ಬ್ರೇಕಿಂಗ್ ನ್ಯೂಸ್
24-04-24 05:01 pm HK News Desk ದೇಶ - ವಿದೇಶ
ರಾಜಸ್ಥಾನ, ಏ.24: ಇನ್ನೇನು ಕೆಲವೇ ಗಂಟೆಯಲ್ಲಿ ಹಸೆಮಣೆ ಏರಬೇಕಿದ್ದ ವರನೋರ್ವ ಮದುವೆಯ ಮೊದಲ ನಡೆಯುವ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶಿಸಿ ಇಹಲೋಕ ತ್ಯಜಿಸಿದ ಆಘಾತಕಾರಿ ಘಟನೆ ರಾಜಸ್ಥಾನದ ಕೋಟಾ ನಗರದ ನಂಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಮೂಲತಃ ಕೋಟಾ ನಗರದ ಕೇಶವಪುರ ನಿವಾಸಿಯಾದ ಸೂರಜ್ ಸಕ್ಸೇನಾ (30) ಎಂದು ಗುರುತಿಸಲಾಗಿದೆ.

ಕೋಟಾ ನಗರದ ಕೇಶವಪುರ ನಿವಾಸಿಯಾದ ಸೂರಜ್ ಸಕ್ಸೇನಾ ಅವರ ವಿವಾಹ ಏಪ್ರಿಲ್ 24 ರಂದು ನಿಶ್ಚಯವಾಗಿತ್ತು ಅದರಂತೆ ಬುಧವಾರ ಬಂಡಿ ರಸ್ತೆಯಲ್ಲಿರುವ ಮೆನಾಲ್ ರೆಸಿಡೆನ್ಸಿ ರೆಸಾರ್ಟ್‌ನಲ್ಲಿ ವಿವಾಹ ಸಮಾರಂಭ ಆಯೋಜಿಸಲಾಗಿತ್ತು, ಈ ಶುಭ ಕಾರ್ಯಕ್ರಮಕ್ಕೆ ಎಲ್ಲ ಸಿದ್ದತೆಗಳು ನಡೆದಿತ್ತು ಅದರಂತೆ ಸೋಮವಾರ ಮದುವೆಯ ಮೊದಲ ಶಾಸ್ತ್ರವಾದ ಹಳದಿ ಶಾಸ್ತ್ರ ನಡೆಯುತ್ತಿತ್ತು ಈ ವೇಳೆ ಹಳದಿ ಸಂಭ್ರಮದಲ್ಲಿದ್ದ ವರ ಅಲ್ಲೇ ಇದ್ದ ಈಜುಕೊಳದ ಬಳಿ ನಡೆದುಕೊಂಡು ಹೋಗಿದ್ದಾನೆ ಅಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದ ಕಬ್ಬಿಣದ ಕಂಬವನ್ನು ಮುಟ್ಟಿದ್ದಾನೆ ಈ ವೇಳೆ ಆತನಿಗೆ ಒಮ್ಮೆಲೇ ವಿದ್ಯುತ್ ಶಾಕ್ ಹೊಡೆದು ಕುಸಿದು ಬಿದ್ದಿದ್ದಾನೆ ಇದನ್ನು ಕಂಡ ಅಲ್ಲಿದ್ದವರು ಓಡಿ ಬಂದು ಸೂರಜ್ ನನ್ನು ಉಪಚರಿಸಿದ್ದಾರೆ ಆದರೆ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದ ಸೂರಜ್ ಪ್ರಜ್ಞೆ ತಪ್ಪಿದ್ದ, ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿತಾದರೂ ಅಷ್ಟೋತ್ತಿಗಾಗಲೇ ಸೂರಜ್ ಪ್ರಾಣ ಪಕ್ಷಿ ಹಾರಿಹೋಗಿತ್ತು,
ಇತ್ತ ಸೂರಜ್ ಮೃತಪಟ್ಟ ವಿಚಾರ ತಿಳಿಯುತ್ತಲೇ ಕುಟುಂಬದಲ್ಲಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ ಅಷ್ಟು ಮಾತ್ರವಲ್ಲದೆ ವಧುವಿನ ಮನೆಯಲ್ಲೂ ನೀರವ ಮೌನ ಆವರಿಸಿದೆ.
ಮದುವೆಯ ಸಂಭ್ರಮದಲ್ಲಿದ್ದ ಎರಡೂ ಮನೆಯಲ್ಲೂ ನೀರವ ಮೌನ, ಬದುಕಿ ಬಾಳಬೇಕಿದ್ದ ಜೀವ ಸಣ್ಣ ವಯಸ್ಸಿನಲ್ಲೇ ಕೊನೆಗೊಂಡಿದ್ದು ವಿಧಿಯ ವಿಪರ್ಯಾಸವೇ ಸರಿ. ಘಟನೆ ಸಂಬಂಧ ನಂಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Just hours before tying the nuptial knot, a 30-year-old man died of an electric shock during his ‘haldi’ ceremony in a hotel here on Tuesday, police said.
06-10-26 10:46 pm
HK News Desk
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
06-10-26 11:04 pm
HK News Desk
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
06-10-26 09:21 pm
HK News Staffer
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
07-10-26 11:12 am
HK News Staffer
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm