ಬ್ರೇಕಿಂಗ್ ನ್ಯೂಸ್
12-06-24 06:15 pm HK News Desk ದೇಶ - ವಿದೇಶ
ನವದೆಹಲಿ, ಜೂನ್ 12: ಕುವೈತ್ ದಕ್ಷಿಣ ಭಾಗದ ಮಂಗಾಫ್ ಬ್ಲಾಕ್ ನಲ್ಲಿ ಆರು ಮಹಡಿಯ ಅಪಾರ್ಟ್ಮೆಂಟ್ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿದ್ದು, ಹತ್ತು ಭಾರತೀಯರು ಸೇರಿದಂತೆ 41 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ. ಕುವೈತ್ ಕಾಲಮಾನ ಬೆಳಗ್ಗೆ 5ರಿಂದ 7 ಗಂಟೆಯ ನಡುವೆ ಬೆಂಕಿ ಅವಘಡ ಸಂಭವಿಸಿದೆ.
ಕಿಚನ್ ಕೊಠಡಿ ಒಂದರಲ್ಲಿ ಬೆಂಕಿ ಹತ್ತಿಕೊಂಡಿದ್ದು, ಆನಂತರ, ಇಡೀ ಕಟ್ಟಡಕ್ಕೆ ಪೂರ್ತಿಯಾಗಿ ಬೆಂಕಿ ಆವರಿಸಿದೆ. ಆನಂತರ ಮೇಲ್ಭಾಗಕ್ಕೂ ಬೆಂಕಿ ಹರಡಿದ್ದು, ಜನರು ಭೀತಿಯಿಂದ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಐದನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾರೆ. ಮಹಡಿಯಿಂದ ಕೆಳಕ್ಕೆ ಹಾರಿ ಕೆಲವರು ಪ್ರಾಣ ಕಳಕೊಂಡಿದ್ದಾರೆ. ಮೃತರಲ್ಲಿ ಐವರು ಕೇರಳದ ಮಲಯಾಳಿಗಳಾಗಿದ್ದು, ಒಟ್ಟು ಹತ್ತು ಮಂದಿ ಭಾರತೀಯರು ಸಾವು ಕಂಡಿದ್ದಾರೆ ಎನ್ನುವ ಮಾಹಿತಿಯಿದೆ.

ಬಿಲ್ಡಿಂಗ್ ಕಟ್ಟಡವು ಎನ್ ಬಿಟಿಸಿ ಗ್ರೂಪ್ ಚೇರ್ಮನ್ ಕೇರಳ ಮೂಲದ ಕೆ.ಜಿ.ಅಬ್ರಹಾಂ ಎಂಬವರಿಗೆ ಸೇರಿದ್ದು, 195 ಮಂದಿ ಅವರದೇ ಕಂಪನಿಯ ಕಾರ್ಮಿಕರು ಕಟ್ಟಡದಲ್ಲಿ ವಾಸವಿದ್ದರು. ಇವರಲ್ಲಿ ಕೇರಳ, ತಮಿಳುನಾಡು, ಉತ್ತರ ಭಾರತೀಯರು ಇದ್ದರು. ಬುಧವಾರ ಬೆಳಗ್ಗೆ ಆರು ಗಂಟೆಗೆ ಏಕಾಏಕಿ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿತ್ತು. ಇಡೀ ಕಟ್ಟಡಕ್ಕೆ ಬೆಂಕಿ ಮತ್ತು ಹೊಗೆ ಆವರಿಸಿದ್ದು ಹೆಚ್ಚಿನವರು ಮಲಗಿದ್ದಲ್ಲೇ ಹೊಗೆಯಿಂದ ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ. ಕುವೈತ್ ಉಪ ಪ್ರಧಾನಿ ಬೆಂಕಿ ಘಟನೆ ಸಂಬಂಧಿಸಿ ತನಿಖೆಗೆ ಆದೇಶ ಮಾಡಿದ್ದು, ಅಪಾರ್ಟ್ಮೆಂಟ್ ಕಟ್ಟಡದ ಮಾಲೀಕನನ್ನೂ ಬಂಧಿಸುವಂತೆ ಆದೇಶ ಮಾಡಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಕಾರ್ಮಿಕರು ವಾಸವಿದ್ದ ಕೊಠಡಿ ಒಂದರಲ್ಲಿ ಬೆಳಗ್ಗೆ ನಾಲ್ಕು ಗಂಟೆಯ ವೇಳೆಗೆ ಬೆಂಕಿ ಹತ್ತಿಕೊಂಡಿದೆ. ಅಲ್ಲಿಂದ ಗ್ಯಾಸ್ ಕೊಳವೆಯ ಮೂಲಕ ಇಡೀ ಕಟ್ಟಡಕ್ಕೆ ಬೆಂಕಿ ಆವರಿಸಿದ್ದು, ಪ್ರತಿ ಮನೆಯಲ್ಲೂ ಬೆಂಕಿ ಮತ್ತು ಹೊಗೆ ಆವರಿಸುವಂತೆ ಮಾಡಿದೆ. ಇಡೀ ಕಟ್ಟಡದಲ್ಲಿ ಗ್ಯಾಸ್ ಪೈಪ್ ಲೈನ್ ಇದ್ದುದೇ ಬೆಂಕಿ ದಿಢೀರ್ ಆವರಿಸಲು ಕಾರಣ ಎನ್ನಲಾಗುತ್ತಿದೆ.
The fire broke out at 4:30 am local time in the kitchen of a residential building. By the time authorities were informed at 6 am, the fire had spread rapidly, trapping many inside. According to Kuwait Times, about 160 workers of the same company were residing in the building. A Kerala-based website, Onmanorama, stated that five individuals from Kerala are among the ten Indians who perished in the incident.
06-10-26 10:46 pm
HK News Desk
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
06-10-26 11:04 pm
HK News Desk
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
06-10-26 09:21 pm
HK News Staffer
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
06-10-26 05:36 pm
HK News Staffer
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm