ಬ್ರೇಕಿಂಗ್ ನ್ಯೂಸ್
17-05-24 05:59 pm HK News Desk ದೇಶ - ವಿದೇಶ
ಲಕ್ನೋ, ಮೇ.17: ಎಸ್ಪಿ ಮತ್ತು ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರಾಮನ ಮಂದಿರಕ್ಕೆ ಬುಲ್ಡೋಜರ್ ನುಗ್ಗಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಮಾಜವಾದಿ ಪಾರ್ಟಿಯ ಮುಖಂಡನೊಬ್ಬ ರಾಮ ನವಮಿಯಂದೇ ರಾಮನ ಮಂದಿರ ಉಪಯೋಗಕ್ಕಿಲ್ಲದ್ದು ಎಂದು ಹೇಳುತ್ತಾನೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್, ಸುಪ್ರೀಂ ಕೋರ್ಟಿನ ತೀರ್ಪನ್ನು ರದ್ದುಪಡಿಸುವ ಬಗ್ಗೆ ಮಾತನಾಡುತ್ತದೆ. ಅವರಿಗೆ ಕುಟುಂಬ ಮತ್ತು ಅಧಿಕಾರ ಮಾತ್ರ ಬೇಕು. ಎಸ್ಪಿ ಅಧಿಕಾರಕ್ಕೆ ಬಂದರೆ ರಾಮನ ಮಂದಿರಕ್ಕೆ ಬುಲ್ಜೋಜರ್ ನುಗ್ಗಿಸಿ, ರಾಮನನ್ನು ಮತ್ತೆ ಟೆಂಟಿನಲ್ಲಿ ಕೂರಿಸುವ ಕೆಲಸ ಮಾಡಲಿದ್ದಾರೆ ಎಂದು ಆರೋಪಿಸಿದ ಮೋದಿ, ಆದರೆ ಬುಲ್ಡೋಜರ್ ಎಲ್ಲಿಗೆ ನುಗ್ಗಿಸಬೇಕು ಎನ್ನುವುದನ್ನು ಕಾಂಗ್ರೆಸ್ ಮತ್ತು ಎಸ್ಪಿ ನಾಯಕರು ಉತ್ತರ ಪ್ರದೇಶದ ಸಿಎಂ ಯೋಗಿ ಬಳಿ ಕಲಿಯಬೇಕು ಎಂದು ಹೇಳಿದ್ದಾರೆ.
ಎಸ್ಪಿ- ಕಾಂಗ್ರೆಸ್ ಪಾಲಿಗೆ ವೋಟ್ ಬ್ಯಾಂಕಿಗಿಂತ ಮೇಲಿನದ್ದು ಯಾವುದೂ ಇಲ್ಲ. ತುಷ್ಟೀಕರಣಕ್ಕಾಗಿಯೇ ಶರಣಾಗತಿ ಮಾಡಿಕೊಂಡಿದೆ. ಮೋದಿ ಈ ದೇಶಕ್ಕೆ ತುಷ್ಟೀಕರಣ ರಾಜಕೀಯದ ಸತ್ಯವನ್ನು ಹೇಳುತ್ತಿದ್ದರೆ, ಎಸ್ಪಿ- ಕಾಂಗ್ರೆಸ್ ಮಾತ್ರ ಮೋದಿ ಹಿಂದು- ಮುಸ್ಲಿಮರನ್ನು ಒಡೆಯುತ್ತಿದ್ದಾರೆ ಎಂದು ದೂರುತ್ತಿದೆ. ಇವರ ವೋಟ್ ಬ್ಯಾಂಕ್ ರಾಜಕೀಯವನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಮುಸ್ಲಿಂ ಸೋದರಿಯರು ಮತ್ತು ತಾಯಂದಿರು ತ್ರಿಪಲ್ ತಲಾಖ್ ನಿಷೇಧದಿಂದ ಸಂತಸಗೊಂಡಿದ್ದು, ಬಿಜೆಪಿಯನ್ನು ಹರಸಲಿದ್ದಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಸರ್ಕಾರ ಮತ್ತೆ ಗೆಲುವು ಸಾಧಿಸುವುದನ್ನು ತಿಳಿದು ಇಂಡಿಯಾ ಒಕ್ಕೂಟ ನಡುಗುತ್ತಿದೆ. ಜೂನ್ 4ರ ದಿನ ಹೆಚ್ಚು ದೂರವಿಲ್ಲ. ಇಡೀ ಜಗತ್ತು ನೋಡುತ್ತಿದೆ, ಮೋದಿ ಸರಕಾರ ಹ್ಯಾಟ್ರಿಕ್ ಆಗುವುದನ್ನು ಕಾಯುತ್ತಿದೆ ಎಂದು ಮೋದಿ ಹೇಳಿದ್ದಾರೆ.
Prime Minister Narendra Modi on Friday claimed that the Congress and Samajwadi Party would bulldoze the Ram temple if elected to power. He suggested they take “tuition” from Uttar Pradesh Chief Minister Yogi Adityanath on “where to run bulldozers.” The Prime Minister made the comment while addressing an election rally in Barabanki, Uttar Pradesh.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 09:09 pm
HK News Desk
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
17-08-25 11:06 pm
Mangalore Correspondent
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am