ಬ್ರೇಕಿಂಗ್ ನ್ಯೂಸ್
07-09-22 09:40 pm HK News Desk ದೇಶ - ವಿದೇಶ
ನವದೆಹಲಿ, ಸೆ.7: ಕರ್ನಾಟಕದ ಕಾಲೇಜು ತರಗತಿಗಳ ಹಿಜಾಬ್ ನಿಷೇಧ ವಿಚಾರ ಈಗ ಸುಪ್ರೀಂ ಕೋರ್ಟಿನಲ್ಲಿ ತುರುಸಿನ ವಾದ- ವಿವಾದಕ್ಕೆ ಸಾಕ್ಷಿಯಾಗಿದೆ. ವಕೀಲರ ವಾದ ಕೇಳಿದ ನ್ಯಾಯಾಧೀಶರು, ನಿರ್ದಿಷ್ಟ ವಸ್ತ್ರ ಸಂಹಿತೆ ಮತ್ತು ತಮ್ಮ ಹಕ್ಕಿನ ಬಗ್ಗೆ ವಾದ ಮಾಡುವುದಾದರೆ, ವಸ್ತ್ರ ರಹಿತವಾಗಿಯೇ ಇರುತ್ತೇನೆ ಎಂಬ ಬಗ್ಗೆಯೂ ಹಕ್ಕು ಮಂಡಿಸಬಹುದಲ್ಲವೇ. ಇಂಥ ವಾದಗಳಿಗೆ ತಾರ್ಕಿಕ ಅಂತ್ಯ ಕೊಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿಜಾಬ್ ಪರ ವಕೀಲ ದೇವದತ್ತ ಕಾಮತ್, ಶಾಲೆಯಲ್ಲಿ ಯಾರು ಕೂಡ ವಸ್ತ್ರ ರಹಿತವಾಗಿ ಇರುವುದಿಲ್ಲ ಎಂದಿದ್ದಾರೆ.
ನ್ಯಾಯಾಧೀಶ ಹೇಮಂತ್ ಗುಪ್ತಾ ಮತ್ತು ವಕೀಲ ದೇವದತ್ತ ಕಾಮತ್ ನಡುವೆ ಬಿರುಸಿನ ವಾಗ್ಬಾಣಗಳು ಬಂದವು. ಈಗ ಪ್ರಶ್ನೆ ಇರುವುದು ಒಂದು ಸಮುದಾಯದವರು ಹಿಜಾಬ್ ಧರಿಸುವುದಾಗಿ ಹೇಳುವುದು ಮತ್ತು ಇತರೆಲ್ಲರು ವಸ್ತ್ರ ಸಂಹಿತೆಯೇ ಬೇಕೆನ್ನುವುದು. ಇತರ ಸಮುದಾಯದವರು ಹಿಜಾಬ್ ಬೇಕು ಅನ್ನುವ ಬಗ್ಗೆ ಹೇಳುವುದಿಲ್ಲ ಅಲ್ಲವೇ ಎಂದು ಹೇಮಂತ್ ಗುಪ್ತಾ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ವಕೀಲ ಕಾಮತ್, ವಿದ್ಯಾರ್ಥಿಗಳ ಪೈಕಿ ಹಲವರು ರುದ್ರಾಕ್ಷಿ ಅಥವಾ ಕ್ರಾಸ್ ಅನ್ನು ಧರಿಸಿಕೊಂಡು ಬರುವುದಿಲ್ಲವೇ. ಅದು ಧಾರ್ಮಿಕ ಸಂಕೇತ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು. ಅದಕ್ಕುತ್ತರಿಸಿದ ನ್ಯಾಯಾಧೀಶರು, ರುದ್ರಾಕ್ಷಿ ಅಥವಾ ಕ್ರಾಸ್ ಚಿಹ್ನೆಯನ್ನು ಶರ್ಟ್ ಒಳಗೆ ಧರಿಸಿರುತ್ತಾರೆ. ಯಾರು ಕೂಡ ಶರ್ಟ್ ಬಿಚ್ಚಿಸಿ ಒಳಗೇನು ಧರಿಸಿರುತ್ತಾರೆ ಎಂದು ನೋಡುವುದಿಲ್ಲ ಎಂದು ಹೇಳಿದರು.

ಕರ್ನಾಟಕ ಸರಕಾರ ತರಗತಿಯೊಳಗೆ ಹಿಜಾಬ್, ಸ್ಕಾರ್ಫ್ ಧರಿಸುವುದನ್ನು ನಿಷೇಧಿಸಿರುವ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲಾಗಿದೆ. ನ್ಯಾಯಾಧೀಶರಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ, ಈ ಕುರಿತ ಅರ್ಜಿಗಳ ವಾದವನ್ನು ಆಲಿಸುತ್ತಿದ್ದಾರೆ. ಧಾರ್ಮಿಕ ಹಕ್ಕು ಅನ್ನುವ ನೆಪದಲ್ಲಿ ತರಗತಿ ಒಳಗೆ ಎಲ್ಲವನ್ನೂ ಧರಿಸಬಹುದೇ.. ಶಾಲೆಯಲ್ಲಿ ವಸ್ತ್ರ ಸಂಹಿತೆ ಇರುವಾಗ ಧಾರ್ಮಿಕ ಹಕ್ಕೆಂದು ಅದನ್ನು ಉಲ್ಲಂಘಿಸುವುದು ಸರಿ ಕಾಣುತ್ತದೆಯೇ.. ಇದು ಮೂಲಭೂತ ಪ್ರಶ್ನೆಯಾಗುತ್ತದೆ. ಸಂವಿಧಾನದ ಆರ್ಟಿಕಲ್ 25ರ ಪ್ರಕಾರ ಧಾರ್ಮಿಕ ಸ್ವಾತಂತ್ರ್ಯ ಇದೆ. ಆದರೆ, ಧಾರ್ಮಿಕ ಹಕ್ಕಿನಲ್ಲಿ ಹಿಜಾಬ್ ಅನ್ನುವುದು ಅತ್ಯಂತ ಅಗತ್ಯದ ಪಾಲನೆಯೇ, ಅಲ್ಲವೇ ಅನ್ನುವುದು ಮುಖ್ಯವಾಗುತ್ತದೆ ಎಂದು ನ್ಯಾಯಾಧೀಶರು ಉಲ್ಲೇಖ ಮಾಡಿದ್ದರು.
ಸರಕಾರಿ ಸಂಸ್ಥೆಯಾಗಿರುವ ಸಂದರ್ಭದಲ್ಲಿ ಸಂವಿಧಾನದ ಪ್ರಕಾರ, ಧಾರ್ಮಿಕ ಹಕ್ಕು ಪಾಲನೆಗೆ ಅವಕಾಶ ಕೊಡಬೇಕೆನ್ನುವುದು ನಮ್ಮ ವಾದ. ಯಾಕಂದ್ರೆ, ಸಂವಿಧಾನದ ಪೀಠಿಕೆಯಲ್ಲಿಯೇ ಜಾತ್ಯತೀತ ಮತ್ತು ಎಲ್ಲ ಮತ, ಧರ್ಮಗಳಿಗೂ ಸಮಾನ ಅವಕಾಶ ಇದೆ ಎನ್ನುವುದು ಅದಕ್ಕೆ ಕಾರಣ ಅನ್ನೋದನ್ನು ಹಿಜಾಬ್ ಪರ ವಕೀಲರು ಕೋರ್ಟಿನಲ್ಲಿ ಇದಕ್ಕೂ ಮೊದಲು ವಾದಿಸಿದ್ದರು.
Justice Hemant Gupta of the Supreme Court on Wednesday told a lawyer arguing for the right to wear hijab in educational institutes that the right to freedom of expression, which includes dress, could not be taken to “illogical ends". “You can’t take it to illogical ends, right to dress will include right to undress?" Justice Gupta asked advocate Dev Datt Kamat, who then replied: “Nobody is undressing in a school."
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm