ಬ್ರೇಕಿಂಗ್ ನ್ಯೂಸ್
11-10-20 05:58 pm Headline Karnataka News Network ದೇಶ - ವಿದೇಶ
ನವದೆಹಲಿ, ಅಕ್ಟೋಬರ್ 11: ನೀವು ಅನಿಲ್ ಕಪೂರ್ ಅಭಿನಯದ ಏಕ್ ದಿನ್ ಕಾ ಸುಲ್ತಾನ್ ಚಿತ್ರ ನೋಡಿರಬಹುದು. ಚಿತ್ರದಲ್ಲಿ ಒಂದು ದಿನಕ್ಕೆ ಸಿಎಂ ಆಗುವ ಅನಿಲ್ ಕಪೂರ್, ಏನೆಲ್ಲಾ ಮಾಡಬಹುದು ಎಂಬುದನ್ನು ತೋರಿಸಿಕೊಡುತ್ತಾರೆ. ಈ ರೀತಿ ಒಂದು ದಿನಕ್ಕೆ ಸಿಎಂ ಆಗುವುದು ರಿಯಲ್ ಲೈಫಲ್ಲಿ ಸಾಧ್ಯವಾಗಲ್ಲ. ಆದರೆ, ರಾಜಧಾನಿ ದೆಹಲಿಯ 18ರ ಹರೆಯದ ಯುವತಿಯೊಬ್ಬಳು ಇಂಗ್ಲೆಂಡ್ ಸರಕಾರದ ಭಾರತದ ಅತ್ಯುನ್ನತ ಅಧಿಕಾರಿಯಾಗಿ ಒಂದು ದಿನಕ್ಕೆ ಆಡಳಿತ ನಡೆಸುವ ಭಾಗ್ಯ ಪಡೆದಿದ್ದಾಳೆ.
ಹೌದು.. ಯಾವುದೇ ವ್ಯಕ್ತಿಯ ರಿಯಲ್ ಲೈಫಲ್ಲಿ ಅತ್ಯಂತ ಅಪರೂಪದ ಕ್ಷಣಗಳಲ್ಲಿ ಒಂದು. ಆಕೆಯ ಹೆಸರು ಚೈತನ್ಯ ವೆಂಕಟೇಶ್ವರನ್. ದೆಹಲಿಯ ನಿವಾಸಿ ಆಗಿರುವ ಚೈತನ್ಯ, ಒಂದು ದಿನಕ್ಕೆ ಬ್ರಿಟಿಷ್ ಹೈಕಮಿಷನರ್ ಆಗಿ ಸೇವೆ ನಿರ್ವಹಿಸಲು ಆಯ್ಕೆಯಾಗಿದ್ದು ಒಂದು ದಿನ ಹೈಕಮಿಷನರ್ ಆಗುವ ಅನನ್ಯ ಅವಕಾಶ ಪಡೆದಿದ್ದಾರೆ.
ಬ್ರಿಟಿಷ್ ಹೈಕಮಿಷನ್ ಕಳೆದ 2017 ರಿಂದ ಪ್ರತಿ ವರ್ಷ "ಹೈಕಮಿಷನ್ ಫಾರ್ ಎ ಡೇ" ಹೆಸರಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವಾದ ಅಕ್ಟೋಬರ್ 11ರಂದು ಈ ಸ್ಪರ್ಧೆ ನಡೆಸುತ್ತದೆ. ಯುವತಿಯರು ಅಧಿಕಾರಿ ಹುದ್ದೆಗೆ ಬರಬೇಕು, ಸವಾಲು ಎದುರಿಸುವ ಚಾಕಚಕ್ಯತೆ ಹೊಂದುವ ಮೂಲಕ ನಾಯಕರಾಗಬೇಕು ಎನ್ನುವ ನೆಲೆಯಲ್ಲಿ ಬ್ರಿಟಿಷ್ ಹೈಕಮಿಷನ್ 18ರಿಂದ 23 ವಯಸ್ಸಿನ ಯುವತಿಯರಿಗೆಂದೇ ಈ ಸ್ಪರ್ಧೆ ಏರ್ಪಡಿಸುತ್ತದೆ. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಒಂದು ಪ್ರಶ್ನೆ ಮುಂದಿಡಲಾಗಿತ್ತು. ಕೋವಿಡ್ ಸಮಯದಲ್ಲಿ ಜಗತ್ತಿಗೆ ಎದುರಾಗಿರುವ ಸವಾಲುಗಳು ಮತ್ತು ಅವಕಾಶಗಳು - ಲಿಂಗ ಸಮಾನತೆ ನೆಲೆಯಲ್ಲಿ ನೀವೇನು ನೋಡುತ್ತೀರಿ ಎಂಬ ವಿಚಾರ ನೀಡಲಾಗಿತ್ತು. ಒಂದು ನಿಮಿಷದ ವಿಡಿಯೋದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕಿತ್ತು. ಕೊರೊನಾ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ಪರ್ಧೆ ನಡೆದಿದ್ದು ಚೈತನ್ಯ ವೆಂಕಟೇಶ್ವರನ್ ಪಾಲ್ಗೊಂಡು ತನ್ನ ಅನಿಸಿಕೆ ಹೇಳಿದ್ದು ಈ ಬಾರಿಯ ಹೈಕಮಿಷನರ್ ಹುದ್ದೆಗೆ ಆಗುವಂತೆ ಮಾಡಿದೆ.
ಅಂದಹಾಗೆ, ಚೈತನ್ಯ ಈ ಹುದ್ದೆ ಪಡೆದ ನಾಲ್ಕನೇ ಯುವತಿಯಾಗಿದ್ದಾಳೆ. ಈಕೆ ಹೈಕಮಿಷನರ್ ಆಗುವ ದಿನ ಈಗ ಆ ಹುದ್ದೆಯಲ್ಲಿರುವ ಅಧಿಕಾರಿ ಜಾನ್ ಥಾಂಪ್ಸನ್, ಡೆಪ್ಯುಟಿ ಹೈಕಮಿಷನರ್ ಆಗಿ ಕಾರ್ಯ ನಿರ್ವಹಿಸುವುದು ವಿಶೇಷ.
ಈ ಸ್ಪರ್ಧೆ ನನ್ನ ಪಾಲಿಗೆ ವರ್ಷದ ಅತ್ಯಂತ ಸಂತಸದ ಕ್ಷಣಗಳಲ್ಲಿ ಒಂದು. ವಿಶೇಷ ಪ್ರತಿಭೆಯುಳ್ಳ ಯುವತಿಯರಿಗೆ ಇದೊಂದು ಅತ್ಯುತ್ತಮ ವೇದಿಕೆಯಾಗಿದೆ. ಈ ಮೂಲಕ ಇಂಗ್ಲೆಂಡ್ ಮತ್ತು ಭಾರತ ಪ್ರತಿಭಾಶಾಲಿ ಯುವತಿಯರಿಗೆ ಜಗತ್ತಿನ ಗಮನ ಸೆಳೆಯುವ ಅವಕಾಶ ನೀಡುತ್ತದೆ. ಒಂದು ದಿನದಲ್ಲಿ ಚೈತನ್ಯ ಅವರ ಅಡಿಯಲ್ಲಿ ಕೆಲಸ ಮಾಡುವುದು ನನ್ನ ಪಾಲಿಗೆ ಥ್ರಿಲ್ ಕೊಡುತ್ತದೆ. 215 ಮಂದಿಯ ಸ್ಪರ್ಧೆಯ ನಡುವೆ ಚೈತನ್ಯ ಈ ಅವಕಾಶ ಪಡೆದಿದ್ದಾರೆ ಎಂದು ಹೈಕಮಿಷನರ್ ಆಗಿರುವ ಜಾನ್ ಥಾಂಪ್ಸನ್ ಹೇಳಿದ್ದಾರೆ.
ಚೈತನ್ಯ ಒಂದು ದಿನದ ತಮ್ಮ ಸೇವೆಯಲ್ಲಿ ಹೈಕಮಿಷನ್ ಡಿಪಾರ್ಟ್ಮೆಂಟ್ ಮುಖ್ಯಸ್ಥರ ಸಭೆ ನಡೆಸುತ್ತಾರೆ. ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಗಳ ಜೊತೆ ಸಂವಾದ, ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಲು ಅವಕಾಶ ಇರಲಿದೆ. ಭಾರತೀಯ ಮಹಿಳೆಯರಿಗೆ ನೀಡುವ ಬ್ರಿಟಿಷ್ ಕೌನ್ಸಿಲಿನ ಸ್ಟೆಮ್ ಸ್ಕಾಲರ್ ಶಿಪ್ ಸೌಲಭ್ಯಕ್ಕೂ ಚಾಲನೆ ನೀಡುತ್ತಾರೆ.
Chaitanya Venkateswaran from New Delhi 'became' UK's senior-most diplomat in India for a day.
05-08-25 01:45 pm
Bangalore Correspondent
19 Peacocks Dead, Tumkuru: ಹುಲಿಗಳ ಹತ್ಯೆಯಾಯ್ತು...
05-08-25 12:44 pm
Bangalore Suicide, School Boy: ನಾನು ಈಗ ಸ್ವರ್ಗ...
04-08-25 01:00 pm
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
05-08-25 10:58 pm
HK News Desk
ಹಠಾತ್ ಮೇಘಸ್ಫೋಟಕ್ಕೆ ನಲುಗಿದ ಉತ್ತರಾಖಂಡ ; ಉತ್ತರಕಾ...
05-08-25 09:33 pm
ದೇಶದ ಅತಿ ದೀರ್ಘಾವಧಿಯ ಗೃಹ ಸಚಿವರಾಗಿ ಅಮಿತ್ ಷಾ ದಾ...
05-08-25 06:59 pm
ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ನ...
05-08-25 03:23 pm
ಯೆಮೆನ್ ಬಳಿಯ ಸಮುದ್ರದಲ್ಲಿ ಪ್ಯಾಸೆಂಜರ್ ಹಡಗು ಮುಳುಗ...
04-08-25 05:11 pm
05-08-25 10:34 pm
Mangalore Correspondent
Dharmasthala Case, Update, 11-12 spot: ಧರ್ಮಸ್...
05-08-25 08:22 pm
T-55 Battle Tank, Kadri, Mangalore: 1975ರ ಪಾಕ...
05-08-25 04:29 pm
Dcc Bank, Mangalore, Dr Udaya Kumar: ಸಹಕಾರ ಚಳ...
04-08-25 10:58 pm
Dharmasthala Case, Jayan T: ಧರ್ಮಸ್ಥಳ ಕೇಸ್, ಪೊ...
04-08-25 10:34 pm
06-08-25 11:04 am
Udupi Correspondent
Bangalore Cyber Fraud: 1.5 ಕೋಟಿ ರೂ. ಸೈಬರ್ ವಂಚ...
05-08-25 10:39 pm
ದೇಲಂತಬೆಟ್ಟು ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ; ಮೂವ...
03-08-25 10:11 pm
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm