ಬ್ರೇಕಿಂಗ್ ನ್ಯೂಸ್
29-05-22 10:14 pm HK News Desk ದೇಶ - ವಿದೇಶ
ನವದೆಹಲಿ, ಮೇ 29: ಆಧಾರ್ ಕಾರ್ಡ್ ಪ್ರತಿಯನ್ನು ಎಲ್ಲ ಕಡೆಯೂ ಹಂಚಿಕೊಳ್ಳಬೇಡಿ, ಇದರಿಂದ ಅಪಾಯಕ್ಕೆ ಈಡಾಗಬಹುದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದ ಕೇಂದ್ರ ಸರಕಾರ, ಆ ಬಗ್ಗೆ ಭಾರೀ ಅಪಸ್ವರ ಕೇಳಿಬರುತ್ತಿದ್ದಂತೆ ತನ್ನ ಹೇಳಿಕೆಯನ್ನು ಹಿಂಪಡೆದಿದೆ. ಮೇ 27ರಂದು ಈ ಬಗ್ಗೆ ಆಧಾರ್ ಸಂಸ್ಥೆ (ಯುಐಡಿಎಐ)ಯಿಂದಲೇ ಹೇಳಿಕೆ ಬಿಡುಗಡೆ ಮಾಡಲಾಗಿತ್ತು.
ಆಧಾರ್ ಕಾರ್ಡನ್ನು ಯಾವುದೇ ಕಡೆಯೂ ಷೇರ್ ಮಾಡಬೇಡಿ. ಆಧಾರ್ ಫೋಟೋ ಕಾಪಿಯನ್ನು ಷೇರ್ ಮಾಡುವುದರಿಂದ ದುರುಪಯೋಗ ಆಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಸಂಖ್ಯೆ ಕಾಣುವಂತೆ ಆಂಶಿಕ ಕಾರ್ಡನ್ನು ಮಾತ್ರ ಕೊಡಿ. ಬ್ಯಾಂಕ್, ಇನ್ನಿತರ ಯಾವುದೇ ಸಂಸ್ಥೆಗಳಿಗೂ ಪೂರ್ತಿ ಕಾರ್ಡಿನ ಪ್ರತಿಯನ್ನು ಕೊಡಬೇಡಿ. ಆಂಶಿಕ ಆಧಾರ್ ಕಾರ್ಡ್ ಪ್ರತಿ ಬೇಕಿದ್ದಲ್ಲಿ myadhar.uidai.gov.in ಜಾಲತಾಣಕ್ಕೆ ಭೇಟಿ ಕೊಡಬಹುದು ಎಂದು ಮೇ 27ರಂದು ಹೇಳಿಕೆ ಬಿಡುಗಡೆ ಮಾಡಲಾಗಿತ್ತು.
ದೇಶಾದ್ಯಂತ ಬ್ಯಾಂಕ್ ಖಾತೆಗೆ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಮಾಡಿದ್ದರಿಂದ ಹೆಚ್ಚಿನ ಜನರು ಲಿಂಕ್ ಮಾಡಿದ್ದಾರೆ. ಆಧಾರ್ ಕಾರ್ಡಿನ ಪ್ರತಿಯನ್ನು ಹೆಚ್ಚಿನ ಅಗತ್ಯಗಳಿಗೆ ಹಂಚಿಕೆ ಮಾಡಿದ್ದಾರೆ. ಆದರೆ ಈಗ ಆಧಾರ್ ಕಾರ್ಡಿನ ಪ್ರತಿಯನ್ನು ಕೊಡಬೇಡಿ ಎಂದರೆ ಹೇಗೆ ಎಂದು ಜನರು ಪ್ರಶ್ನೆ ಮಾಡಿದ್ದರು. ಕೇಂದ್ರ ಸರಕಾರಕ್ಕೆ ಈ ಬಗ್ಗೆ ಪ್ರಶ್ನೆ ಮಾಡಿದ್ದಲ್ಲದೆ, ದುರುಪಯೋಗ ಆಗುತ್ತದೆ ಎಂಬ ಅಳುಕು ಇದ್ದರೆ ಯಾಕೆ ಲಿಂಕ್ ಮಾಡಲು ಹೇಳಿರುವುದು. ಈ ಮೊದಲು ಎಲ್ಲ ಕಡೆ ಆಧಾರ್ ಕಡ್ಡಾಯ ಮಾಡಿದ್ದು ಯಾಕೆ ಎಂದು ಜನರು ಪ್ರಶ್ನೆ ಮಾಡಿದ್ದರು.
ಈ ಬಗ್ಗೆ ಭಾನುವಾರ ಆಧಾರ್ ಸಂಸ್ಥೆಯಿಂದಲೇ ಮತ್ತೊಂದು ಹೇಳಿಕೆ ಬಿಡುಗಡೆ ಮಾಡಿದ್ದು, ಎಡವಟ್ಟು ಮುಚ್ಚಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಮೇ 27ರಂದು ಬೆಂಗಳೂರು ಸಂಸ್ಥೆಯಿಂದ ಆ ರೀತಿಯ ಹೇಳಿಕೆ ನೀಡಲಾಗಿತ್ತು. ಆಧಾರ್ ಪ್ರತಿಗಳಿಂದ ಫೋಟೋಶಾಪ್ ಮೂಲಕ ನಕಲಿ ಮಾಡಿ, ದುರುಪಯೋಗಿಸುವ ಸಾಧ್ಯತೆ ಇದೆಯೆಂದು ಹೇಳಲಾಗಿತ್ತು. ಅದರ ಬದಲಿಗೆ ಕೊನೆಯ ನಾಲ್ಕು ನಂಬರ್ ಕಾಣಿಸುವ ರೀತಿ ಆಧಾರ್ ಕೊಟ್ಟರೆ ಸಾಕು ಎಂದು ತಿಳಿಸಲಾಗಿತ್ತು. ಆದರೆ, ಜನರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದು, ತಪ್ಪು ಅಭಿಪ್ರಾಯ ಬರದಂತಾಗಲು ಹಳೆಯ ಎಚ್ಚರಿಕೆಯನ್ನು ಹಿಂಪಡೆಯಲಾಗಿದೆ ಎಂದು ಹೇಳಿಕೆ ನೀಡಿದೆ.
ಅಲ್ಲದೆ, ಆಧಾರ್ ಕಾರ್ಡ್ ಪ್ರತಿಯನ್ನು ಅಧಿಕೃತ ಸಂಸ್ಥೆಗಳು ಮಾತ್ರ ವ್ಯಕ್ತಿಯ ಗುರುತು ಪತ್ತೆಗಾಗಿ ಮಾತ್ರ ಪಡೆಯಬಹುದು. ಇತರೇ ಖಾಸಗಿ ಸಂಸ್ಥೆಗಳು, ಸಿನಿಮಾ ಕೇಂದ್ರಗಳು, ಹೊಟೇಲ್ ಗಳು ಆಧಾರ್ ಕೇಳಿ ಅದರ ಕಾಪಿ ತೆಗೆದಿಡುವುದಕ್ಕೆ ಅವಕಾಶ ಇಲ್ಲ. ಯಾವುದೇ ಖಾಸಗಿ ಸಂಸ್ಥೆಗಳು ಆಧಾರ್ ಕಾರ್ಡ್ ಪ್ರತಿ ನೀಡುವಂತೆ ಒತ್ತಾಯ ಪಡಿಸುವುದು ಆಧಾರ್ ಕಾರ್ಡ್ ಏಕ್ಟ್ -2016 ಪ್ರಕಾರ ಅಪರಾಧವಾಗಿರುತ್ತದೆ ಎಂದು ಹೇಳಿದೆ. ಇದಲ್ಲದೆ, ಆಧಾರ್ ಕಾರ್ಡ್ ದುರುಪಯೋಗ ಆಗದಂತೆ ತಡೆಯಲು ಸಂಸ್ಥೆಯು ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದಿದೆ.
The Unique Identification Authority of India (UIDAI) on Sunday withdrew its May 27 statement in which it cautioned people against sharing photocopy of Aadhaar with any organisation as it can be misused. " in view of the possibility of the misinterpretation of the Press Release, the same stands withdrawn with immediate effect," it said. The May 27 statement assumed significance as people have been asked to link their Aadhaar with PAN and a significant number of people have already done that. Aadhaar is also linked with bank accounts, which makes any vulnerability of Aadhaar data leak more worrisome.
19-08-25 11:13 am
Bangalore Correspondent
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
ಧರ್ಮಸ್ಥಳ ಪ್ರಕರಣ ; ಅಧಿವೇಶನದಲ್ಲಿ ಗೃಹ ಸಚಿವರ ಸ್ಪಷ...
18-08-25 10:47 pm
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
19-08-25 06:59 pm
HK News Desk
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
19-08-25 11:07 pm
Mangalore Correspondent
Mangalore Thokottu Sports Winner: ಕಂಪನಿ ಬ್ರಾಂ...
19-08-25 08:54 pm
Ullal Municipal Commissioner: ಉಳ್ಳಾಲ ನಗರಸಭೆಯಲ...
19-08-25 08:28 pm
Puttur, Baby, Sreekrishna J. Rao: ಬಿಜೆಪಿ ಮುಖಂ...
19-08-25 07:04 pm
Activists Mahesh Shetty Thimarodi, Harish Poo...
18-08-25 06:14 pm
19-08-25 10:52 pm
Mangalore Correspondent
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm
Ullal Police Raid, Sports Winners, Mangalore:...
19-08-25 12:41 pm