ಬ್ರೇಕಿಂಗ್ ನ್ಯೂಸ್
12-10-20 11:52 am Headline Karnataka News Network ದೇಶ - ವಿದೇಶ
ಮುಂಬೈ, ಅಕ್ಟೋಬರ್ 12: ಆ್ಯಸಿಡ್ ಅಟ್ಯಾಕ್ ಸಂತ್ರಸ್ತರಿಗಾಗಿಯೇ ಎನ್ ಜಿಓ ಸಂಘಟನೆಯೊಂದು ಸೂಪರ್ ಮಾರ್ಕೆಟ್ ಆರಂಭಿಸಿದೆ. ಸಹಾಸ್ ಫೌಂಡೇಶನ್ ಎನ್ನುವ ಎನ್ ಜಿಓ ಸಂಸ್ಥೆ ಬಾಂದ್ರಾದಲ್ಲಿ ಸೂಪರ್ ಮಾರ್ಕೆಟ್ ಆರಂಭಿಸಿದ್ದು ಬಿಜೆಪಿ ನಾಯಕಿ ಚಿತ್ರಾ ವಾಘ್ ಮಾರ್ಕೆಟ್ ಉದ್ಘಾಟಿಸಿದ್ದಾರೆ.
ಸ್ವತಃ ಆ್ಯಸಿಡ್ ಸಂತ್ರಸ್ತೆ ಆಗಿರುವ ದೌಲತ್ ಬಿ ಖಾನ್ ಎನ್ನುವ ಮಹಿಳೆ 2016ರಲ್ಲಿ ಸಹಾಸ್ ಫೌಂಡೇಶನ್ ಆರಂಭಿಸಿದ್ದರು. ಆ್ಯಸಿಡ್ ದಾಳಿ ಸಂತ್ರಸ್ತರ ಏಳಿಗೆಗಾಗಿಯೇ ಈ ಸಂಸ್ಥೆ ಸ್ಥಾಪಿಸಲಾಗಿತ್ತು. ಸೂಪರ್ ಮಾರ್ಕೆಟ್ ಮೂಲಕ ಆ್ಯಸಿಡ್ ಸಂತ್ರಸ್ತರು ಕೂಡ ಸಮಾಜದಲ್ಲಿ ಸ್ವಾವಲಂಬಿ ಆಗಿ ಬೆಳೆಯಲು ಅವಕಾಶ ಕಲ್ಪಿಸಲಿದೆ ಎಂದು ದೌಲತ್ ಹೇಳಿದ್ದಾರೆ.
ಕೋವಿಡ್ ಸಮಯದಲ್ಲಿ ಫಂಡ್ ಕಲೆಕ್ಷನ್ ಸಾಧ್ಯವಾಗಲಿಲ್ಲ. ಹೀಗಾಗಿ ಫಂಡಿಂಗ್ ಮಾಡೋರನ್ನು ಮನವೊಲಿಸಿ, ಸಂತ್ರಸ್ತರಿಗೆ ಉದ್ಯೋಗ ನೀಡುವುದಕ್ಕಾಗಿ ಸೂಪರ್ ಮಾರ್ಕೆಟ್ ಆರಂಭಿಸಲು ನಿರ್ಧರಿಸಿದೆವು. ಕೋವಿಡ್ ಸಂದರ್ಭದಲ್ಲಿ ಹೆಚ್ಚು ಅಗತ್ಯವಾಗಿ ಪರಿಣಮಿಸಿದ್ದು ಗ್ರೋಸರಿ ಮತ್ತು ಮೆಡಿಸಿನ್. ಹಾಗಾಗಿ ಹೆಚ್ಚು ಜನರಿಗೆ ಬೇಕಾಗುವ ಸೂಪರ್ ಮಾರ್ಕೆಟ್ ಆರಂಭಿಸಿದೆವು. ಆ್ಯಸಿಡ್ ಸಂತ್ರಸ್ತರು ಇನ್ನೊಬ್ಬರಿಗೆ ಹೊರೆಯಾಗಬಾರದೆಂಬ ಉದ್ದೇಶ ಇದರ ಹಿಂದಿದೆ ಎಂದು ಹೇಳುತ್ತಾರೆ, ಫೌಂಡೇಶನ್ ಸ್ಥಾಪಕಿ ದೌಲತ್.
ನನಗನಿಸುತ್ತೆ, ಇದು ದೇಶದಲ್ಲೇ ಮೊದಲ ಉಪಕ್ರಮ ಎಂದು. ಆ್ಯಸಿಡ್ ಸಂತ್ರಸ್ತರೆಲ್ಲ ಒಂದಾಗಿ ಹಣ ಸಂಗ್ರಹಿಸಿ ಸೂಪರ್ ಮಾರ್ಕೆಟ್ ಸ್ಥಾಪಿಸಿದ್ದಾರೆ. ಈ ಮೂಲಕ ದೇಶಕ್ಕೊಂದು ಸಂದೇಶ ನೀಡಿದ್ದಾರೆ. ದುರಂತಕ್ಕೀಡಾಗಿ ಜೀವನದಲ್ಲಿ ಬೇಸತ್ತವರು ತಮ್ಮ ಕಾಲಲ್ಲಿ ಸ್ವತಃ ನಿಂತುಕೊಳ್ಳುವ ಮೂಲಕ ಹೊಸ ಸಂದೇಶ ನೀಡಿದಂತಾಗಿದೆ ಎಂದು ಬಿಜೆಪಿ ನಾಯಕಿ ಚಿತ್ರಾ ವಾಘ್ ಪ್ರತಿಕ್ರಿಯಿಸಿದ್ದಾರೆ.
A supermarket, which will provide work to acid attack survivors, was inaugurated by BJP Leader Chitra Wagh in Bandra, Mumbai.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm