ಬ್ರೇಕಿಂಗ್ ನ್ಯೂಸ್
08-11-20 08:59 pm Headline Karnataka News Network ದೇಶ - ವಿದೇಶ
ವಾಷಿಂಗ್ಟನ್, ನವೆಂಬರ್ 8: ಅಮೆರಿಕದಲ್ಲಿ ಆಡಳಿತ ವಿರೋಧಿ ಅಲೆ ಅಧ್ಯಕ್ಷ ಟ್ರಂಪ್ ಕುಟುಂಬದ ಒಳಗೂ ನುಗ್ಗಿದೆ. ಪತ್ನಿ ಮೆಲಾನಿಯಾ ಟ್ರಂಪ್ ಕೂಡ ಪತಿಯಿಂದ ವಿಚ್ಚೇದನ ಪಡೆಯಲು ಸಜ್ಜಾಗಿದ್ದಾರೆ.
ಡೊನಾಲ್ಡ್ ಟ್ರಂಪ್ ಶ್ವೇತಭವನದಿಂದ ನಿರ್ಗಮಿಸುವ ದಿನಕ್ಕಾಗಿ ಪತ್ನಿ ಕ್ಷಣಗಣನೆ ಮಾಡುತ್ತಿದ್ದಾರೆ. ಅಂದೇ ಪತ್ನಿ ಮೆಲಾನಿಯಾ ಡೈವರ್ಸ್ ಎಪ್ಲೈ ಮಾಡಲಿದ್ದಾರೆ ಎಂದು ಶ್ವೇತಭವನದ ಮಾಜಿ ಅಧಿಕಾರಿಯೊಬ್ಬ ಹೇಳಿಕೆ ನೀಡಿ ಅಚ್ಚರಿ ಸೃಷ್ಟಿಸಿದ್ದಾನೆ.
ಆತನಿಂದ ಬೇರೆಯಾಗುವುದಿದ್ದರೆ ಅಷ್ಟು ದಿನ ಯಾಕೆ ಕಾಯಬೇಕು ಎಂಬ ಪ್ರಶ್ನೆಗೆ, ವಿಚ್ಚೇದನಕ್ಕಾಗಿ ಈ ಮೊದಲೇ ಟ್ರೈ ಮಾಡುತ್ತಿದ್ದಾರೆ. ಪತಿ ಅಧಿಕಾರದಲ್ಲಿರುವಾಗ ವಿಚ್ಚೇದನಕ್ಕೆ ಹೋದರೆ ತನ್ನ ಅಧಿಕಾರ ಬಳಸಿ ಆಕೆಯನ್ನು ಶಿಕ್ಷಿಸುತ್ತಾನೆಂಬ ಭಯ ಇದೆ ಎಂದಿದ್ದಾನೆ. ಮಾಜಿ ಅಧಿಕಾರಿಯ ಹೇಳಿಕೆ ಆಧರಿಸಿ ಲಂಡನ್ ಮೂಲದ ಡೈಲಿ ಮೇಲ್ ಪತ್ರಿಕೆ ಈ ಸುದ್ದಿಯನ್ನು ಪ್ರಸಾರ ಮಾಡಿದೆ.

ಶ್ವೇತಭವನದಲ್ಲಿ ಸಂಪರ್ಕ ವಿಭಾಗದ ಡೈರೆಕ್ಟರ್ ಆಗಿದ್ದ ಒಮರೋಸಾ ನ್ಯೂಮನ್, 2017ರಲ್ಲಿ ತನ್ನ ಹುದ್ದೆ ತ್ಯಜಿಸಿ ಹೊರನಡೆದಿದ್ದ. 15 ವರ್ಷಗಳಿಂದ ಟ್ರಂಪ್ ಪತ್ನಿಯಾಗಿರುವ ಮೆಲನಿಯಾಗೆ ತನ್ನ ಪತಿ ಅಧ್ಯಕ್ಷನಾಗುವುದೇ ಇಷ್ಟ ಇರಲಿಲ್ವಂತೆ. ಇವರಿಬ್ಬರಿಗೆ ಹುಟ್ಟಿದ್ದ ಮಗ ಬೇರೋನ್ ಗೆ ಟ್ರಂಪ್ ಆಸ್ತಿಯ ಅರ್ಧ ಭಾಗ ಕೊಡಬೇಕೆಂದು ಮೆಲನಿಯಾ ಕೇಳಿದ್ದಳಂತೆ. ಈ ವಿಚಾರದಲ್ಲಿ ಜಗಳ ಆಗಿ ಶ್ವೇತಭವನದಲ್ಲಿಯೇ ಇಬ್ಬರೂ ಬೇರೆ ಬೇರೆಯಾಗೇ ಇರುತ್ತಿದ್ದರಂತೆ. ಅದಕ್ಕಾಗಿ ಸೆಪರೇಟ್ ಬೆಡ್ ರೂಮ್ ಕೂಡ ಮಾಡಿಕೊಂಡಿದ್ದರಂತೆ.
ಈ ಹಸಿ ಬಿಸಿ ಸುದ್ದಿಗಳು ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಮೆಲಾನಿಯಾ ಪ್ರತಿಕ್ರಿಯಿಸಿದ್ದು ನಮ್ಮಿಬ್ಬರ ಸಂಬಂಧ ಗಟ್ಟಿಯಾಗಿದೆ, ಒಳ್ಳೆಯ ರೀತಿಯಲ್ಲೇ ಇದೆ ಎಂದು ಹೇಳಿಕೆ ನೀಡಿದ್ದಾರೆ. ಡೊನಾಲ್ಡ್ ಟ್ರಂಪ್ ಕೂಡ, ತಮ್ಮ ಸಂಬಂಧ ಸರಿಯಾಗೇ ಇದೆ ಎಂದು ಹೇಳಲು ಕಷ್ಟಪಟ್ಟಿದ್ದಾರೆ. ಕೆಲವರ ಮಾಹಿತಿ ಪ್ರಕಾರ, ಟ್ರಂಪ್ ಎರಡನೇ ಹೆಂಡತಿಯಾಗಿದ್ದ ಮಾರ್ಲಾ ಮ್ಯಾಪ್ಲಸ್ ಜೊತೆಗೆ ಆಸ್ತಿ ವಿಚಾರದಲ್ಲಿ ಅರ್ಧ ಭಾಗ ಹಂಚಿಕೊಳ್ಳಲು ಈ ಹಿಂದೆಯೇ ಒಪ್ಪಂದ ಆಗಿದ್ಯಂತೆ. ಅಮೆರಿಕದಲ್ಲಿ ಉದ್ಯಮ ಸಮೂಹದ ದೈತ್ಯನಾಗಿರುವ ಟ್ರಂಪ್ ಪಾಲಿಗೆ ಈಗ ಆಸ್ತಿ ಉಳಿಸಿಕೊಳ್ಳುವುದೇ ಚಿಂತೆಯಾಗಿದೆ.
A former White House aide has claimed that the couple's 15-year marriage is over and that Melania is "counting the minutes until divorce" when Donald Trump leaves the White House after losing to Joe Biden.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 05:01 pm
Mangaluru Staffer
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm