ಬ್ರೇಕಿಂಗ್ ನ್ಯೂಸ್
20-03-24 11:20 am HK News Desk ದೇಶ - ವಿದೇಶ
ಆಳಪ್ಪುಝ, ಮಾ.20: ಕೇರಳದ ಆಳಪ್ಪುಝ ಜಿಲ್ಲೆಯ ಪೂರಕ್ಕಾಡ್ ಎಂಬಲ್ಲಿ ಸಮುದ್ರ ತೀರದಿಂದ 50 ಮೀಟರ್ ಒಳಕ್ಕೆ ಹೋಗಿದ್ದು, ದಿಢೀರ್ ಆಗಿ ಉಂಟಾದ ವಿದ್ಯಮಾನದಿಂದ ಜನರು ಅಚ್ಚರಿಗೀಡಾಗಿದ್ದಾರೆ.
ಮಂಗಳವಾರ ಬೆಳಗ್ಗೆ ಸಮುದ್ರ ತೀರದಿಂದ 50 ಮೀಟರ್ ದೂರಕ್ಕೆ ಸಾಗಿತ್ತು. ಪೂರಕ್ಕಾಡ್ ಬೀಚ್ ಏರಿಯಾದ ಅಯ್ಯಂಕೋಲಿಕ್ಕಾಲ್ ನಿಂದ ಎಸ್ ಡಿವಿ ಸ್ಕೂಲ್ ವರೆಗೆ 500 ಮೀಟರ್ ವ್ಯಾಪ್ತಿಯಲ್ಲಿ ಸಮುದ್ರ 50 ಮೀಟರ್ ಹಿಂದೆ ಹೋಗಿರುವುದು ವಿಚಿತ್ರ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಬೆಳಗ್ಗೆ 6.30ರ ವೇಳೆಗೆ ಇಂತಹ ವಿದ್ಯಮಾನ ಕಂಡುಬಂದಿದ್ದು, ಜನರು ಸುನಾಮಿ ಬರುತ್ತೆ ಎಂಬ ಭೀತಿಗೆ ಒಳಗಾಗಿದ್ದರು. 2004ರ ಡಿಸೆಂಬರ್ 26ರಂದು ಇಂಡೋನೇಶ್ಯಾದಲ್ಲಿ ಭೂಕಂಪ, ಸುನಾಮಿ ಉಂಟಾಗಿದ್ದಾಗಲೂ ಇದೇ ರೀತಿಯ ವಿದ್ಯಮಾನ ಘಟಿಸಿತ್ತು. ಸಮುದ್ರ ಹಿಂದಕ್ಕೆ ಹೋಗಿದ್ದರಿಂದ ತೀರದಲ್ಲಿ ನಿಲ್ಲಿಸಿದ್ದ ಮೀನುಗಾರಿಕಾ ಬೋಟುಗಳನ್ನು ಸಮುದ್ರಕ್ಕೆ ಒಯ್ಯಲು ಸಾಧ್ಯವಾಗಲಿಲ್ಲ.
ಕೆಲವು ಮೀನುಗಾರರು ಭೀತಿಗೆ ಒಳಪಟ್ಟರೆ, ಕೆಲವೊಬ್ಬರು ಹೆಚ್ಚಿನ ಉಬ್ಬರ ಇದ್ದಾಗ ಈ ರೀತಿಯ ಘಟನೆ ವರ್ಷದಲ್ಲಿ ಕೆಲವೊಮ್ಮೆ ಆಗುತ್ತೆ. ಒಂದೆರಡು ದಿನ ಇರುತ್ತೆ, ಆನಂತರ ಸರಿಯಾಗುತ್ತೆ ಎಂದಿದ್ದಾರೆ. ರಾತ್ರಿ ಹೊತ್ತಿನಲ್ಲಿಯೂ ಇಂತಹ ಘಟನೆಗಳು ಬೇರೆ ಬೇರೆ ಕಡೆ ಆಗಿವೆ ಎಂದು ಸ್ಥಳೀಯರು ಹೇಳಿದ್ದಾರೆ. ವಿಕೋಪ ನಿರ್ವಹಣಾ ಸಮಿತಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಅರಬ್ಬೀ ಸಮುದ್ರದಲ್ಲಿ ಯಾವುದೇ ಭೂಕಂಪ ಉಂಟಾಗಿಲ್ಲ. ಹೀಗಾಗಿ ಸುನಾಮಿ ಬರುವ ಸಾಧ್ಯತೆ ಇಲ್ಲ. ಈ ರೀತಿಯ ಘಟನೆ ಯಾಕಾಗಿ ಸಂಭವಿಸಿದೆ ಎನ್ನುವ ಬಗ್ಗೆ ತನಿಖೆ ನಡೆಸುತ್ತೇವೆ ಎಂದಿದ್ದಾರೆ.
A stretch of the coast near Alappuzha witnessed an unusual phenomenon on Tuesday, where the sea receded from its usual shoreline, leaving a portion of the seabed exposed. The sea receded approximately 50 metres along a half-kilometre stretch from Purakkad to Ayyankovil near Ambalappuzha, raising concerns among the fishing community.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm