than-expected Lok Sabha tally, terming it a punishment by Lord Ram over the party’s “arrogance”.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
16-08-25 03:34 pm
HK News Desk
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
16-08-25 11:11 pm
Mangalore Correspondent
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
Dharmasthala Panchayat, RTI: 38 ವರ್ಷಗಳಲ್ಲಿ 27...
16-08-25 04:45 pm
Expert PU College Announces ‘Xcelerate 2025’...
15-08-25 09:04 pm
16-08-25 10:49 pm
Mangalore Correspondent
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm