ಬ್ರೇಕಿಂಗ್ ನ್ಯೂಸ್
21-08-22 08:14 pm HK News Desk ದೇಶ - ವಿದೇಶ
ಪಂಜಾಬ್,ಆಗಸ್ಟ್ 21 ; ಬೆವರು ಸುರಿಸಿ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಮನೆ ನಿರ್ಮಾಣ ಮಾಡಿದ್ದ ಜಾಗದಲ್ಲಿ ಹೆದ್ದಾರಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದ್ದರಿಂದ ಮಂಡ್ಯದ ವ್ಯಕ್ತಿಯೋರ್ವ ಬರೋಬ್ಬರಿ 20 ಲಕ್ಷ ಖರ್ಚು ಮಾಡಿ, 65 ಅಡಿಗಳಷ್ಟು ದೂರಕ್ಕೆ ಮನೆ ಸ್ಥಳಾಂತರ ಮಾಡಿದ್ದ ಅದ್ಭುತ ಘಟನೆ ನಡೆದಿತ್ತು.
ಪಂಜಾಬ್ನ ಸಂಗ್ರೂರ್ನಲ್ಲಿ ರೈತ 1.5 ಕೋಟಿ ರೂಪಾಯಿ ಖರ್ಚು ಮಾಡಿ, ಎರಡು ಅಂತಸ್ತಿನ ಸುಂದರವಾದ ಮನೆ ನಿರ್ಮಿಸಿದ್ದಾರೆ. ಈ ಜಾಗದಲ್ಲಿ ಇದೀಗ ದೆಹಲಿ-ಅಮೃತಸರ್-ಕತ್ರಾ ಎಕ್ಸ್ಪ್ರೆಸ್ ವೇ ಮಾರ್ಗ ಹಾದು ಹೋಗಲಿದೆ. ಹೀಗಾಗಿ, ಸರ್ಕಾರ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿದೆ. ಜೊತೆಗೆ ಅವರಿಗೆ ಪರಿಹಾರದ ಮೊತ್ತವನ್ನು ನೀಡಿದೆ. ಆದರೆ, ಕಷ್ಟಪಟ್ಟು ಕಟ್ಟಿರುವ ಮನೆ ಬಿಟ್ಟು ಹೋಗಲು ಇಷ್ಟವಿಲ್ಲದ ಕಾರಣ ಸುಖ್ವಿಂದರ್ ಸಿಂಗ್ ಇದೀಗ 50 ಲಕ್ಷ ರೂಪಾಯಿ ಖರ್ಚು ಮಾಡಿ, 500 ಅಡಿಗಳಷ್ಟು ದೂರಕ್ಕೆ ಮನೆಯನ್ನು ಸ್ಥಳಾಂತರ ಮಾಡುತ್ತಿದ್ದಾರೆ. ಈಗಾಗಲೇ 250 ಅಡಿಗಳಷ್ಟು ಮನೆ ಸ್ಥಳಾಂತರಗೊಂಡಿದೆ.
ಕಷ್ಟಪಟ್ಟು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮನೆ ನಿರ್ಮಾಣ ಮಾಡಿದ್ದರಿಂದ ಸುಲಭವಾಗಿ ಕೆಡವಲು ಮನಸು ಬರುತ್ತಿಲ್ಲ. ಹೀಗಾಗಿ, ಪಂಜಾಬ್ ರೈತ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ತುಂಬಾ ಕಷ್ಟಪಟ್ಟು ಮನೆ ನಿರ್ಮಾಣ ಮಾಡಲಾಗಿದೆ. ಬಿಟ್ಟು ಹೋಗಲು ಮನಸು ಒಪ್ಪುತ್ತಿಲ್ಲ. ಹೀಗಾಗಿ, ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದಿದ್ದಾರೆ.
ಮನೆ ಸ್ಥಳಾಂತರ ಕಾರ್ಯ ಯಾವ ರೀತಿ:
ಜಾಕ್ಗಳನ್ನು ಮನೆಯ ಕೆಳಭಾಗದಲ್ಲಿ ಅಳವಡಿಸಿಸಲಾಗಿದ್ದು, ಅದರ ನೆರವಿನಿಂದ ಮನೆ ಎಳೆಯಲಾಗ್ತಿದೆ. ಇದಕ್ಕೋಸ್ಕರ ಅನೇಕ ಕಾರ್ಮಿಕರ ಬಳಕೆ ಮಾಡಲಾಗ್ತಿದ್ದು, ಈಗಾಗಲೇ 50 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂಬ ಮಾತು ಕೇಳಿ ಬಂದಿದೆ. 2017ರಲ್ಲಿ ಸುಖ್ವಿಂದರ್ ಸಿಂಗ್ ಈ ಮನೆ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದರು. ಈಗಾಗಲೇ ಸಂಪೂರ್ಣವಾಗಿ ಮನೆ ನಿರ್ಮಾಣವಾಗಿದ್ದು ಅದಕ್ಕೋಸ್ಕರ 1.5 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.
ದೆಹಲಿ-ಕತ್ರಾ ಎಕ್ಸ್‌ಪ್ರೆಸ್‌ವೇ ಭಾರತದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದಾಗಿದ್ದು, ಹರಿಯಾಣ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಮೂಲಕ 668 ಕಿ.ಮೀ ದೂರದ ಯೋಜನೆ ಇದಾಗಿದೆ. ಇದಕ್ಕಾಗಿ 37,525 ಕೋಟಿ ರೂ. ಮೀಸಲಿಡಲಾಗಿದೆ.
ಕಳೆದ ಕೆಲ ವರ್ಷಗಳ ಹಿಂದೆ ಮಂಡ್ಯ ತಾಲೂಕಿನ ಕೋಣನಹಳ್ಳಿ ಗ್ರಾಮದ ಮಲ್ಲಿಕಾರ್ಜುನ್ ಎಂಬಾತ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ದಶಪಥವಾಗಿ ವಿಸ್ತರಿಸುವ ಯೋಜನೆಗೋಸ್ಕರ ತಮ್ಮ ಮನೆ ಸ್ಥಳಾಂತರ ಮಾಡಿದ್ದರು. ಅದಕ್ಕೋಸ್ಕರ ಸುಮಾರು 20 ಲಕ್ಷ ರೂ ಖರ್ಚು ಮಾಡಲಾಗಿತ್ತು. ಇದಾದ ಬಳಿಕ 2020ರಲ್ಲೂ ಹಾಸನದಲ್ಲಿ ಸುರೇಶ್ ಎಂಬಾತ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕೋಸ್ಕರ ಮನೆ ಸ್ಥಳಾಂತರ ಮಾಡಿದ್ದರು.
A Punjab farmer is moving his two-storey house 500 feet away from its current location to facilitate the construction of an expressway. Sukhwinder Singh Sukhi, the farmer, is moving his home after the structure built on his field in Roshanwla village in Sangrur came in the way of the Delhi-Amritsar-Katra Expressway.
21-08-25 02:03 pm
HK News Desk
Mangalore Electric Auto, High Court: ಮಂಗಳೂರಿನ...
21-08-25 12:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಎಫ್ಎಸ್ಎಲ...
20-08-25 10:54 pm
Congress MP Sasikanth Senthil, Janardhana Red...
20-08-25 09:54 pm
Heart Attack, Mangalore, Bangalore: 3 ವರ್ಷದಲ್...
20-08-25 12:33 pm
21-08-25 12:54 pm
HK News Desk
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
21-08-25 03:44 pm
Mangalore Correspondent
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
MLA Vedavyas Kamath: ಶ್ರೀಕೃಷ್ಣ ಜನ್ಮಾಷ್ಟಮಿಯ ಸಂ...
20-08-25 10:19 pm
Ananya–Sujatha Bhatt Case, Lawyer Manjunath:...
20-08-25 04:28 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm