ಬ್ರೇಕಿಂಗ್ ನ್ಯೂಸ್
14-12-23 05:55 pm HK News Desk ದೇಶ - ವಿದೇಶ
ಲಕ್ನೋ, ಡಿ.14: ಶ್ರೀಕೃಷ್ಣ ಜನ್ಮಭೂಮಿಯಲ್ಲಿರುವ ಮಥುರಾ ದೇವಸ್ಥಾನದ ಆವರಣದಲ್ಲಿರುವ ಶಾಹಿ ಈದ್ಗಾ ಮಸೀದಿಯಲ್ಲಿ ಸರ್ವೇ ನಡೆಸುವುದಕ್ಕೆ ಅಲಹಾಬಾದ್ ಹೈಕೋರ್ಟ್ ಅನುಮತಿ ನೀಡಿದೆ. ಕೋರ್ಟ್ ನೇಮಕ ಮಾಡುವ ವಕೀಲರ ಆಯೋಗದ ಮೇಲ್ವಿಚಾರಣೆಯಲ್ಲಿ ಸರ್ವೆ ನಡೆಯಲಿದೆ.
ತನಿಖಾ ಆಯೋಗದ ಮೂಲಕ ಶಾಹಿ ಈದ್ಗಾ ಮಸೀದಿಯಲ್ಲಿ ಸರ್ವೆ ನಡೆಸಬೇಕೆಂಬ ನಮ್ಮ ಅರ್ಜಿಯನ್ನು ಕೋರ್ಟ್ ಪರಿಗಣಿಸಿದೆ. ಯಾವ ರೀತಿಯ ಸರ್ವೆ ಎನ್ನುವ ಬಗ್ಗೆ ಕೋರ್ಟ್ ಡಿ.18ರಂದು ನಿರ್ಧರಿಸಲಿದೆ ಎಂದು ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನ ಸಮಿತಿಯ ಪರ ವಕೀಲ ವಿಷ್ಣುಶಂಕರ್ ಜೈನ್ ಹೇಳಿದ್ದಾರೆ. ಶಾಹಿ ಈದ್ಗಾ ಮಸೀದಿ ಪರ ವಕೀಲರ ವಾದವನ್ನು ಕೋರ್ಟ್ ನಿರಾಕರಿಸಿದೆ ಎಂದವರು ತಿಳಿಸಿದ್ದಾರೆ.
ಶಾಹಿ ಈದ್ಗಾ ಮಸೀ ದಿ ಕಟ್ಟಡದಲ್ಲಿ ಹಿಂದು ದೇಗುಲದ ಕುರುಹುಗಳಿವೆ. ಮೇಲ್ನೋಟಕ್ಕೆ ದೇವಸ್ಥಾನ ಅನ್ನುವುದನ್ನು ಹೇಳುವ ಹಲವಾರು ಸಂಕೇತಗಳಿವೆ. ಇದಕ್ಕಾಗಿ ಕೋರ್ಟ್ ಮೂಲಕ ತನಿಖಾ ಆಯೋಗ ನೇಮಕ ಮಾಡಬೇಕು ಅನ್ನುವುದು ನಮ್ಮ ಬೇಡಿಕೆಯಾಗಿತ್ತು. ಇದೀಗ ಸರ್ವೆಗೆ ಅನುಮತಿ ನೀಡುವ ನಿರ್ಧಾರ ಮಹತ್ವದ ಮೈಲಿಗಲ್ಲು ಎಂದು ವಕೀಲ ವಿಷ್ಣು ಜೈನ್ ಅಭಿಪ್ರಾಯ ಪಟ್ಟಿದ್ದಾರೆ.
ಕೃಷ್ಣನ ಜನ್ಮಭೂಮಿಯಲ್ಲಿ 13.37 ಎಕ್ರೆ ಜಾಗದಲ್ಲಿದ್ದ ದೇವಸ್ಥಾನವನ್ನು ಕೆಡವಿ ಔರಂಗಜೇಬನ ಕಾಲದಲ್ಲಿ ಶಾಹಿ ಈದ್ಗಾ ಮಸೀದಿಯನ್ನು ಕಟ್ಟಡಲಾಗಿತ್ತು ಎನ್ನುವುದು ಹಿಂದುಗಳ ವಾದ. ಈ ಕುರಿತ ಪ್ರಮುಖ ದಾವೆ ಹೈಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ. ಅಲ್ಲಿನ ಭೂಮಿ ಯಾರದ್ದು ಎನ್ನುವುದರ ಬಗ್ಗೆ 17 ಅರ್ಜಿಗಳು ಹೈಕೋರ್ಟಿನಲ್ಲಿ ದಾಖಲಾಗಿವೆ. ಸರ್ವೆ ನಡೆಸಬೇಕು ಎನ್ನುವ ಅರ್ಜಿಯನ್ನು ಕಳೆದ ನವೆಂಬರ್ 16ರಂದು ವಿಚಾರಣೆ ನಡೆಸಿದ್ದು ತೀರ್ಪನ್ನು ಕಾಯ್ದಿರಿಸಲಾಗಿತ್ತು.
The Allahabad High Court on Thursday allowed a court-monitored survey of the Shahi Idgah premises adjoining the Krishna Janmabhoomi temple in Mathura. The court agreed to the appointment of an advocate commissioner to oversee the survey of the mosque, which the petitioners claim holds signs suggesting that it was a Hindu temple once. The order on the Krishna Janmabhoomi-Shahi Idgah issue is the second temple-mosque dispute in which the high court has given its nod to a survey over the past months. Watch the video for more.
06-10-26 10:46 pm
HK News Desk
milk price, bus fare: ರಾಜ್ಯದ ಜನತೆಗೆ ಡಬಲ್ ಶಾಕ...
06-10-26 06:17 pm
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
07-10-26 01:10 pm
HK News Staffer
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
07-10-26 02:39 pm
HK News Staffer
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
Brijesh Chowta, Mp Mangalore: ಎಸ್ಐಆರ್ ಬಗ್ಗೆ ಕ...
06-10-26 09:21 pm
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
07-10-26 04:45 pm
HK News Staffer
Areca Nut Seized: ಅಸ್ಸಾಂ ಕಡೆಯಿಂದ ಕರ್ನಾಟಕ, ತಮಿ...
07-10-26 11:12 am
chickmanglore crime: ಚಿಕ್ಕಮಗಳೂರಿನಲ್ಲಿ ಭೀಕರ ದು...
06-10-26 05:36 pm
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm