ಬ್ರೇಕಿಂಗ್ ನ್ಯೂಸ್
20-07-22 10:49 pm HK News Desk ದೇಶ - ವಿದೇಶ
ಕೋಲ್ಕತ್ತಾ, ಜುಲೈ 20 : 1988 ರ ಮೋಟಾರು ವಾಹನ ಕಾಯ್ದೆಯಡಿ ಒಬ್ಬ ಪೊಲೀಸ್ ಅಧಿಕಾರಿ ಯಾವುದೇ ವ್ಯಕ್ತಿಯ ಚಾಲನಾ ಪರವಾನಗಿಯನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್ ಹೇಳಿದೆ.
ಪೊಲೀಸರು ಡ್ರೈವಿಂಗ್ ಲೈಸೆನ್ಸ್ ವಶಕ್ಕೆ ಪಡೆದು ಪರವಾನಗಿ ಪ್ರಾಧಿಕಾರಕ್ಕೆ ಕಳುಹಿಸಿಕೊಡಬೇಕು. ಅದನ್ನು ಅಮಾನತು ಮಾಡುವ ಅಧಿಕಾರ ಪೊಲೀಸರಿಗೆ ಇರುವುದಿಲ್ಲ ಎಂದು ತೀರ್ಪು ಅಭಿಪ್ರಾಯ ಪಟ್ಟಿದೆ. ಅತಿ ವೇಗದ ಕಾರು ಚಾಲನೆಗಾಗಿ ನೋಟಿಸ್ ಪಡೆದಿದ್ದ ಎರಡು ವಾರದಲ್ಲಿ ಮತ್ತೊಮ್ಮೆ ಅಂತಹದ್ದೇ ಪ್ರಕರಣದಲ್ಲಿ ಸಿಲುಕಿದ್ದಕ್ಕಾಗಿ ಮಹಿಳೆಯೊಬ್ಬರ ಡ್ರೈವಿಂಗ್ ಲೈಸೆನ್ಸನ್ನು ಪೊಲೀಸರು ಅಮಾನತು ಮಾಡಿದ್ದರು. ಪ್ರಕರಣದಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಮಹಿಳೆ ಪರವಾಗಿ ತೀರ್ಪು ನೀಡಿದ್ದು ಆಕೆಗೆ ಡ್ರೈವಿಂಗ್ ಲೈಸೆನ್ಸ್ ಮರಳಿ ನೀಡುವಂತೆ ನ್ಯಾಯಮೂರ್ತಿ ಮೌಶುಮಿ ಭಟ್ಟಾಚಾರ್ಯ ಆದೇಶ ನೀಡಿದ್ದಾರೆ.
1988 ರ ಮೋಟಾರು ವಾಹನಗಳ ಕಾಯಿದೆ ಪ್ರಕಾರ, ಪರವಾನಗಿ ಪ್ರಾಧಿಕಾರವು ಮಾತ್ರ ಡ್ರೈವಿಂಗ್ ಲೈಸೆನ್ಸ್ ಅನ್ನು ರದ್ದುಪಡಿಸುವ ಅಧಿಕಾರ ಹೊಂದಿದೆ ಎಂದು ತಿಳಿಸಿದೆ. ಪರವಾನಗಿ ಪ್ರಾಧಿಕಾರದ ಸೆಕ್ಷನ್ 2(20) ರಲ್ಲಿ ಈ ಬಗ್ಗೆ ವ್ಯಾಖ್ಯಾನಿಸಲಾಗಿದ್ದು ಪರವಾನಗಿ ನೀಡುವ ಹಾಗೂ ರದ್ದು ಮಾಡುವ ಅಧಿಕಾರವನ್ನು ಹೊರತುಪಡಿಸಿ ಯಾವುದೇ ಅಧಿಕಾರವನ್ನು ಈ ಸಂಸ್ಥೆ ಒಳಗೊಂಡಿಲ್ಲ. 206 ಸೆಕ್ಷನ್ 19 ರ ಅಡಿಯಲ್ಲಿ ಅನರ್ಹಗೊಳಿಸುವುದು ಅಥವಾ ಹಿಂತೆಗೆದುಕೊಳ್ಳುವುದು ಪ್ರಾಧಿಕಾರದ ಅಧಿಕಾರವನ್ನು ಸೂಚಿಸುತ್ತದೆ. ಹೀಗಾಗಿ ಪೊಲೀಸರು ದಾಖಲೆಯನ್ನು ವಶಪಡಿಸಿಕೊಳ್ಳಲು ಮಾತ್ರ ಅಧಿಕಾರ ಹೊಂದಿರುತ್ತಾರೆ. ಅಗತ್ಯವಿದ್ದಲ್ಲಿ ಲೈಸೆನ್ಸ್ ಅನರ್ಹ ಮಾಡುವಂತೆ ಪರವಾನಗಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು' ಎಂದು ಕೋರ್ಟ್ ಜುಲೈ 19 ರಂದು ನೀಡಿದ ಆದೇಶದಲ್ಲಿ ಹೇಳಿದೆ.
In a significant ruling, the Calcutta High Court recently held that a police officer cannot disqualify the driving license of a person under the Motor Vehicles Act, 1988.Single-judge Justice Moushumi Bhattacharya said that only the licencing authority is empowered to issue and suspend the driving licence."The provisions of the Motor Vehicles Act, 1988 show that only a licensing authority can disqualify a person from holding or obtaining a driving licence or revoke such licence. Licensing authority has been defined in section 2(20) and does not include any authority other than an authority empowered to issue licences.
20-08-25 10:54 pm
Bangalore Correspondent
Congress MP Sasikanth Senthil, Janardhana Red...
20-08-25 09:54 pm
Heart Attack, Mangalore, Bangalore: 3 ವರ್ಷದಲ್...
20-08-25 12:33 pm
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
20-08-25 10:56 pm
HK News Desk
30 ದಿನ ಜೈಲು ಪಾಲಾದರೆ ಪ್ರಧಾನಿ, ಸಿಎಂ, ಸಚಿವರನ್ನು...
20-08-25 06:40 pm
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
20-08-25 10:19 pm
Mangalore Correspondent
Ananya–Sujatha Bhatt Case, Lawyer Manjunath:...
20-08-25 04:28 pm
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm