ಬ್ರೇಕಿಂಗ್ ನ್ಯೂಸ್
18-08-22 10:07 pm HK News Desk ದೇಶ - ವಿದೇಶ
ಮುಂಬೈ, ಆಗಸ್ಟ್ 18: ರಾಯಗಢ ಜಿಲ್ಲೆಯ ಕರಾವಳಿ ತೀರದಲ್ಲಿ ಅನಾಥ ಬೋಟಿನಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆಯಾಗಿರುವುದು 1993ರಲ್ಲಿ ಮುಂಬೈ ಸರಣಿ ಸ್ಫೋಟದ ಘಟನೆಯ ಭೀತಿ ಮರುಕಳಿಸುವಂತೆ ಮಾಡಿದೆ. ಅದು 1993ರ ಮಾರ್ಚ್ 12. ಮಧ್ಯಾಹ್ನ 1.30ರಿಂದ 3.40ರ ನಡುವೆ ಮುಂಬೈ ಮಹಾನಗರದ 12 ಕಡೆಗಳಲ್ಲಿ ಒಂದರ ನಂತರ ಮತ್ತೊಂದರಂತೆ ಸರಣಿಯಾಗಿ ಬಾಂಬ್ ಸ್ಫೋಟಗಳಾಗಿದ್ದವು. ಇಡೀ ದೇಶವನ್ನೇ ನಡುಗಿಸಿದ್ದ ಘಟನೆಯಲ್ಲಿ 250ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದರು. ಅಂದು ಕೂಡ ರಾಯಗಢ ಜಿಲ್ಲೆಯ ಕರಾವಳಿ ತೀರಕ್ಕೇ ಸ್ಫೋಟಕಗಳನ್ನು ಕಳಿಸಿಕೊಡಲಾಗಿತ್ತು ಅನ್ನೋದು ತನಿಖೆಯಲ್ಲಿ ತಿಳಿದುಬಂದಿತ್ತು.
ಜಗತ್ತಿನಲ್ಲೇ ಮೊದಲ ಬಾರಿಗೆ ಅತ್ಯಂತ ದೊಡ್ಡ ಮಟ್ಟದಲ್ಲಿ ನಡೆದಿದ್ದ ಭಯೋತ್ಪಾದಕ ಕೃತ್ಯ ಅದಾಗಿತ್ತು. ಆರ್ ಡಿಎಕ್ಸ್ ಮಾದರಿಯ ಸ್ಫೋಟಕಗಳನ್ನು ಕೂಡ ಮೊದಲ ಬಾರಿಗೆ ಅಂದು ಭಯೋತ್ಪಾದಕ ಕೃತ್ಯಕ್ಕೆ ಬಳಕೆ ಮಾಡಲಾಗಿತ್ತು. 150 ಸದಸ್ಯರಿದ್ದ ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ಎರಡೇ ದಿನಗಳಲ್ಲಿ ಭಯೋತ್ಪಾದಕ ಕೃತ್ಯವನ್ನು ಬೆನ್ನು ಹತ್ತಿತ್ತು. ಮಾಹಿಮ್ ಎನ್ನುವಲ್ಲಿ ಸ್ಕೂಟರ್ ಮತ್ತು ಮಾರುತಿ ಕಾರಿನಲ್ಲಿ ಆರ್ ಡಿಎಕ್ಸ್ ಸ್ಫೋಟಕ ಮತ್ತು ಗ್ರೆನೇಡ್ ಗಳನ್ನು ತುಂಬಿಸಿಟ್ಟಿದ್ದು ಪತ್ತೆಯಾಗಿತ್ತು. ಸ್ಫೋಟವಾಗದೇ ಉಳಿದಿದ್ದ ಸ್ಫೋಟಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಆವತ್ತು ಕೂಡ ಮುಂಬೈ ಬ್ಲಾಸ್ಟ್ ಆಗೋದಕ್ಕೂ ಎರಡು ತಿಂಗಳ ಮೊದಲೇ ರಾಯಗಢ ಜಿಲ್ಲೆಯ ಕರಾವಳಿ ತೀರಕ್ಕೆ ಭಾರೀ ಪ್ರಮಾಣದ ಸ್ಫೋಟಕಗಳು ರವಾನೆಯಾಗಿದ್ದವು. ದಾವೂದ್ ಇಬ್ರಾಹಿಂ, ಟೈಗರ್ ಮೆಮನ್, ಮೊಹಮ್ಮದ್ ದೋಸಾ ಅವರ ಕಳ್ಳಸಾಗಾಣಿಕಾ ತಂಡ ಸ್ಫೋಟಕಗಳನ್ನು ಕರಾವಳಿ ತೀರಕ್ಕೆ ತಲುಪಿಸಿತ್ತು. ರಾಯಗಢ ಜಿಲ್ಲೆಯ ಶ್ರೀವರ್ಧನ್ ಭಾಗದ ಶೆಖಾಡಿ ಮತ್ತು ಡಿಗ್ಗಿ ಜೆಟ್ಟಿ ಬಂದರುಗಳಿಗೆ 1993ರ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಸ್ಫೋಟಕಗಳನ್ನು ಮುಟ್ಟಿಸಿತ್ತು ಅನ್ನೋದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿತ್ತು. ತನಿಖೆಯ ಬಳಿಕ ಒಟ್ಟು 2313 ಕೇಜಿ ಆರ್ ಡಿಎಕ್ಸ್, 1132 ಕೇಜಿ ಜಿಲೆಟಿನ್ ಕಡ್ಡಿಗಳು, 63 ಎಕೆ-56 ರೈಫಲ್ ಗಳು, 496 ಹ್ಯಾಂಡ್ ಗ್ರೆನೇಡ್, 39 ಸಾವಿರ ರೌಂಡ್ಸ್ ಇದ್ದ ಎಕೆ-56 ರೈಫಲ್, 9 ಎಂಎಂ ಪಿಸ್ತೂಲ್ ಗಳನ್ನು ಪೊಲೀಸರು ಮುಂಬೈ, ಥಾಣೆ ಮತ್ತು ರಾಯಗಢ ಜಿಲ್ಲೆಯ ವಿವಿಧ ಕಡೆ ಪತ್ತೆ ಮಾಡಿದ್ದರು.
ಆರ್ ಡಿಎಕ್ಸ್ ಸ್ಫೋಟಕಗಳನ್ನು ಟೈಮರ್ ಫಿಕ್ಸ್ ಮಾಡಿ ಸಾರ್ವಜನಿಕ ಪ್ರದೇಶ, ಕೆಲವು ಕಟ್ಟಡಗಳ ಮೂಲೆಯಲ್ಲಿ ಫಿಕ್ಸ್ ಮಾಡಲಾಗಿತ್ತು. ಸ್ಕೂಟರ್, ಹಳೆ ಕಾರು, ಸೂಟ್ ಕೇಸ್ ಗಳಲ್ಲಿ ಬಾಂಬ್ ಗಳನ್ನು 15 ನಿಮಿಷದಿಂದ ಅರ್ಧ ಗಂಟೆಯ ಸಮಯದ ಅಂತರ ಇಟ್ಟುಕೊಂಡು ಬೇರೆ ಬೇರೆ ಕಡೆ ಫಿಕ್ಸ್ ಮಾಡಿದ್ದರು. ಮುಂಬೈನಲ್ಲಿ ಎಪ್ರಿಲ್ ತಿಂಗಳಲ್ಲಿ ನಡೆಯುವ ಶಿವ ಜಯಂತಿ ಸಂದರ್ಭದಲ್ಲಿ ಬಾಂಬ್ ಗಳನ್ನು ಸ್ಫೋಟಿಸಲು ಪ್ಲಾನ್ ಮಾಡಲಾಗಿತ್ತು. ಇದಕ್ಕಾಗಿ ದಾವೂದ್ ಸಹಚರ ಟೈಗರ್ ಮೆಮನ್, ಬಾಂಬ್ ತಯಾರಿ ಮತ್ತು ಫಿಕ್ಸ್ ಮಾಡುವಲ್ಲಿ ಪರಿಣತಿ ಪಡೆದಿದ್ದ 19 ಮಂದಿಯನ್ನು ಗುರುತಿಸಿದ್ದ. ಹಿಂದುಗಳನ್ನು ಗುರಿಯಾಗಿರಿಸಿ ದಾವೂದ್ ಇಬ್ರಾಹಿಂ ಮತ್ತು ಆತನ ತಮ್ಮ ಅನೀಸ್ ಇಬ್ರಾಹಿಂ ಬಾಂಬ್ ಸ್ಫೋಟದ ಸಂಚು ಹೆಣೆದಿದ್ದರು.
ಆದರೆ ಮಾರ್ಚ್ 9ರಂದು ಗುಲ್ಲು ಅಲಿಯಾಸ್ ಮೊಹಮ್ಮದ್ ಶೇಖ್ ಎಂಬಾತನನ್ನು ಪೊಲೀಸರು ಗಲಭೆ ಪ್ರಕರಣದಲ್ಲಿ ಬಂಧಿಸಿದ್ದರು. ಆತನ ವಿಚಾರಣೆ ವೇಳೆ, ಮುಂಬೈ ಮಹಾನಗರದಲ್ಲಿ ದೊಡ್ಡ ಸ್ಫೋಟಕ್ಕೆ ತಯಾರಿ ನಡೆಸಿರುವ ಬಗ್ಗೆ ಹೇಳಿಕೊಂಡಿದ್ದ. ಆದರೆ, ಆತನ ಹೇಳಿಕೆಯನ್ನು ಕೇಳಿ ಇವನೇನು ಸ್ಫೋಟ ನಡೆಸೋದು ಎಂದು ಪೊಲೀಸರು ನಕ್ಕಿದ್ದರು. ಗಂಭೀರವಾಗಿಯೂ ಪರಿಗಣಿಸಿರಲಿಲ್ಲ. ಗುಲ್ಲುವನ್ನು ಪೊಲೀಸರು ಬಂಧಿಸಿಟ್ಟಿದ್ದ ಸಿಟ್ಟಿನಲ್ಲಿ ಟೈಗರ್ ಮೆಮನ್ ಒಂದು ತಿಂಗಳ ಮೊದಲೇ ಬ್ಲಾಸ್ಟ್ ಕಾರ್ಯಾಚರಣೆಗೆ ಮುಂದಾಗಿದ್ದ. ಹಾಗಾಗಿ ಮಾರ್ಚ್ 12ರಂದೇ ಸರಣಿ ಟೈಮ್ ಬಾಂಬ್ ಗಳನ್ನು ಫಿಕ್ಸ್ ಮಾಡಿ, ಒಂದೊಂದೇ ಸ್ಫೋಟಗೊಳ್ಳುವಂತೆ ಮಾಡಿದ್ದ.
2017ರಲ್ಲಿ ಪ್ರಮುಖ ಆರು ಆರೋಪಿಗಳನ್ನು ತಪ್ಪಿತಸ್ಥರೆಂದು ಮುಂಬೈ ನ್ಯಾಯಾಲಯ ಘೋಷಣೆ ಮಾಡಿತ್ತು. ಅದರಲ್ಲಿ ಪೋರ್ಚುಗಲ್ ನಲ್ಲಿ ಅವಿತು ಕುಳಿತಿದ್ದ ಅಬು ಸಲೇಂ ಮತ್ತು ಯುಎಇಯಲ್ಲಿ ಅವಿತುಕೊಂಡಿದ್ದ ಮೊಹಮ್ಮದ್ ದೋಸಾ ಶಸ್ತ್ರಾಸ್ತ್ರಗಳನ್ನು ಮುಂಬೈನ ವಿವಿಧ ಕಡೆಗೆ ತಲುಪಿಸಿದ್ದ ಆರೋಪ ಎದುರಿಸಿದ್ದರು. ಇನ್ನಿತರ ಕೆಲವು ಆರೋಪಿಗಳನ್ನು ಪಾಕಿಸ್ಥಾನಕ್ಕೆ ಕಳಿಸಿಕೊಡುವಲ್ಲಿ ಶ್ರಮಿಸಿದ್ದ ಅನ್ನುವ ಆರೋಪ ತಾಹಿರ್ ಮರ್ಚಂಟ್ ಮೇಲಿತ್ತು. ಫಿರೋಜ್ ಅಬ್ದುಲ್ ರಶೀದ್ ಖಾನ್ ಮತ್ತು ರಿಯಾಜ್ ಸಿದ್ದಿಕಿ ರಾಯಗಢದಿಂದ ವಿವಿಧ ಕಡೆಗಳಿಗೆ ಸ್ಫೋಟಕಗಳನ್ನು ತಲುಪಿಸಿದ್ದರು. ಕರೀಮುಲ್ಲಾ ಶೇಖ್ ಎಂಬಾತ ಫೆಬ್ರವರಿ ತಿಂಗಳಲ್ಲಿ ರಾಯಗಢ ಜಿಲ್ಲೆಯ ಶೆಖಾಡಿ ಬಂದರು ಜೆಟ್ಟಿಗೆ ಸ್ಫೋಟಕಗಳನ್ನು ತಲುಪಿಸಿದ್ದ.
ಇದೀಗ ಅದೇ ರಾಯಗಢ ಜಿಲ್ಲೆಯ ಕರಾವಳಿ ತೀರಕ್ಕೆ ಅನಾಥ ಬೋಟಿನಲ್ಲಿ ಎಕೆ-47 ರೈಫಲ್ ಗಳು, ಭಾರೀ ಪ್ರಮಾಣದ ಸ್ಫೋಟಕಗಳು ರವಾನೆಯಾಗಿವೆ. ಯಾರು ಕಳುಹಿಸಿಕೊಟ್ಟಿದ್ದಾರೆ, ಯಾರಿಗಾಗಿ ಬಂದಿತ್ತು ಅನ್ನೋದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಇಡೀ ದೇಶವನ್ನೇ ನಡುಗಿಸಿದ್ದ 1993ರ ಸರಣಿ ಬಾಂಬ್ ಸ್ಫೋಟಕ್ಕೂ ಮುನ್ನ ಇದೇ ರಾಯಗಢ ಜಿಲ್ಲೆಯಲ್ಲಿ ಸ್ಫೋಟಕಗಳನ್ನು ಕಳಿಸಿಕೊಡಲಾಗಿತ್ತು ಅನ್ನೋದು ಆತಂಕವನ್ನು ಹುಟ್ಟಿಸುತ್ತದೆ.
As reports of a suspicious boat with guns, bullets, and explosives being found off the Raigad coast in Maharashtra emerged on Thursday, a familiar fear coursed through the district and neighbouring areas, including Mumbai.On March 12, 1993, a series of bomb blasts brought India’s financial capital, then known as Bombay, to a wailing stop. Twelve bombs went off within a span of two hours and ten minutes that rocked several parts of the city, killing over 250 people.The explosions were the first large-scale coordinated terror attack to be carried out in the world and were the first terror attack where RDX was used as an explosive.
21-08-25 02:03 pm
HK News Desk
Mangalore Electric Auto, High Court: ಮಂಗಳೂರಿನ...
21-08-25 12:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಎಫ್ಎಸ್ಎಲ...
20-08-25 10:54 pm
Congress MP Sasikanth Senthil, Janardhana Red...
20-08-25 09:54 pm
Heart Attack, Mangalore, Bangalore: 3 ವರ್ಷದಲ್...
20-08-25 12:33 pm
21-08-25 12:54 pm
HK News Desk
ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ, ಟ್ರಾಫಿಕ್...
20-08-25 10:56 pm
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
21-08-25 03:44 pm
Mangalore Correspondent
MRPL Accident, Mangalore: ಕಾಟಿಪಳ್ಳ ; ಟಿಪ್ಪರ್...
21-08-25 02:05 pm
Mahesh Shetty Timarodi, Udupi Police, BL Sant...
21-08-25 11:57 am
MLA Vedavyas Kamath: ಶ್ರೀಕೃಷ್ಣ ಜನ್ಮಾಷ್ಟಮಿಯ ಸಂ...
20-08-25 10:19 pm
Ananya–Sujatha Bhatt Case, Lawyer Manjunath:...
20-08-25 04:28 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm