ಬ್ರೇಕಿಂಗ್ ನ್ಯೂಸ್
27-03-24 01:59 pm HK News Desk ದೇಶ - ವಿದೇಶ
ನವದೆಹಲಿ, ಮಾ.27: ದೇಶದ ಅಭಿವೃದ್ಧಿಯ ಕುರಿತಾಗಿ ರಾಜಕಾರಣಿಗಳ ಪ್ರಚೋದನಾತ್ಮಕ ಮಾತುಗಳನ್ನು ನಂಬಬೇಡಿ. ಈ ರೀತಿಯ ಮಾತುಗಳನ್ನು ನಂಬುವುದೇ ಭಾರತೀಯರು ಮಾಡುತ್ತಿರುವ ಬಹುದೊಡ್ಡ ತಪ್ಪು ಎಂದು ಪ್ರಸಿದ್ಧ ಆರ್ಥಿಕ ತಜ್ಞ, ಮಾಜಿ ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಆರ್ಥಿಕತೆ ಬಗ್ಗೆ ರಾಜಕಾರಣಿಗಳು ಹೇಳುತ್ತಿರುವ ಹೈಪ್ ಮಾತುಗಳು ನಿಜವಾಗಲು ತುಂಬ ವರ್ಷಗಳ ಕಠಿಣ ಪರಿಶ್ರಮ ಬೇಕಾಗಬಹುದು. ಆದರೆ ಕೆಲವು ರಾಜಕಾರಣಿಗಳು ಇದೇ ಸತ್ಯವೆಂದು ಜನರನ್ನು ತಮ್ಮ ಮಾತುಗಳಿಂದ ನಂಬಿಸುತ್ತಿದ್ದಾರೆ. ಅಂತಹ ಮಾತುಗಳನ್ನು ನಂಬುತ್ತಿರುವುದೇ ಭಾರತೀಯರು ಮಾಡುತ್ತಿರುವ ದೊಡ್ಡ ತಪ್ಪು ಎಂದವರು ಹೇಳಿದ್ದಾರೆ.
ಚುನಾವಣೆ ಬಳಿಕ ಅಧಿಕಾರಕ್ಕೆ ಬರುವವರಿಗೆ ಶಿಕ್ಷಣವನ್ನು ಉತ್ತಮಗೊಳಿಸುವುದು ಮತ್ತು ಶಿಕ್ಷಣ ಮುಗಿಸಿ ಪರಿಶ್ರಮಿಗಳನ್ನು ಹೊರಗೆ ತರಬೇಕಾದ ಬಹುದೊಡ್ಡ ಸವಾಲು ಇದೆ. ಇಂತಹ ಮಾನದಂಡಗಳನ್ನು ಅನುಸರಿಸದೇ ಇದ್ದಲ್ಲಿ ಭಾರತದ ಯುವಜನಾಂಗ ಮುಂದೆ ಕಷ್ಟ ಪಡಬೇಕಾಗಬಹುದು ಎಂದಿದ್ದಾರೆ.
2047ರಲ್ಲಿ ಅಭಿವೃದ್ಧಿಗೊಂಡ ರಾಷ್ಟ್ರವಾಗಬೇಕೆಂದು ಮೋದಿ ಟಾರ್ಗೆಟ್ ನೀಡಿರುವುದನ್ನು ನಾನ್ ಸೆನ್ಸ್ ಎಂದಿರುವ ರಘುರಾಮ್ ರಾಜನ್, ನಿಮ್ಮ ಅದೆಷ್ಟೋ ಮಕ್ಕಳಿಗೆ ಉತ್ತಮ ಶಿಕ್ಷಣವೇ ಸಿಗುತ್ತಿಲ್ಲ. ಬಡತನ ಕಾರಣದಿಂದ ಶಾಲೆಯಿಂದ ಹೊರಗುಳಿಯುವೇ ರೇಟಿಂಗ್ ಹೆಚ್ಚಿರುವಾಗ ಇಂತಹದ್ದನ್ನೆಲ್ಲ ಒಪ್ಪಿಕೊಳ್ಳುವ ಹಾಗಿಲ್ಲ. ನಾವು ಖಂಡಿತವಾಗಿಯೂ ಅಭಿವೃದ್ಧಿಯ ಗತಿಯಲ್ಲಿದ್ದೇವೆ. ಆದರೆ ಯುವಜನಾಂಗ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗ ಪಡೆಯುತ್ತಿದ್ದರೆ ಮಾತ್ರ ಇದನ್ನೆಲ್ಲ ಹೇಳಿಕೊಳ್ಳಬಹುದು. ವಾಸ್ತವ ಹೇಳಬೇಕಿದ್ದರೆ ನಾವು ವಿಷಾದಕರ ಸ್ಥಿತಿಯಲ್ಲಿದ್ದೇವೆ ಎಂದಿದ್ದಾರೆ.
ಭಾರತ ಅತಿ ವೇಗದಲ್ಲಿ ಬೆಳವಣಿಗೆ ಹೊಂದುತ್ತಿರುವುದರಿಂದ ವಿದೇಶಿಗರು ಹೂಡಿಕೆಯತ್ತ ಆಸಕ್ತಿ ತೋರುತ್ತಿದ್ದಾರೆ. ಹಾಗಂತ, ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಭಾರತ ಸರಕಾರದ ಬಜೆಟ್ ನೀತಿಗಳಲ್ಲಿ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡುವ ಬದಲು ಚಿಪ್ ಸಬ್ಸಿಡಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಸೆಮಿ ಕಂಡಕ್ಟರ್ ಉದ್ಯಮ ಸ್ಥಾಪನೆಗೆ ನಾವು 76 ಸಾವಿರ ಕೋಟಿ ಸಬ್ಸಿಡಿ ನೀಡುತ್ತಿದ್ದರೆ, ಉನ್ನತ ಶಿಕ್ಷಣಕ್ಕೆ 46 ಸಾವಿರ ಕೋಟಿ ವ್ಯಯ ಮಾಡುತ್ತಿದ್ದೇವೆ. ಚಿಪ್ ತಯಾರಿಸುವ ಉದ್ಯಮಗಳ ಸ್ಥಾಪನೆಗೆ ಆಸಕ್ತಿ ತೋರುತ್ತಿದ್ದಾರೆ. ಆದರೆ ನಮ್ಮಲ್ಲಿ ಚಿಪ್ ತಯಾರಿಸವುದು ಹೇಗೆ ಎಂಬುದನ್ನು ತಿಳಿಯುವ ಇಂಜಿನಿಯರ್ ಗಳ ಉತ್ಪಾದನೆಗೆ ಆಸಕ್ತಿ ತೋರುತ್ತಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
Former Reserve Bank of India Governor and well-known economist Raghuram Rajan said India is making a mistake believing the hype around its strong economic growth. Rajan’s comment came during an interview with Bloomberg News, where he said there are significant structural problems that need to be fixed for the country to meet its potential.
18-08-25 01:25 pm
Bangalore Correspondent
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
18-08-25 01:28 pm
HK News Desk
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
18-08-25 06:14 pm
Mangalore Correspondent
Unidentified Girl Body Found, Dharmasthala, R...
18-08-25 04:07 pm
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am