ಬ್ರೇಕಿಂಗ್ ನ್ಯೂಸ್
13-11-20 04:15 pm Headline Karnataka News Network ದೇಶ - ವಿದೇಶ
ನವದೆಹಲಿ, ನವೆಂಬರ್ 13: ಗೃಹ ಸಚಿವ ಅಮಿತ್ ಶಾ ಅವರ ಟ್ವಿಟ್ಟರ್ ಖಾತೆಯ ಪ್ರೊಫೈಲ್ ಫೋಟೊವನ್ನು ಗುರುವಾರ ರಾತ್ರಿ ಇದ್ದಕ್ಕಿದ್ದಂತೆ ತೆರವುಗೊಳಿಸಲಾಗಿತ್ತು. ಬಳಿಕ ಅದನ್ನು ಮತ್ತೆ ಪ್ರಕಟಿಸಲಾಗಿದೆ. ಕಾಪಿ ರೈಟ್ ಸಮಸ್ಯೆಯ ಕಾರಣದಿಂದ ಈ ಫೋಟೊವನ್ನು ತೆಗೆದುಹಾಕಿದ್ದಾಗಿ ಟ್ವಿಟ್ಟರ್ ಹೇಳಿತ್ತು.
ಆ ಫೋಟೊದ ಕಾಪಿರೈಟ್ ಹೊಂದಿರುವ ವ್ಯಕ್ತಿ ಅಮಿತ್ ಶಾ ಪ್ರೊಫೈಲ್ ಫೋಟೊದ ವಿರುದ್ಧ ರಿಪೋರ್ಟ್ ಮಾಡಿದ್ದರು. ಹೀಗಾಗಿ ಆ ಫೋಟೊವನ್ನು ಪ್ರೊಫೈಲ್‌ನಿಂದ ಟ್ವಿಟ್ಟರ್ ತೆರವುಗೊಳಿಸಿತ್ತು. ಆದರೆ ಕೆಲವು ಸಮಯದಲ್ಲಿಯೇ ಅದನ್ನು ಮರುಸ್ಥಾಪಿಸಲಾಯಿತು.
'ಆಕಸ್ಮಿಕ ಪ್ರಮಾದಗಳಿಂದಾಗಿ ನಮ್ಮ ಜಾಗತಿಕ ಕಾಪಿರೈಟ್ ನೀತಿಗಳಿಗೆ ಅನುಸಾರವಾಗಿ ನಾವು ಈ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಿದ್ದೆವು. ಆದರೆ ಕೂಡಲೇ ಈ ನಿರ್ಧಾರವನ್ನು ಹಿಂಪಡೆದುಕೊಳ್ಳಲಾಗಿದ್ದು, ಖಾತೆಯು ಈಗ ಸಂಪೂರ್ಣ ಕಾರ್ಯಾಚರಣೆಗೆ ಲಭ್ಯವಾಗಿದೆ' ಎಂದು ಟ್ವಿಟ್ಟರ್ ವಕ್ತಾರರು ತಿಳಿಸಿದ್ದಾರೆ.
ಟ್ವಿಟ್ಟರ್ ಕಾಪಿರೈಟ್ ನಿಯಮಗಳ ಪ್ರಕಾರ ಫೋಟೊಗ್ರಾಫರ್ ಒಂದು ಫೋಟೊದ ಮೇಲೆ ಹಕ್ಕುಸ್ವಾಮ್ಯ ಹೊಂದಿರಬಹುದು. ಆದರೆ ವಿಷಯದ ಮೇಲೆ ಅಲ್ಲ. ಅಮಿತ್ ಶಾ ಅವರ ಪ್ರೊಫೈಲ್ ಫೋಟೊವನ್ನು ತೆರವುಗೊಳಿಸುತ್ತಿದ್ದಂತೆಯೇ ಟ್ವಿಟ್ಟರ್‌ನಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಅಮಿತ್ ಶಾ 23 ಮಿಲಿಯನ್‌ಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದು, ಅವರು 296 ಮಂದಿಯನ್ನು ಹಿಂಬಾಲಿಸುತ್ತಿದ್ದಾರೆ.
ಇನ್ನೊಂದೆಡೆ ಲೇಹ್ ಪ್ರದೇಶವನ್ನು ಒಮ್ಮೆ ಚೀನಾಕ್ಕೆ ಸೇರಿದ್ದು ಎಂದು ತೋರಿಸಿದ್ದ ಟ್ವಿಟ್ಟರ್, ಈಗ ಲಡಾಖ್ ಕೇಂದ್ರಾಡಳಿತ ಪ್ರದೇಶದ ಬದಲು ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದೆ ಎಂದು ತೋರಿಸುತ್ತಿದೆ. ಇದರಿಂದ ಅಸಮಾಧಾನಗೊಂಡಿರುವ ಕೇಂದ್ರ ಸರ್ಕಾರ ಟ್ವಿಟ್ಟರ್‌ಗೆ ನೋಟಿಸ್ ಜಾರಿಮಾಡಿದೆ.
Micro-blogging site Twitter on Thursday night removed the Display Picture (DP) of Union Home Minister Amit Shah. It, however, reinstated the picture after some time.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
06-10-25 02:58 pm
Mangalore Correspondent
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm