ಬ್ರೇಕಿಂಗ್ ನ್ಯೂಸ್
27-05-24 09:48 pm HK News Desk ದೇಶ - ವಿದೇಶ
ಗುಜರಾತ್, ಮೇ.27: ರಾಜ್ಕೋಟ್ ಟಿಆರ್ಪಿ ಕಿಲ್ಲರ್ ಗೇಮಿಂಗ್ ಝೋನ್ನಲ್ಲಿ ಶನಿವಾರ ಸಂಜೆ ಸಂಭವಿಸಿದ ಮನಕಲಕುವ ಅಗ್ನಿ ದುರಂತದಲ್ಲಿ ಮೃತಪಟ್ಟ 28 ಮಂದಿಯಲ್ಲಿ ಇಬ್ಬರು ನವವಿವಾಹಿತ ದಂಪತಿಯು ಸೇರಿದ್ದಾರೆಂದು ತಿಳಿದುಬಂದಿದೆ. ಅಲ್ಲದೆ, ವಧುವಿನ ಸಹೋದರಿಯೂ ಕೂಡ ಈ ದುರಂತದಲ್ಲಿ ಮೃತಪಟ್ಟಿದ್ದಾರೆ.
ಮೃತಪಟ್ಟ ದಂಪತಿಯನ್ನು ಅಕ್ಷಯ್ ಧೋಲಾರಿಯಾ ಮತ್ತು ಪತ್ನಿ ಖ್ಯಾತಿ ಎಂದು ಗುರುತಿಸಲಾಗಿದೆ. ಖ್ಯಾತಿ ಸಹೋದರಿ ಹರಿತಾ ಕೊಡ ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚಗಷ್ಟೇ ಅಕ್ಷಯ್ ಮತ್ತು ಖ್ಯಾತಿ ವಿವಾಹ ಸಂಭ್ರಮ ಜರುಗಿತ್ತು. ಮದುವೆ ಬಳಿಕ ಮೋಜು ಮಸ್ತಿಯಲ್ಲಿ ತೊಡಗಿದ್ದ ನವದಂಪತಿ ಟಿಆರ್ಪಿ ಗೇಮಿಂಗ್ ಝೋನ್ಗೆ ಭೇಟಿ ನೀಡಿತ್ತು. ಆದರೆ, ಅಗ್ನಿ ದುರಂತದಲ್ಲಿ ಪ್ರಾಣ ಕಳೆದುಕೊಂಡಿದೆ.
ಕೆನಡಾದಲ್ಲಿ ಪಾಲಕರೊಂದಿಗೆ ವಾಸಿಸುತ್ತಿದ್ದ 24 ವರ್ಷದ ಅಕ್ಷಯ್, 20 ವರ್ಷದ ಖ್ಯಾತಿಯನ್ನು ಮದುವೆಯಾಗಲು ರಾಜ್ಕೋಟ್ಗೆ ಬಂದಿದ್ದರು. ದುರಂತ ಸಂಭವಿಸುವ ಒಂದು ವಾರಕ್ಕೂ ಮೊದಲು ಅಂದರೆ, ಕಳೆದ ಶನಿವಾರ ನ್ಯಾಯಾಲಯದ ಮೂಲಕ ರಿಜಿಸ್ಟರ್ ಮದುವೆ ಆಗಿದ್ದರು. ಈ ವರ್ಷದ ಕೊನೆಯಲ್ಲಿ ಅದ್ಧೂರಿ ಮದುವೆ ಆಚರಣೆಗೆ ಸಮಯ ನಿಗದಿ ಮಾಡಲಾಗಿತ್ತು. ಆದರೆ, ವಿಧಿಯಾಟವೇ ಬೇರೆ ಇತ್ತು. ಇದೀಗ ಅಗ್ನಿ ದುರಂತದಲ್ಲಿ ನವದಂಪತಿ ಸುಟ್ಟು ಕರಕಲಾಗಿದ್ದಾರೆ.
ಇಬ್ಬರ ದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿದ್ದವು. ಉಂಗುರದ ಸಹಾಯದಿಂದ ಅಕ್ಷಯ್ ಅವರ ದೇಹವನ್ನು ಗುರುತಿಸಲಾಗಿದ್ದು, ಖ್ಯಾತಿ ಮತ್ತು ಹರಿತಾ ಅವರ ದೇಹಗಳನ್ನು ಡಿಎನ್ಎ ಪರೀಕ್ಷೆ ಮೂಲಕ ಪತ್ತೆಹಚ್ಚಲಾಯಿತು.
ವಾರಾಂತ್ಯದಲ್ಲಿ ಕೇವಲ 99 ರೂಪಾಯಿ ಪ್ರವೇಶ ಶುಲ್ಕದ ವಿಶೇಷ ಆಫರ್ ಇದ್ದಿದ್ದರಿಂದ ಗೇಮಿಂಗ್ ಝೋನ್ಗೆ ಭಾರಿ ಸಂಖ್ಯೆಯಲ್ಲಿ ಜನರು ಬಂದಿದ್ದರು. ದುರದೃಷ್ಟವಶಾತ್ ಅಗ್ನಿ ಅನಾಹುತಕ್ಕೆ ಅವರೆಲ್ಲರು ಸಾಕ್ಷಿಯಾಗಬೇಕಾಯಿತು. ಬೇಸಿಗೆ ರಜೆಯಾಗಿದ್ದರಿಂದಲೂ ಅಪಾರ ಪ್ರಮಾಣದಲ್ಲಿ ಜನರು ಬಂದಿದ್ದರು. ಗೇಮಿಂಗ್ ಝೋನ್ಗೆ ಕೇವಲ ಒಂದು ಎಕ್ಸಿಟ್ ಡೋರ್ ಇತ್ತು. ಮಾತ್ರವಲ್ಲದೆ ಅಗ್ನಿ ಅವಘಡ ಸ್ಥಳದಲ್ಲಿ ಸೂಕ್ತ ಸುರಕ್ಷತಾ ವ್ಯವಸ್ಥೆ ಇರಲಿಲ್ಲ. ಅಗ್ನಿ ಶಾಮಕ ಪಡೆಯಿಂದ ನಿರಪೇಕ್ಷಣಾ ಸರ್ಟಿಫಿಕೆಟ್ (ಎನ್ಒಸಿ) ಇಲ್ಲದೆಯೇ ಕೇಂದ್ರವನ್ನು ನಡೆಸಲಾಗುತ್ತಿತ್ತು ಎಂದು ಕೂಡ ತಿಳಿದು ಬಂದಿದೆ. ನಿಯಮಾವಳಿಗಳ ಉಲ್ಲಂಘನೆ ಹಲವು ಅಮೂಲ್ಯ ಪ್ರಾಣಹರಣಕ್ಕೆ ಕಾರಣವಾಯಿತು ಎಂದು ಹೇಳಲಾಗಿದೆ.
ದುರಂತದ ಹಿನ್ನೆಲೆಯಲ್ಲಿ ಟಿಆರ್ಪಿ ಪಾಲುದಾರ ನಿತಿನ್ ಜೈನ್ ಮತ್ತು ಮ್ಯಾನೇಜರ್ ಯುವರಾಜ್ ಸಿಂಗ್ ಸೋಳಂಕಿಯನ್ನು ವಿಚಾರಣೆಗಾಗಿ ಪೊಲೀಸರು ಶನಿವಾರವೇ ವಶಕ್ಕೆ ಪಡೆದಿದ್ದಾರೆ.
The fire incident at a gaming zone in Gujarat's Rajkot, in which at least 27 people were killed, also claimed the lives of a newly-married couple and the husband's sister-in-law. Akshay Dholaria, who was studying in Canada, and his wife Khyati Svaliwea were celebrating their court marriage at Rajkot's TRP Game Zone on Saturday evening, along with Khyati's sister Harita, when they fell victim to the massive fire that swept through it.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 09:09 pm
HK News Desk
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
17-08-25 05:26 pm
Mangalore Correspondent
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am