ಬ್ರೇಕಿಂಗ್ ನ್ಯೂಸ್
14-05-24 11:47 am HK News Desk ದೇಶ - ವಿದೇಶ
ಮುಂಬೈ, ಮೇ.14: ಬಿರುಗಾಳಿ ಸಹಿತ ಮಳೆಯ ಅವಾಂತರಕ್ಕೆ ಸೋಮವಾರ ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಪೆಟ್ರೋಲ್ ಬಂಕ್ ಮೇಲೆ ದೈತ್ಯ ಜಾಹೀರಾತು ಫಲಕ ಬಿದ್ದು 14 ಮಂದಿ ಬಲಿಯಾಗಿದ್ದು , 74 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.
ನಗರದಲ್ಲಿ ಸೋಮವಾರ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು ಹಲವೆಡೆ ಮರಗಳು ಧರೆಗುರುಳಿವೆ, ಅಲ್ಲದೆ ಜನಜೀವನ ಅಸ್ತವ್ಯಸ್ತಗೊಂಡಿದೆ, ಇದೆ ವೇಳೆ ಪಂತನಗರದ ಈಸ್ಟರ್ನ್ ಎಕ್ಸ್ಪ್ರೆಸ್ ಹೆದ್ದಾರಿಯ ಬಳಿ ಇರುವ ಪೆಟ್ರೋಲ್ ಬಂಕ್ ಮೇಲೆ ಅತೀ ದೊಡ್ಡ ಹೋರ್ಡಿಂಗ್ ಕುಸಿದು ಬಿದ್ದ ಪರಿಣಾಮ ಪೆಟ್ರೋಲ್ ಬಂಕ್ ಸೇರಿದಂತೆ ಹಲವಾರು ಕಾರುಗಳ ಮೇಲೆ ಬಿದ್ದಿದೆ ಪರಿಣಾಮ ಎಪ್ಪತ್ತಕ್ಕೂ ಹೆಚ್ಚು ಮಂದಿ ಅವಶೇಷಗಳಿ ಸಿಲುಕಿದ್ದರು ಕೂಡಲೇ ಕಾರ್ಯಪ್ರವೃತ್ತರಾದ ರಕ್ಷಣಾ ತಂಡ ಅವಶೇಷಗಳಡಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಈ ಅವಘಡದಲ್ಲಿ ಇದುವರೆಗೆ ಸುಮಾರು ಹದಿನಾಲ್ಕು ಮಂದಿ ಮೃತಪಟ್ಟಿದ್ದಾರೆ ಜೊತೆಗೆ 74 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಹದಿನಾಲ್ಕು ಜನರ ಜೀವ ತೆಗೆದುಕೊಂಡ ಹೋರ್ಡಿಂಗ್ಸ್ ಅಳವಡಿಸಿದ್ದ ಅದರ ಮಾಲೀಕ ಭವೇಶ್ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭವೇಶ್ ಭಿಂಡೆ ಇಗೋ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಿತಿಗಿಂತ ದೊಡ್ಡ ಪ್ರಮಾಣದಲ್ಲಿ ಹೋರ್ಡಿಂಗ್ ಹಾಕಿದ್ದ ಏಜೆನ್ಸಿಗೆ ಮುಂಬೈ ಮಹಾನಗರ ಪಾಲಿಕೆ ನೋಟಿಸ್ ಜಾರಿ ಮಾಡಿದೆ. ಮುಂಬೈ ಮಹಾನಗರ ಪಾಲಿಕೆಯ ಸೂಚನೆಯಂತೆ ಗರಿಷ್ಠ 40×40 ಚದರ ಅಡಿ ಗಾತ್ರದ ಹೋರ್ಡಿಂಗ್ ಅಳವಡಿಕೆಗೆ ಅವಕಾಶ ನೀಡಲಾಗಿತ್ತು ಆದರೆ ನಿನ್ನೆ ಕುಸಿದು ಬಿದ್ದಿರುವ ಹೋರ್ಡಿಂಗ್ಸ್ 120×120 ಚದರ ಅಡಿ ಗಾತ್ರದ್ದಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುಂಬಯಿಯಲ್ಲಿ ಇದೆ ರೀತಿಯ ನಾಲ್ಕು ಹೋರ್ಡಿಂಗ್ ಇಗೋ ಮೀಡಿಯಾ ನಿರ್ಮಿಸಿದ್ದೆ ಆದ್ರೆ ಮಹಾನಗರ ಪಾಲಿಕೆಯಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ಹೇಳಲಾಗಿದೆ.
ರುಚಿಗೆದ್ದ ಜನ;
ಇನ್ನು ರುಚಿಗೆದ್ದ ಜನ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಕ್ಯಾಕರಿಸಿ ಉಗಿದಿದ್ದಾರೆ. 14 ಮಂದಿ ಸತ್ತ ನಂತರ ಇದು ಅನಧಿಕೃತ ಬ್ಯಾನರ್ ಎಂದು ಘೋಷಿಸುವ ನೀವು ಇದರ ಮುಂಚೆ ಏನು ಮಾಡುತ್ತಿದ್ದೀರಿ, ನಿಮ್ಮ ಸಿಬ್ಬಂದಿಗಳು ಏನ್ ದನ ಕಾಯ್ತಿದ್ರಾ, ಪ್ರತಿ ತಿಂಗಳು ಅವ್ರು ಕೊಡೊ ಲಂಚದ ದುಡ್ಡು ಚೆನ್ನಾಗಿ ತಿಂದು ಇಲ್ಲಿ ಬಂದು ನಾಟಕ ಆಡ್ತೀರಾ? ಎಂದು ಸ್ಥಳ ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಜೋರು ಮಳೆ ;
ಜೋರು ಮಳೆ ಸುರಿದ ಪರಿಣಾಮ ಮುಂಬೈ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಯಿತು. ಮುಂಬೈ ವಿಮಾನ ನಿಲ್ದಾಣದಲ್ಲಿ ಸೋಮವಾರ ವಿಮಾನ ಕಾರ್ಯಾಚರಣೆ ಯನ್ನು ಒಂದು ಗಂಟೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ನಗರದಲ್ಲಿ ರೈಲು ಸಂಚಾರದಲ್ಲೂ ವ್ಯತ್ಯಯವಾಯಿತು.
ಪ್ರತಿಕೂಲದ ಹವಾಮಾನದಿಂದಾಗಿ 15 ವಿಮಾನಗಳನ್ನು ಬೇರೆ ನಿಲ್ದಾಣ ಗಳತ್ತ ಮಾರ್ಗ ಬದಲಾಯಿಸಲು ಸೂಚಿಸ ಲಾಯಿತು. ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯು ಸಂಜೆ 5.30ಕ್ಕೆ ಪುನರಾರಂಭಗೊಂಡಿತು ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದರು.
At least 14 people were killed and 74 injured after a giant billboard fell on a fuel station in Mumbai's Ghatkopar area on Monday. The incident happened due to strong dust storms followed by heavy rain which caused mayhem in the city.
06-10-25 10:47 pm
Bangalore Correspondent
ಕಫ್ ಸಿರಪ್ ದುರಂತ ; ರಾಜ್ಯದಲ್ಲಿ ಕಟ್ಟೆಚ್ಚರ, ಎಲ್ಲ...
06-10-25 05:27 pm
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
07-10-25 01:53 pm
HK News Desk
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
07-10-25 03:33 pm
Mangalore Correspondent
Madhu Bangarappa: ರಾಜ್ಯದಲ್ಲಿ 18,500ಕ್ಕೂ ಅಧಿಕ...
06-10-25 10:42 pm
ದಕ್ಷಿಣ ಕನ್ನಡದ 38 ಕಡೆ ಆಯುಷ್ಮಾನ್ ಭಾರತ್- ಆರೋಗ್ಯ...
06-10-25 07:19 pm
ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ...
06-10-25 04:57 pm
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
07-10-25 10:31 am
HK News Desk
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm