ಬ್ರೇಕಿಂಗ್ ನ್ಯೂಸ್
02-03-24 07:20 pm HK News Desk ದೇಶ - ವಿದೇಶ
ನವದೆಹಲಿ, ಮಾ.2: ಲೋಕಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. 16 ರಾಜ್ಯ, ಎರಡು ಕೇಂದ್ರಾಡಳಿತ ಪ್ರದೇಶಗಳ ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. 34 ಹಾಲಿ ಕೇಂದ್ರ ಸಚಿವರನ್ನು ಕಣಕ್ಕಿಳಿಸಿದ್ದು ಮೊದಲ ಪಟ್ಟಿಯಲ್ಲಿ ಹೆಸರು ಘೋಷಿಸಲಾಗಿದೆ.
ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ವಾರಣಾಸಿಯಿಂದ ನರೇಂದ್ರ ಮೋದಿ, ಗಾಂಧಿನಗರ-ಅಮಿತ್ ಶಾ, ರಾಜನಾಥ್ ಸಿಂಗ್-ಲಕ್ನೋ, ಗುನಾ- ಜ್ಯೋತಿರಾಧಿತ್ಯ ಸಿಂಧಿಯಾ, ವಿಧಿಶಾ- ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಲವು ಘಟಾನುಘಟಿ ನಾಯಕರ ಹೆಸರು ಘೋಷಿಸಲಾಗಿದೆ. ಉತ್ತರ ಪ್ರದೇಶದ 51 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಕರ್ನಾಟಕ, ತಮಿಳುನಾಡು ಹಾಗೂ ಓಡಿಶಾದ ಯಾವ ಕ್ಷೇತ್ರಗಳಿಗೂ ಬಿಜೆಪಿ ಅಭ್ಯರ್ಥಿಗಳನ್ನು ಮೊದಲ ಪಟ್ಟಿಯಲ್ಲಿ ಘೋಷಿಸಿಲ್ಲ. ಹೆಚ್ಚಿನ ಕಡೆ ಹೊಸ ಮುಖಗಳಿಗೆ ಮಣೆ ಹಾಕಿದ್ದು ಹಾಲಿ ಸಂಸದರಿಗೆ ಕೊಕ್ ನೀಡಿದೆ. ಪ್ರತಿ ಕ್ಷೇತ್ರದಲ್ಲಿ ಪಕ್ಷದ ಸರ್ವೆ ಮತ್ತು ಕಾರ್ಯಕರ್ತರ ಪ್ರತಿಕ್ರಿಯೆ ಆಧರಿಸಿ ಟಿಕೆಟ್ ಹಂಚಲಾಗಿದೆ.
ಕೇರಳದಲ್ಲಿ 12 ಅಭ್ಯರ್ಥಿಗಳ ಹೆಸರು ಘೋಷಣೆ
ಉತ್ತರ ಪ್ರದೇಶ 51, ಬಂಗಾಳ 20, ಮಧ್ಯಪ್ರದೇಶ 24, ಗುಜರಾತ್ 15, ರಾಜಸ್ಥಾನ 15, ಕೇರಳ 12, ತೆಲಂಗಾಣ 9, ಅಸ್ಸಾಂ 11, ಜಾರ್ಖಂಡ್ 11, ಛತ್ತೀಸ್ಗಢ 6, ದೆಹಲಿ 5, ಅರುಣಾಚಲ 2, ಅಂಡಮಾನ್ ನಿಕೋಬಾರ್ 1, ದಮನ್ ದಿಯು 1, ಗೋವಾ 1, ಜಮ್ಮು ಕಾಶ್ಮೀರ 2, ತ್ರಿಪುರಾ 1, ಉತ್ತರಾಖಂಡ 3 ಸೀಟುಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟವಾಗಿವೆ. ಒಟ್ಟು 26 ಮಹಿಳೆಯರಿಗೆ ಸ್ಥಾನ ನೀಡಲಾಗಿದೆ. ಕೇರಳದ ಕಾಸರಗೋಡು ಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿ ಅಶ್ವಿನಿ ಎಂ.ಎಲ್ ಆಯ್ಕೆಯಾಗಿದ್ದಾರೆ. ಆಲಪ್ಪುಝ ಶೋಭಾ ಸುರೇಂದ್ರನ್, ಅಟ್ಟಿಂಗಾಲ್ ವಿ.ಮುರಲೀಧರನ್, ತಿರುವನಂತಪುರಂ ಕ್ಷೇತ್ರದಲ್ಲಿ ಹಾಲಿ ಸಚಿವ ರಾಜೀವ ಚಂದ್ರಶೇಖರ್ ಅವರನ್ನು ಕಣಕ್ಕಿಳಿಸಲಾಗಿದೆ. ತೃಶೂರ್ ಕ್ಷೇತ್ರದಲ್ಲಿ ಚಿತ್ರನಟ ಸುರೇಶ್ ಗೋಪಿ ಹೆಸರು ಘೋಷಣೆ ಮಾಡಲಾಗಿದೆ.
The Bharatiya Janata Party (BJP) on Saturday released the first list of candidates for the upcoming General Elections, hinting at the party's readiness for the big polls.The BJP, as anticipated, unveiled its initial roster of candidates for the 2024 Lok Sabha election, comprising more than 195 names. Notable figures such as Prime Minister Narendra Modi and 34 Union Ministers and Minister of States feature prominently in this list.
08-03-26 10:17 pm
HK News Staffer
ಟ್ರಂಪ್ ತಾಳಕ್ಕೆ ತಕ್ಕಂತೆ ಕುಣಿಯುವ ಗುಲಾಮ ಮೋದಿ ; ಇ...
08-03-26 07:51 pm
ಯುಪಿಎಸ್ಸಿ ಪರೀಕ್ಷೆಯಲ್ಲಿ ಒಟ್ಟು 958 ಮಂದಿ ತೇರ್ಗಡೆ...
08-03-26 07:38 pm
ಅಮಾನುಷ ಕೃತ್ಯ ; 90 ವರ್ಷದ ಅಜ್ಜಿಯನ್ನೂ ಬಿಡದ ಕಾಮುಕ...
08-03-26 04:47 pm
ಮಾನಹಾನಿ ಸುದ್ದಿಗಳ ಜಾಲತಾಣ ಲಿಂಕ್ ತೆರವು ಕೋರಿ ಕರ್ನ...
08-03-26 03:41 pm
07-03-26 11:58 am
HK News Staffer
ರಾಜಧಾನಿ ಟೆಹ್ರಾನಲ್ಲಿದ್ದ ಅಯತೊಲ್ಲಾ ಖಮೇನಿಗೆ ಸೇರಿದ...
06-03-26 11:04 pm
ಲವ್ ಜಿಹಾದ್ ಕಡಿವಾಣಕ್ಕೆ ಮಹಾರಾಷ್ಟ್ರದಲ್ಲಿ ಹೊಸ ಮಸೂ...
06-03-26 10:58 pm
ಹರ್ಮುಜ್ ಜಲಸಂಧಿ ಅಮೆರಿಕ ಮಿತ್ರ ರಾಷ್ಟ್ರಗಳಿಗೆ ಮಾತ್...
06-03-26 11:40 am
ಮಾರ್ಕ್-48 ಜಗತ್ತಿನ ಅತಿ ಶಕ್ತಿಶಾಲಿ ಜಲಾಂತರ್ಗಾಮಿ ಸ...
06-03-26 09:50 am
07-03-26 11:31 pm
HK News Desk
ಮಂಗಳೂರು ರಿಫೈನರಿ ಸ್ಥಗಿತ ವದಂತಿ ತಳ್ಳಿಹಾಕಿದ ಎಂಆರ್...
07-03-26 10:17 pm
ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ; ಹೆರಿಗೆ ಸ...
07-03-26 09:45 pm
ನೇತ್ರಾವತಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್...
07-03-26 07:20 pm
ಬಜೆಟ್ ನಲ್ಲಿ ಮೀನುಗಾರಿಕೆ ಕ್ಷೇತ್ರಕ್ಕೆ ಬಂಪರ್; ಉಚಿ...
06-03-26 07:01 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm