ಬ್ರೇಕಿಂಗ್ ನ್ಯೂಸ್
02-04-24 10:55 pm HK News Desk ದೇಶ - ವಿದೇಶ
ಜೈಪುರ, ಎ.2: ಮೋಜು ಮಾಡುವುದಕ್ಕೆ ನಾನು ಈ ದೇಶದಲ್ಲಿ ಹುಟ್ಟಿ ಬಂದಿಲ್ಲ. ದೇಶಕ್ಕಾಗಿ ದುಡಿಯುವುದಕ್ಕಾಗಿಯೇ ಹುಟ್ಟಿ ಬಂದಿದ್ದೇನೆ. ಏನಂದುಕೊಂಡಿದ್ದೇನೋ, ಅದನ್ನು ಮಾಡಿಯೇ ತೀರುತ್ತೇನೆ. ನೀವೇನು ಕಳೆದ ಹತ್ತು ವರ್ಷಗಳಲ್ಲಿ ನೋಡಿದ್ದೀರೋ, ಅದು ಜಸ್ಟ್ ಟ್ರೈಲರ್ ಅಷ್ಟೇ. ನೈಜ ಪಿಕ್ಚರ್ ಏನಿದೆಯೋ ಅದನ್ನು ಮುಂದೆ ನೋಡಲಿದ್ದೀರಿ... ಹೀಗೆಂದು ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದಲ್ಲಿ ಅಬ್ಬರಿಸಿದ್ದಾರೆ.
ಲೋಕಸಭೆ ಚುನಾವಣೆಗೆ ರಾಜಸ್ಥಾನದ ಜೈಪುರ್ ಬಳಿಯ ಕೋಟ್ ಪುತಲೀ ನಗರದಲ್ಲಿ ಮೋದಿ ಪ್ರಚಾರ ಅಭಿಯಾನ ಆರಂಭಿಸಿದ್ದು ಕಾಂಗ್ರೆಸಿನವರು ದೇಶದಲ್ಲಿ ಬಿಜೆಪಿ ಮತ್ತೆ ಗೆದ್ದು ಬಂದರೆ ಬೆಂಕಿ ಬೀಳುತ್ತದೆ ಎಂದು ಭಯ ಹುಟ್ಟಿಸುತ್ತಿದ್ದಾರೆ. ಕಾಂಗ್ರೆಸ್ ಚುನಾವಣೆ ಸ್ಪರ್ಧಿಸೋದು ಕೇವಲ ಅವರ ಕುಟುಂಬ ಬೆಳೆಸುವುದಕ್ಕಷ್ಟೇ ಆಗಿರುತ್ತದೆ. ಬಿಜೆಪಿ ಉದ್ದೇಶ ದೇಶಕ್ಕಾಗಿ ಮತ್ತು ಜನರಿಗಾಗಿ ಆಗಿರುತ್ತದೆ ಎಂದರು.
ಇದೇ ಮೊದಲ ಬಾರಿಗೆ ಕಾಂಗ್ರೆಸ್ ಸೇವ್ ಕರಪ್ಶನ್ ಎನ್ನುತ್ತಿದೆ. ಬಿಜೆಪಿ ರಿಮೂವ್ ಕರಪ್ಶನ್ ಅಂತ ಹೇಳುತ್ತದೆ. ಇದೇ ವೇಳೆ, ಕಾಂಗ್ರೆಸಿನವರು ತಾವು ಚುನಾವಣೆಯಲ್ಲಿ ಜಯ ಗಳಿಸುವ ಬಗ್ಗೆ ಮಾತಾಡುತ್ತಿಲ್ಲ. ಬದಲಿಗೆ, ದೇಶದಲ್ಲಿ ಭಯ, ಭೀತಿ ಹಬ್ಬಿಸುತ್ತಿದ್ದಾರೆ. ಬಿಜೆಪಿ ಗೆದ್ದರೆ ದೇಶದಲ್ಲಿ ಬೆಂಕಿ ಬೀಳುತ್ತೆ ಎಂದು ಭಯ ಹುಟ್ಟಿಸುತ್ತಿದ್ದಾರೆ. ದೇಶದ ರಾಜಕೀಯ ಎರಡು ಕ್ಯಾಂಪಿನಲ್ಲಿ ನಿಂತಿದೆ. ಒಂದ್ಕಡೆ ಬಿಜೆಪಿ ದೇಶವೇ ಫಸ್ಟ್ ಅಂತಿದ್ದರೆ, ಕಾಂಗ್ರೆಸ್ ಲೂಟಿ ಮಾಡುವುದೇ ಫಸ್ಟ್ ಎನ್ನುತ್ತಿದೆ. ಮೋದಿ ಸರಕಾರ ಈ ಹಿಂದಿನ ಸರಕಾರ ಕನಸಿನಲ್ಲೂ ಎಣಿಸದ ಕೆಲಸಗಳನ್ನು ಮಾಡಿ ತೋರಿಸಿದೆ. ಮೋದಿ ಸರಕಾರ 20 ಸಾವಿರ ಕೋಟಿ ಮೊತ್ತವನ್ನು ರಾಜಸ್ಥಾನದಲ್ಲಿ ಕೇವಲ 85 ಲಕ್ಷ ರೈತರ ಖಾತೆಗಳಿಗೆ ಹಂಚಿದೆ. ಇದು ಕ್ರಾಂತಿಕಾರಿ ನಡೆ ಎಂದರು ಮೋದಿ.
ಇಂದು ಬಿಜೆಪಿ ಎಂದರೆ ಅಭಿವೃದ್ಧಿ, ದೇಶದ ಉದ್ಧಾರ ಎಂಬ ಭಾವನೆ ಜನರಲ್ಲಿ ಬಂದಿದೆ. ಆದರೆ ಕಾಂಗ್ರೆಸ್ ದೇಶದ ಎಲ್ಲ ಸಮಸ್ಯೆಗಳಿಗೆ ಮೂಲ ಎಂದು ಜನ ಭಾವಿಸಿದ್ದಾರೆ. ಸ್ವಾತಂತ್ರ್ಯಾನಂತರ ಏಳು ದಶಕಗಳ ಕಾಲ ದೇಶ ಬಡತನದಲ್ಲಿತ್ತು. ಅದಕ್ಕೆ ಕಾಂಗ್ರೆಸ್ ಕಾರಣ. ದೇಶ ಆತ್ಮನಿರ್ಭರವಾಗಲು ಅವಕಾಶವನ್ನೇ ನೀಡಿಲ್ಲ. ಸೇನೆಗೂ ಸ್ವಾವಲಂಬಿಯಾಗಲು ಅವಕಾಶ ನೀಡಿಲ್ಲ. ಈಗ ನಮ್ಮ ದೇಶದ ಸೇನೆಯೇ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ಹಂತಕ್ಕೆ ಬಂದಿದೆ. ಕಳೆದ ಸಾಲಿನಲ್ಲಿ 21 ಸಾವಿರ ಕೋಟಿ ಮೊತ್ತದ ಶಸ್ತ್ರಾಸ್ತ್ರಗಳನ್ನು ವಿದೇಶಕ್ಕೆ ರಫ್ತು ಮಾಡಿದೆ. ಇದು ಮೋದಿ ಸರಕಾರದಿಂದ ಆಗಿರುವ ಬದಲಾವಣೆ ಎಂದು ಹೇಳಿದರು.
Prime Minister Narendra Modi said that his birth is not for enjoyment but to work hard for the welfare of the country, adding that his resolve is to fulfil the dream of the people.While addressing the Vijay Shankhnad rally in Kotputli, PM Modi said, "Modi mauj karne ke liye paida nahi hua. Modi toh mehnat karne ke liye paida hua hai. A lot must have happened but whatever has happened in the last ten years is just a trailer..."
18-08-25 01:25 pm
Bangalore Correspondent
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
18-08-25 01:28 pm
HK News Desk
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
18-08-25 04:07 pm
Mangalore Correspondent
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am