ಬ್ರೇಕಿಂಗ್ ನ್ಯೂಸ್
03-10-20 12:11 pm Headline Karnataka News Network ದೇಶ - ವಿದೇಶ
ಶಿಮ್ಲಾ, ಅಕ್ಟೋಬರ್ 03: 20 ವರ್ಷಗಳ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಕಂಡಿದ್ದ ಕನಸು ಇಂದಿಗೆ ನನಸಾಗಿದೆ. ಈ ಐತಿಹಾಸಿಕ ಕ್ಷಣದೊಂದಿಗೆ ಅಟಲ್ ಕನಸು ನನಸಾಗಿದ್ದು ಮಾತ್ರವಲ್ಲ, ಹಿಮಾಚಲಪ್ರದೇಶದ ಜನರ ಬಹುಕಾಲದ ನಿರೀಕ್ಷೆಯೂ ಅಂತ್ಯಗೊಂಡಿದೆ. ಗಡಿಭಾಗದಲ್ಲಿ ಸೇನೆಯ ಕಾರ್ಯಾಚರಣೆಗೂ ಈ ಸುರಂಗ ಮಾರ್ಗ ಮಹತ್ವದ್ದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು, ಹಿಮಾಚಲಪ್ರದೇಶದ ಮನಾಲಿ ಮತ್ತು ಲೇಹ್ ನಡುವಿನ 9 ಕಿಮೀ ಉದ್ದದ ಅಟಲ್ ಸುರಂಗ ಮಾರ್ಗವನ್ನು ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್, ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಹಿಮಾಚಲಪ್ರದೇಶ ಸಿಎಂ ಜೈರಾಮ್ ಠಾಕೂರ್, ಕೇಂದ್ರ ಸಚಿವ ಅನುರಾಗ್ ಠಾಕೂರ್, ಬೋರ್ಡರ್ ರೋಡ್ ಆರ್ಗನೈಸೇಶನ್ ಸಂಸ್ಥೆಯ ಡೈರೆಕ್ಟರ್ ಜನರಲ್ ಹರ್ಪಾಲ್ ಸಿಂಗ್ ಉಪಸ್ಥಿತರಿದ್ದರು.
ಲೇಹ್ - ಲಡಾಖ್, ಮನಾಲಿಯ ಜನರಿಗೆ ಈ ಸುರಂಗ ಮಾರ್ಗವು ಜೀವಮಾನದ ಕೊಡುಗೆಯಾಗಲಿದೆ. ಹಿಮಪಾತದಿಂದಾಗಿ ಹಿಂದೆ ಈ ಭಾಗದ ಜನರು ಆರು ತಿಂಗಳ ಕಾಲ ಮನಾಲಿಗೆ ಹೋಗುವುದು ಸಾಧ್ಯವಾಗುತ್ತಿರಲಿಲ್ಲ. ಇನ್ನು ವರ್ಷಪೂರ್ತಿ ಈ ಹೆದ್ದಾರಿಯ ಮೂಲಕ ಮನಾಲಿ - ಲೇಹ್ ಸಂಪರ್ಕ ಮಾಡಬಹುದಾಗಿದೆ. ಗಡಿಯಲ್ಲಿ ರಸ್ತೆ, ಸೇತುವೆ, ಸುರಂಗ ಮಾರ್ಗಗಳ ರಚನೆಯಿಂದ ಈ ಭಾಗದ ಜನರಿಗೆ ಮಾತ್ರ ಉಪಯೋಗ ಆಗುವುದಲ್ಲ. ಇದರ ದೊಡ್ಡ ಲಾಭ ಸೇನಾ ಪಡೆಗೂ ಸಿಗಲಿದೆ ಎಂದು ಮೋದಿ ಹೇಳಿದರು.

9.02 ಕಿಮೀ ಉದ್ದದ ಈ ಸುರಂಗ ಮಾರ್ಗದಿಂದಾಗಿ ಮನಾಲಿ ಮತ್ತು ಲೇಹ್ ನಡುವೆ 46 ಕಿಮೀ ಅಂತರವನ್ನು ಕಡಿಮೆಗೊಳಿಸಿದೆ. ಅಲ್ಲದೆ, ಐದು ಗಂಟೆಗಳ ಸಮಯವನ್ನು ಉಳಿತಾಯ ಮಾಡಿದೆ. ಸಮುದ್ರ ಮಟ್ಟಕ್ಕಿಂತ 3 ಸಾವಿರ ಮೀಟರ್ ಎತ್ತರದಲ್ಲಿ 9 ಕಿಮೀ ಉದ್ದದ ಸುರಂಗ ಮಾರ್ಗ ನಿರ್ಮಿಸಿದ್ದು ಜಗತ್ತಿನಲ್ಲಿ ಇದೇ ಮೊದಲು. ಅತ್ಯಾಧುನಿಕ ಸೌಕರ್ಯಗಳೊಂದಿಗೆ ನಿರ್ಮಿಸಲಾಗಿರುವ ಈ ಸುರಂಗ ಮಾರ್ಗಕ್ಕೆ 3300 ಕೋಟಿ ರೂಪಾಯಿ ವೆಚ್ಚವಾಗಿದೆ. ದಿನದಲ್ಲಿ 3 ಸಾವಿರ ಕಾರು ಮತ್ತು 1500 ಟ್ರಕ್ ಗಳು 80 ಕಿಮೀ ವೇಗದಲ್ಲಿ ಸಾಗಬಲ್ಲ ರೀತಿಯಲ್ಲಿ ರಸ್ತೆಯ ಸಾಮರ್ಥ್ಯವನ್ನು ಮಾರ್ಪಡಿಸಲಾಗಿದೆ. ವಿಶೇಷ ಅಂದ್ರೆ, ಈ ಸುರಂಗ ಮಾರ್ಗ ಅತ್ಯಂತ ಕಡಿದಾದ ಕಣಿವೆಗಳು ಮತ್ತು ನದಿಗಳ ಅಡಿಭಾಗದಿಂದ ದಾಟಿಕೊಂಡು ಸಾಗಲಿದೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am