ಬ್ರೇಕಿಂಗ್ ನ್ಯೂಸ್
06-12-23 11:35 am HK News Desk ದೇಶ - ವಿದೇಶ
ಚೆನ್ನೈ, ಡಿ 06: ಚಂಡಮಾರುತದ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಪರಿಣಾಮ ತಗ್ಗು ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ಥಗೊಂಡಿದೆ, ಚೆನ್ನೈನಲ್ಲಿ ಸುರಿದ ಭಾರಿ ಮಳೆಗೆ ಕೇವಲ ಜನಸಾಮಾನ್ಯರು ಮಾತ್ರವಲ್ಲದೆ ಫಿಲ್ಮ್ ಇಂಡಸ್ಟ್ರಿಯ ಕೆಲವು ಸ್ಟಾರ್ ನಟರೂ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು ಈ ಭಾರಿಯ ಪ್ರವಾಹದಲ್ಲಿ ಸಂಕಷ್ಟಕ್ಕೆ ಸಿಲುಕಿದವರಲ್ಲಿ ತಮಿಳು ನಟ ವಿಷ್ಣು ವಿಶಾಲ್, ಹಾಗೂ ಬಾಲಿವುಡ್ ಸ್ಟಾರ್ ಅಮೀರ್ ಖಾನ್ ಕೂಡ ಸೇರಿದ್ದಾರೆ.
ಸೌತ್ ಸ್ಟಾರ್ ವಿಷ್ಣು ವಿಶಾಲ್ ಮನೆಗೆ ಪ್ರವಾಹದ ನೀರು ನುಗ್ಗಿದ್ದು ಇದರ ಚಿತ್ರಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅಲ್ಲಿನ ಸುತ್ತಮುತ್ತಲ ಪ್ರದೇಶಗಳು ನೀರಿನಿಂದ ಮುಳುಗಡೆಯಾಗಿದ್ದು ಅಲ್ಲಿನ ಜನರು ಕೂಡ ಸಂಕಷ್ಟಕ್ಕೆ ಒಳಗಾಗಿದ್ದಾರೆ ಬದಲಾಗಿ, ಇಲ್ಲಿ ವಿದ್ಯುತ್ ಸಂಪರ್ಕ ಕೂಡಾ ಕಡಿತಗೊಂಡಿದ್ದು ಜನರ ಸಹಾಯಕ್ಕೆ ಫೋನ್ ಕರೆ ಕೂಡ ಮಾಡುವಂತಿಲ್ಲ ಎಂದು ಬರೆದುಕೊಂಡಿದ್ದಾರೆ.
ವಿಷ್ಣು ವಿಶಾಲ್ ಅವರ ಟ್ವೀಟ್ ಗಮನಿಸಿದ ಅವರ ಅಭಿಮಾನಿಗಳು ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದ್ದಾರೆ ಕೂಡಲೇ ರಕ್ಷಣಾ ತಂಡ ವಿಷ್ಣು ವಿಶಾಲ್ ಅವರು ಇರುವ ಪ್ರದೇಶಕ್ಕೆ ತೆರಳಿ ವಿಷ್ಣು ವಿಶಾಲ್ ಕುಟುಂಬ ಹಾಗು ಅಲ್ಲಿನ ಇತರ ಜನರನ್ನು ರಕ್ಷಣೆ ಮಾಡಿದ್ದಾರೆ.
ಈ ವೇಳೆ ಚೆನ್ನೈ ನಲ್ಲಿ ನೆಲೆಸಿರುವ ಬಾಲಿವುಡ್ ನಟ ಅಮೀರ್ ಖಾನ್ ಕೂಡ ಪ್ರವಾಹದಲ್ಲಿ ಸಿಲುಕಿದ್ದು ಅವರ ತಾಯಿಯ ಚಿಕಿತ್ಸೆಗಾಗಿ ಕಳೆದ ಕೆಲವು ಸಮಯಗಳಿಂದ ಚೆನ್ನೈನಲ್ಲಿ ಅಮೀರ್ ಖಾನ್ ನೆಲೆಸಿದ್ದಾರೆ ಸದ್ಯ ರಕ್ಷಣಾ ತಂಡ ಅಮೀರ್ ಕುಟುಂಬವನ್ನೂ ರಕ್ಷಣೆ ಮಾಡಿದ್ದಾರೆ.
ರಕ್ಷಣಾ ತಂಡದ ಕಾರ್ಯದ ಕುರಿತು ನಟ ವಿಷ್ಣು ವಿಶಾಲ್ ಮೆಚ್ಚುಗೆ ವ್ಯಕ್ತಪಡಿಸಿದ್ದು ರಕ್ಷಣಾ ತಂಡದ ಜೊತೆ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
In a dramatic turn of events, Tamil actor Vishnu Vishal and Bollywood superstar Aamir Khan found themselves stranded in their residences in Karapakkam, Chennai, due to the rising floodwaters caused by Cyclone Michaung. The duo was rescued by the fire and rescue department.
08-10-25 09:21 am
Bangalore Correspondent
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
Big Boss Kannada Closed: ಕನ್ನಡ ಶೋ ಬಿಗ್ ಬಾಸ್ ಗ...
07-10-25 07:32 pm
08-10-25 09:24 am
HK News Desk
ಚಿನ್ನ ಅಡವಿಟ್ಟು ಸಾಲ ; ಕಳೆನಾಶಕ ಕೆಮಿಕಲ್ ಸೇವಿಸಿ ದ...
07-10-25 11:16 pm
ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಪಿಪಿ ಚೌಧರಿ ನೇತೃತ್ವದ...
07-10-25 01:53 pm
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
07-10-25 11:14 pm
Mangalore Correspondent
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
ಫಿಶ್ ಮೀಲ್ ಲಾರಿಗಳಿಂದ ಉಳ್ಳಾಲದಲ್ಲಿ ಗಬ್ಬುನಾತ ! ರಸ...
07-10-25 03:33 pm
08-10-25 12:23 pm
Mangalore Correspondent
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm