ಬ್ರೇಕಿಂಗ್ ನ್ಯೂಸ್
18-12-23 11:53 am HK News Desk ದೇಶ - ವಿದೇಶ
ಮುಂಬೈ, ಡಿ.18: ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ, ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ವಿಷ ಪ್ರಾಶನಕ್ಕೊಳಗಾಗಿ ಪಾಕಿಸ್ತಾನದ ಕರಾಚಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಬಿಗಿ ಭದ್ರತೆಯಲ್ಲಿ ಕರಾಚಿಯ ಆಸ್ಪತ್ರೆಗೆ ದಾಖಲಾಗಿದ್ದು, ಕುಟುಂಬಸ್ಥರು ಹೊರತಾಗಿ ಯಾರಿಗೂ ಪ್ರವೇಶ ನೀಡುತ್ತಿಲ್ಲ. ಒಟ್ಟು ವಿಚಾರವನ್ನು ಅತ್ಯಂತ ಗೌಪ್ಯವಾಗಿರಿಸಲಾಗಿದೆ.
65 ವರ್ಷದ ದಾವೂದ್ ಇಬ್ರಾಹಿಂ ಕಳೆದ ಹಲವು ವರ್ಷಗಳಿಂದ ಕರಾಚಿಯ ನಿಗೂಢ ಸ್ಥಳದಲ್ಲಿ ವಾಸವಿದ್ದು, ಇದೀಗ ವಿಷಾಹಾರ ಸೇವನೆಗೆ ಒಳಗಾಗಿದ್ದಾನೆ ಎನ್ನುವ ವದಂತಿ ಹರಡಿದೆ. ಈ ಬಗ್ಗೆ ಪಾಕಿಸ್ತಾನದ ಸರಕಾರವಾಗಲೀ, ಸೇನೆಯಾಗಲೀ ಸುದ್ದಿ ಖಚಿತಪಡಿಸಿಲ್ಲ. ಇಂಡಿಯಾ ಟುಡೇ ಮಾಹಿತಿ ಪ್ರಕಾರ, ಎರಡು ದಿನಗಳ ಹಿಂದೆ ದಾವೂದ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆಸ್ಪತ್ರೆಯ ಒಂದು ಮಹಡಿಯನ್ನು ಪೂರ್ತಿ ಕ್ಲೋಸ್ ಮಾಡಲಾಗಿದ್ದು, ಅದರಲ್ಲಿ ದಾವೂದ್ ಇದ್ದಾನೆಂದು ವರದಿ ಮಾಡಿದೆ. ಮುಂಬೈ ಪೊಲೀಸರು ದಾವೂದ್ ಕುರಿತ ಮಾಹಿತಿ ತಿಳಿಯಲು ಕುಟುಂಬಸ್ಥರನ್ನು ಸಂಪರ್ಕಿಸಿದ್ದಾರೆ.
1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಸೇರಿದಂತೆ ಭಾರತದಲ್ಲಿ ಹಲವಾರು ರೀತಿಯ ವಿಧ್ವಂಸಕ ಕೃತ್ಯಗಳಲ್ಲಿ ದಾವೂದ್ ಕೈವಾಡ ಕಂಡುಬಂದಿತ್ತು. ಹೀಗಾಗಿ ದಾವೂದ್ ಇಬ್ರಾಹಿಂ ನನ್ನು ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಭಾರತದ ತನಿಖಾ ಏಜನ್ಸಿಗಳ ಕಣ್ಣು ತಪ್ಪಿಸಿ ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದ ದಾವೂದ್ ಪತ್ತೆಗಾಗಿ ತನಿಖಾಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರು.
ಇದೀಗ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ವಿಷ ಪ್ರಾಶನಕ್ಕೀಡಾಗಿದ್ದಾನೆಂಬ ಅನುಮಾನ ವ್ಯಕ್ತವಾಗಿದೆ. ಇತ್ತೀಚೆಗೆ ಪಾಕಿಸ್ತಾನದಲ್ಲಿ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರರು ವಿಷ ಪ್ರಾಶನದಿಂದ ನಿಗೂಢ ಸಾವಿಗೀಡಾಗಿದ್ದರು. ಇದರ ಬೆನ್ನಲ್ಲೇ ದಾವೂದ್ ಗಂಭೀರಕ್ಕೆ ಒಳಗಾಗಿರುವುದು ವಿಷ ಪ್ರಾಶನದಿಂದಲೇ ಎನ್ನುವ ಶಂಕೆ ವ್ಯಕ್ತವಾಗಿದೆ. ಕಳೆದ ಹಲವು ವರ್ಷಗಳಲ್ಲಿ ದಾವೂದ್ ಅತಿಯಾದ ಮಧುಮೇಹ ಮತ್ತು ಗ್ಯಾಂಗ್ರೀನ್ ಕಾರಣದಿಂದಾಗಿ ಕಾಲನ್ನು ಕಳೆದುಕೊಂಡು ವಾಕಿಂಗ್ ಸ್ಟಿಕ್ ನಲ್ಲಿ ಆಚೀಚೆ ಹೋಗುತ್ತಿದ್ದ ಎನ್ನುವ ಮಾಹಿತಿಗಳಿದ್ದವು. ಎರಡು ವರ್ಷಗಳ ಹಿಂದೆ ಈ ಮಾಹಿತಿಯನ್ನು ದಾವೂದ್ ಬಂಟ ಛೋಟಾ ಶಕೀಲ್ ನಿರಾಕರಣೆ ಮಾಡಿದ್ದ.
Underworld don Dawood Ibrahim has reportedly been hospitalised in Pakistan's Karachi after being rumoured to be poisoned. According to reports, the mastermind of 1993 Mumbai blasts has been kept under tight security at the hospital.
09-03-26 09:51 pm
HK News Staffer
ಕೊಡಗು ; ಹತ್ತು ದಿನ ಅಂತರದಲ್ಲಿ ಕಾಡಾನೆಗೆ ಎರಡನೇ ಬಲ...
09-03-26 08:07 pm
ಕ್ಷುಲ್ಲಕ ಕಾರಣಕ್ಕೆ ಪತಿ- ಪತ್ನಿ ಜಗಳ, ಎರಡು ವರ್ಷದ...
09-03-26 05:44 pm
ಅವಕಾಶ ಕೊಟ್ಟರೆ ಮತ್ತೆರಡು ವರ್ಷ ಬಜೆಟ್ ಮಂಡಿಸುತ್ತೇನ...
09-03-26 04:17 pm
ಬಳ್ಳಾರಿ ವಸತಿ ಶಾಲೆಯಲ್ಲೇ ವಿದ್ಯಾರ್ಥಿಗಳ ಸಂಘರ್ಷ ;...
09-03-26 03:24 pm
09-03-26 01:44 pm
HK News Staffer
ಇರಾನ್ ಮೇಲೆ ಮತ್ತೊಂದು ಭಾರಿ ದಾಳಿಗೆ ಟ್ರಂಪ್ ಸಿದ್ಧ...
07-03-26 11:58 am
ರಾಜಧಾನಿ ಟೆಹ್ರಾನಲ್ಲಿದ್ದ ಅಯತೊಲ್ಲಾ ಖಮೇನಿಗೆ ಸೇರಿದ...
06-03-26 11:04 pm
ಲವ್ ಜಿಹಾದ್ ಕಡಿವಾಣಕ್ಕೆ ಮಹಾರಾಷ್ಟ್ರದಲ್ಲಿ ಹೊಸ ಮಸೂ...
06-03-26 10:58 pm
ಹರ್ಮುಜ್ ಜಲಸಂಧಿ ಅಮೆರಿಕ ಮಿತ್ರ ರಾಷ್ಟ್ರಗಳಿಗೆ ಮಾತ್...
06-03-26 11:40 am
09-03-26 09:52 pm
HK News Staffer
ಗಲ್ಫ್ ಯುದ್ಧ ; ಮಂಗಳೂರಿನಿಂದ ದುಬೈ, ಜೆದ್ದಾ ಸೇರಿ ಹ...
09-03-26 07:29 pm
ತಲಪಾಡಿಯ ಯುವಕ ಬೆಂಗಳೂರಿನಲ್ಲಿ ಕಟ್ಟಡದಿಂದ ಬಿದ್ದು ಸ...
09-03-26 02:53 pm
ಬೇರೆ ರಾಷ್ಟ್ರಗಳಿಂದ ಬಂದವರಿಗೆ ಮಸೀದಿ, ಚರ್ಚ್ ಕಟ್ಟಲ...
09-03-26 12:50 pm
CM Siddaramaiah, Kambala Bantwal: ರಮಾನಾಥ ರೈ ಐ...
07-03-26 11:31 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm