ಬ್ರೇಕಿಂಗ್ ನ್ಯೂಸ್
10-03-23 10:49 pm HK News Desk ದೇಶ - ವಿದೇಶ
ತಿರುವನಂತಪುರಂ, ಮಾ.10: ಎಡರಂಗದ ಸಿಎಂ ಪಿಣರಾಯಿ ವಿಜಯನ್ ಕುರಿತ ಎಲ್ಲ ಸಾಕ್ಷ್ಯಗಳನ್ನು ಕೊಟ್ಟರೆ 30 ಕೋಟಿ ನೀಡುವುದಾಗಿ ತನಗೆ ಆಫರ್ ಬಂದಿತ್ತು ಎಂಬುದಾಗಿ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಹೊಸ ಬಾಂಬ್ ಸಿಡಿಸಿದ್ದಾರೆ.
ಫೇಸ್ಬುಕ್ ಲೈವ್ ಮೂಲಕ ಸ್ವಪ್ನಾ ಸುರೇಶ್ ಮಾತನಾಡಿದ್ದು, ತನ್ನನ್ನು ಇಂಟರ್ವ್ಯೂ ಮಾಡುವ ನೆಪದಲ್ಲಿ ವಿಜಯ್ ಪಿಳ್ಳೆ ಎಂಬಾತ ಬಂದಿದ್ದ. ಆತನೇ ತನಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪರವಾಗಿ ಆಫರ್ ಮಾಡಿದ್ದು. ಆತನನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಗೋವಿಂದನ್ ಕಳಿಸಿದ್ದರು. ಸಿಎಂ ಕುರಿತ ಎಲ್ಲ ಸಾಕ್ಷ್ಯಗಳನ್ನು ಕೊಡುವಂತೆ ಮತ್ತು ಸಿಎಂ ಬಗ್ಗೆ ಯಾವುದೇ ರೀತಿಯ ಹೇಳಿಕೆ ನೀಡದಂತೆ ತನಗೆ ಆಫರ್ ಮಾಡಿದ್ದ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹೊಟೇಲಿನಲ್ಲಿದ್ದಾಗ ವಿಜಯ್ ಪಿಳ್ಳೆ ಮಾತುಕತೆಗೆ ಬಂದಿದ್ದರು. ಸೆಟ್ಲ್ ಮೆಂಟ್ ಮಾಡುವುದೇ ಆತನ ಉದ್ದೇಶ ಆಗಿತ್ತು. ಎರಡು ದಿನಗಳ ಟೈಮ್ ಕೊಡುತ್ತೇನೆ, ನಿರ್ಧಾರ ತೆಗೆದುಕೊಳ್ಳಿ ಎಂದಿದ್ದ. ಇಲ್ಲದೇ ಇದ್ದರೆ ನಿಮ್ಮ ಜೀವಕ್ಕೆ ಆಪತ್ತು ಇದೆ ಎಂದೂ ಹೇಳಿದ್ದ. ನನಗೇನು ಸಿಎಂ ಪಿಣರಾಯಿ ವಿಜಯನ್ ಬಗ್ಗೆ ಅಥವಾ ಅವರ ಕುಟುಂಬದ ಬಗ್ಗೆ ಪರ್ಸನಲ್ ಅಜೆಂಡಾ ಇಲ್ಲ. ರಾಜಕೀಯ ಜೀವನವನ್ನು ಮುಗಿಸಬೇಕೆಂಬ ಯಾವುದೇ ದ್ವೇಷ ಇಲ್ಲ. ಸಿಪಿಎಂ ಸೆಕ್ರಟರಿ ಗೋವಿಂದನ್ ನನ್ನ ಜೀವನವನ್ನು ಮುಗಿಸುತ್ತೇನೆ ಎಂದು ಆ ವ್ಯಕ್ತಿಯ ಮೂಲಕ ಬೆದರಿಕೆ ಹಾಕಿದ್ದರು. ಆತನ ಫೋನ್ ನಂಬರ್, ಇ-ಮೇಲ್ ವಿಳಾಸವನ್ನು ನನ್ನ ವಕೀಲರಿಗೆ ಕೊಟ್ಟಿದ್ದೇನೆ ಎಂದಿದ್ದಾರೆ.
ಮುಖ್ಯಮಂತ್ರಿ ಪಿಣರಾಯಿಗೆ ಒಂದು ಹೇಳಬಯಸುತ್ತೇನೆ, ನಾನು ನನ್ನ ಉಸಿರು ಇರೋವರೆಗೂ ಹೋರಾಡುತ್ತೇನೆ. ನನ್ನನ್ನು ಜನ ನಂಬಿದ್ದಾರೆ. ನಿಮ್ಮ ನಕಲಿ ಸಾಮ್ರಾಜ್ಯವನ್ನು ಬಿಚ್ಚಿಡುತ್ತೇನೆ. ನನಗೆ ಹೆದರಿಸುವ ಕೆಲಸಕ್ಕೆ ಕೈಹಾಕಬೇಡಿ. ನಿಮ್ಮ ನಿಜ ಮುಖವನ್ನು ಜಗತ್ತಿಗೆ ತೋರಿಸಲಿದ್ದೇನೆ ಎಂದು ಸ್ವಪ್ನಾ ಸುರೇಶ್ ಹೇಳಿದ್ದಾರೆ.
2020ರ ಜುಲೈ 5ರಂದು ತಿರುವನಂತಪುರದ ವಿಮಾನ ನಿಲ್ದಾಣದಲ್ಲಿ 15 ಕೋಟಿ ಮೌಲ್ಯದ 30 ಕೇಜಿಯಿದ್ದ ಚಿನ್ನದ ಗಟ್ಟಿಗಳನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ತನಿಖೆಯಲ್ಲಿ ಯುಎಇಯಿಂದ ಅಧಿಕಾರಿಗಳ ಸಾಮಗ್ರಿ ರೂಪದಲ್ಲಿ ಗೋಲ್ಡ್ ಸ್ಮಗ್ಲಿಂಗ್ ಮಾಡಲಾಗುತ್ತಿದೆ ಎಂಬುದು ಪತ್ತೆಯಾಗಿತ್ತು. ಪ್ರಕರಣದಲ್ಲಿ ಅದಕ್ಕೂ ಹಿಂದೆ ಯುಎಇ ಕಾನ್ಸುಲೇಟ್ ಕಚೇರಿಯ ಉದ್ಯೋಗಿಯಾಗಿದ್ದ ಮತ್ತು ಮುಖ್ಯಮಂತ್ರಿ ಅಧೀನದಲ್ಲಿರುವ ಐಟಿ ಇಲಾಖೆಯ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಸ್ವಪ್ನಾ ಸುರೇಶ್ ಬಂಧನವಾಗಿತ್ತು. ಅಲ್ಲದೆ, ಐಟಿ ಡಿಪಾರ್ಟ್ಮೆಂಟ್ ನೋಡಿಕೊಂಡಿದ್ದ ಮತ್ತು ಆಗ ಮುಖ್ಯಮಂತ್ರಿಯ ಪರ್ಸನಲ್ ಸೆಕ್ರಟರಿ ಆಗಿದ್ದ ಶಿವಶಂಕರ್ ಅವರನ್ನು ಅಮಾನತು ಮಾಡಲಾಗಿತ್ತು. ಸ್ವಪ್ನಾ ಸುರೇಶ್ ಒಂದು ವರ್ಷದ ಬಳಿಕ ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಯಾಗಿದ್ದು ಇದೀಗ ಸಿಎಂ ವಿರುದ್ಧವೇ ಕಿಡಿಕಾರಿದ್ದಾರೆ.
Gold smuggling case accused Swapna Suresh on Thursday alleged that a middleman had offered her Rs 30 crore to withdraw allegations against Kerala Chief Minister Pinarayi Vijayan and his family, and that she was “threatened that my life would be in danger if I did not yield”.
10-10-25 07:06 pm
HK News Desk
'ನವೆಂಬರ್ ಕ್ರಾಂತಿ' ಗುಮ್ಮದ ನಡುವೆಯೇ ಸಂಪುಟ ಸರ್ಜರಿ...
10-10-25 12:06 pm
ಟೀಕೆ ಬೆನ್ನಲ್ಲೇ ಬಿಗ್ ಬಾಸ್ ಮನೆ ಓಪನ್ ಮಾಡಿಸಿದ ಡಿಕ...
09-10-25 12:57 pm
ಕಾಂತಾರ ಭರ್ಜರಿ ರೆಸ್ಪಾನ್ಸ್ ; ಏಳೇ ದಿನಕ್ಕೆ 450 ಕೋ...
08-10-25 11:04 pm
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
09-10-25 10:31 pm
HK News Desk
20ಕ್ಕು ಹೆಚ್ಚು ಮಕ್ಕಳ ಸಾವು ; ಕೊನೆಗೂ ಎಚ್ಚೆತ್ತ ಕೇ...
09-10-25 05:33 pm
ಕೋಲ್ಡ್ರಿಫ್ ಸಿರಪ್ ತಯಾರಕ ಸಂಸ್ಥೆಯ ಮಾಲೀಕ ರಂಗನಾಥನ್...
09-10-25 12:12 pm
Navi Mumbai International Airport, PM Narendr...
08-10-25 08:57 pm
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
10-10-25 06:52 pm
Mangalore Correspondent
ನಿಷೇಧಿತ ಪಿಎಫ್ಐ ಸಂಘಟನೆ ಪರವಾಗಿ ಪೋಸ್ಟ್ ; ಮುಸ್ಲಿಂ...
10-10-25 04:18 pm
Bharath Kumdel Arrest, Abdul Rahiman Murder:...
10-10-25 02:02 pm
ವಿಶ್ವಸಂಸ್ಥೆ ಅಧಿವೇಶನದಲ್ಲಿ ಭಾಗಿಯಾದ ದಕ್ಷಿಣ ಕನ್ನಡ...
09-10-25 08:22 pm
ಮಹೇಶ್ ಶೆಟ್ಟಿ ತಿಮರೋಡಿಗೆ ಕೋರ್ಟಿನಲ್ಲಿ ಹಿನ್ನಡೆ ;...
09-10-25 07:23 pm
10-10-25 07:43 pm
Bangalore Correspondent
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm
Job Scam, Kuwait Hospital: ಕುವೈತ್ ಆಸ್ಪತ್ರೆಯಲ್...
08-10-25 08:47 pm
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am