ಬ್ರೇಕಿಂಗ್ ನ್ಯೂಸ್
12-10-20 03:31 pm Headline Karnataka News Network ದೇಶ - ವಿದೇಶ
ಹೈದರಾಬಾದ್, ಅಕ್ಟೋಬರ್ 12: ಈ ದೇಶದಲ್ಲಿ ಪ್ರಧಾನಿ ಮೋದಿಗೆ, ರಾಹುಲ್ ಗಾಂಧಿಗೆ ಭಕ್ತರಿದ್ದಾರೆ. ಚಿತ್ರ ನಟ - ನಟಿಯರನ್ನು ಆರಾಧಿಸುವ ಅಭಿಮಾನಿಗಳೂ ಇದ್ದಾರೆ. ಆದರೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ಪ್ರಾಣ ಕೊಡುವ ಮಂದಿಯ ಬಗ್ಗೆ ಕೇಳಿದ್ದೀರಾ...? ಕೊರೊನಾ ಸೋಂಕಿಗೆ ಒಳಗಾಗಿರುವ ಡೊನಾಲ್ಡ್ ಟ್ರಂಪ್ ಚೇತರಿಸಲು ಉಪವಾಸ ಕುಳಿತಿದ್ದ ವ್ಯಕ್ತಿಯೊಬ್ಬ ಪ್ರಾಣ ಬಿಟ್ಟ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನೂ ಪಡೆದಿದ್ದರು. ಆದರೆ, ತೆಲಂಗಾಣದ ಅಭಿಮಾನಿಯೊಬ್ಬ ಟ್ರಂಪ್ ಚೇತರಿಕೆಗಾಗಿ ವ್ರತ ಆಚರಿಸಿ ಉಪವಾಸ ಕುಳಿತಿದ್ದ ಕಾರಣ ಹೃದಯಾಘಾಕ್ಕೀಡಾಗಿ ಮೃತಪಟ್ಟಿದ್ದಾನೆ ಎನ್ನಲಾಗ್ತಿದೆ. ಟ್ರಂಪ್ ಗಾಗಿ ಪ್ರಾಣ ಬಿಟ್ಟ ಸುದ್ದಿ ಇದೀಗ ರಾಷ್ಟ್ರ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ.



ತೆಲಂಗಾಣದ ಮೇದಕ್‌ನ ನಿವಾಸಿಯಾದ ರೈತ ಬುಸ್ಸಾ ಕೃಷ್ಣರಾಜು ಮೃತ ದುರ್ದೈವಿ. ಈತ ಟ್ರಂಪ್‌ಗೆ ಕೊರೋನಾ ಸೋಂಕು ತಗುಲಿದ ನಂತರ ಆಘಾತಕ್ಕೊಳಗಾಗಿದ್ದ. ಅವರಿಗಾಗಿ ಮೌನ ವ್ರತ, ಪೂಜೆಯೊಂದಿಗೆ ಉಪವಾಸ ಸಹ ಆರಂಭಿಸಿದ್ದರು. ಇದೇ ಕಾರಣಕ್ಕೆ ಅವರಿಗೆ ಹೃದಯಾಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಈ ವ್ಯಕ್ತಿ ಹಿಂದೊಮ್ಮೆ ಆರು ಅಡಿ ಎತ್ತರದ ಡೋನಾಲ್ಡ್ ಟ್ರಂಪ್ ಪ್ರತಿಮೆ ಸ್ಥಾಪಿಸಿ ನಿತ್ಯ ಪೂಜೆ ಮಾಡುವುದಾಗಿ ಹೇಳಿ ಗಮನಸೆಳೆದಿದ್ದರು. ಟ್ರಂಪ್ ಅಪ್ಪಟ ಭಕ್ತ, ಅಭಿಮಾನಿಯಾಗಿದ್ದ ರಾಜು, ಕಳೆದ ನಾಲ್ಕು ದಿನಗಳಿಂದ ಯಾರೊಂದಿಗೂ ಮಾತನಾಡದೇ, ಆಹಾರ ಸೇವಿಸದೆ ಪ್ರಾರ್ಥನೆಯಲ್ಲಿ ನಿರತರಾಗಿದ್ದರು. ಭಾನುವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
A farmer from Telangana Bussu Krishna who "spent sleepless nights, starving and praying" for US President Donald Trump's recovery from Coronavirus died of cardiac arrest on Sunday.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm