ಬ್ರೇಕಿಂಗ್ ನ್ಯೂಸ್
06-05-22 01:16 pm HK Desk News ಕರ್ನಾಟಕ
ಬೆಳಗಾವಿ, ಮೇ 6 : ದೆಹಲಿಯಿಂದ ಬಂದ ಕೆಲವರು ನನಗೆ ಎರಡೂವರೆ ಸಾವಿರ ಕೋಟಿ ರೆಡಿ ಮಾಡಿ, ಸಿಎಂ ಮಾಡ್ತೀವಿ ಅಂದಿದ್ರು ಅಂತಾ ಬಿಜೆಪಿ ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಜಕಾರಣದಲ್ಲಿ ಯಾರೂ ಅಲ್ಲಿ ಇಲ್ಲಿ ಹೋಗಿ ಹಾಳಾಗಬೇಡಿ. ನಿಮಗೆ ಟಿಕೆಟ್ ಕೊಡಿಸುತ್ತೇವೆ, ದೆಹಲಿ ಕರೆದುಕೊಂಡು ಹೋಗ್ತೀವಿ. ಸೋನಿಯಾ ಗಾಂಧಿ ಭೇಟಿ ಮಾಡಿಸ್ತೀವಿ, ಜೆ.ಪಿ.ನಡ್ಡಾರನ್ನ ಭೇಟಿ ಮಾಡಿಸ್ತೀವಿ ಅಂತಾರೆ. ದೆಹಲಿಯಿಂದ ಒಂದಷ್ಟು ಜನ ನನ್ನ ಬಳಿಯೂ ಬಂದಿದ್ದರು. ನಿಮ್ಮನ್ನು ಸಿಎಂ ಮಾಡ್ತೀವಿ, 2500 ಕೋಟಿ ಸಜ್ಜು ಮಾಡಿ ಇಡ್ರಿ ಅಂದಿದ್ರು. ನಾನು ಅಂದಿದ್ದೆ ಮಕ್ಕಳಾ, 2500 ಕೋಟಿ ಅಂದ್ರೆ ಏನ್ ಅಂತಾ ತಿಳಿದಿರಿ. ಆ ಎರಡೂವರೆ ಸಾವಿರ ಕೋಟಿ ಹೆಂಗ್ ಇಡೋದು. ಏನು ಕೋಣೆಯಲ್ಲಿ ಇಡೋದಾ ? ಗೋದಾಮಿನಲ್ಲಿ ಇಡೋದಾ? ಹಂಗ ಟಿಕೆಟ್ ಕೊಡ್ತೀನಿ ಅಂತ ರಾಜಕಾರಣದಲ್ಲಿ ಎಲ್ಲಾ ಕಡೆ ಮೋಸ ಮಾಡ್ತಾರೆ.
ನಾನು ವಾಜಪೇಯಿಯವರ ಕೈಯಲ್ಲಿ ಕೆಲಸ ಮಾಡಿದವನು. ಅಡ್ವಾಣಿ, ರಾಜನಾಥ ಸಿಂಗ್, ಅರುಣ್ ಜೇಟ್ಲಿ ನನ್ನ ಬಸನಗೌಡ ಅಂತ ಹೆಸರು ಹೇಳಿಯೇ ಕರೀತಿದ್ರು. ನನ್ನಂಥ ವ್ಯಕ್ತಿಗೆ ಹೇಳ್ತಾರೆ ಎರಡೂ ಸಾವಿರ ಕೋಟಿ ಸಜ್ಜು ಮಾಡಿ ಇಡಿ, ಸಿಎಂ ಮಾಡ್ತೀವಿ ಅಂತಾರೆ. ನಡ್ಡಾರ ಮನೆಗೆ ಕರೆದುಕೊಂಡು ಹೋಗ್ತೀವಿ, ಅಮಿತ್ ಶಾ ಮನೆಗೆ ಕರೆದುಕೊಂಡು ಹೋಗ್ತೀವಿ ಅಂತ ಹಿಂಗೆಲ್ಲಾ ನಡೀತಾವ. ಆಗ ಬಪ್ಪರೇ ಮಗನೇ ಅಂದೆ ನಾನು ಎಂಬುದಾಗಿ ಸಿಎಂ ಹುದ್ದೆಯ ಅಸಲಿ ವಿಚಾರವನ್ನು ಬಸನಗೌಡ ಪಾಟೀಲ್ ಯತ್ನಾಳ್ ಹೊರಗೆಡವಿದ್ದಾರೆ.
ಇನ್ನು ಎಲೆಕ್ಷನ್ ಸಮೀಪಿಸುತ್ತಿದ್ದಂತೆ ಎಲ್ಲಾ ಆರಂಭವಾಗುತ್ತದೆ. ಇನ್ನು ಒಂದ್ ವರ್ಷ ಆದ್ರೆ ಸಾಮೂಹಿಕ ವಿವಾಹ, 151 ಜೋಡಿ ವಿವಾಹ ಮಾಡ್ತೀವಿ ಅಂತಾ ಬರ್ತಾರೆ. ಅವರು ನಿಮ್ಮ ತಾಳಿ ಕಟ್ಟಿ ಉದ್ಧಾರ ಮಾಡಕ್ಕೆ ಬಂದಾರೇನು? ಅಲ್ಲಾ ಮುಂದೆ ಎಂಎಲ್‌ಎ ಎಲೆಕ್ಷನ್ ನಿಲ್ಲಾಕ ಬರ್ತಾರೆ. ನೋಟ್ ಬುಕ್ ವಿತರಣೆ, ತಾಳಿ ಭಾಗ್ಯ ಅಂತಾ ಮತ್ತೇನೇನೋ ಮಾಡ್ತಾರೆ. ನಾಟಕ ಚಾಲೂ ಆಯಿತು, ಇನ್ನ ಒಂದು ವರ್ಷ. ಯಾರು ಏನೇನೋ ಭಾಗ್ಯ ಕೊಡ್ತಾರೆ ತಗೋಳಿ. ವೋಟ್ ಮಾತ್ರ ಚಲೋ ಭಾಗ್ಯ ಇರೋರಿಗೆ ಕೊಡ್ರಿ.
ದಿಢೀರ್ ಸಾಮಾಜಿಕ ಕಾರ್ಯಕರ್ತರು ಹುಟ್ಟಿಕೊಳ್ತಾರೆ. ಬೆಂಗಳೂರದವರು ಬರ್ತಾರೆ, ನೋಟ್ ಬುಕ್ ವಿತರಣೆ, ಲಗ್ನ ಮಾಡಾಕ ಶುರು ಮಾಡ್ತಾರೆ. ನಾಟಕ ಮಾಡ್ತೀವಿ ಅಂದ್ರೆ ಹದಿನೈದು ಇಪ್ಪತ್ತು ಸಾವಿರ ಕೊಡ್ತಾರೆ. ನಾನು ರೊಕ್ಕ ಬಿಚ್ಚುವುದಿಲ್ಲ ಆದರೂ ಮಂದಿ ವೋಟ್ ಹಾಕ್ತಾರ. ಅಂವ ಏನಿದ್ರೂ ಮುಂದ ಒದರ್ತಾನ್ರಿ, ಬೆನ್ನಾಗ ಚಾಕೂ ಹಾಕಲ್ಲ ಅಂತಾರೆ ನನ್ನ ಬಗ್ಗೆ. ನಾನು ಯಾರಿಗೂ ಕಿರಿಕಿರಿ ಮಾಡಿಲ್ಲ. ನಾನು ವಿಜಯಪುರದಲ್ಲಿ ಆರಿಸಿ ಬಂದಿದ್ದು ಸುಲಭದ್ದಲ್ಲ. ಹೆಚ್ಚು ಕಡಿಮೆ ಪಾಕಿಸ್ತಾನ ಇದ್ದಂಗ ಐತಿ ಅಲ್ಲಿ ಆರಿಸಿ ಬಂದೇನಿ. ಏಕೆಂದರೆ ಅವರದ್ದು ಒಂದು ಲಕ್ಷ ವೋಟ್ ಇದ್ರೆ, ನಮ್ದು ಒಂದೂವರೆ ಲಕ್ಷ ವೋಟ್ ಅದಾವ್. ನಮ್ಮ ಮಂದಿ ಹೊರಗೆ ಬರ್ತಿರಲಿಲ್ಲ, ಈ ಸಲ ಹೇಳಿದೆ. ಹೊರಗೆ ಬರದಿದ್ರೆ ಪಾಕಿಸ್ತಾನ ಆಗ್ತೇತಿ ನೋಡಿ ಎಂದೆ ಆಗ ವೋಟ್ ಹಾಕಿದ್ರು ಎಂದು ತನ್ನ ಮನದಾಳ ಬಿಚ್ಚಿಟ್ಟರು ಬಸನಗೌಡ ಪಾಟೀಲ್. ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಯತ್ನಾಳ ಮಾಧ್ಯಮಕ್ಕೆ ಈ ಹೇಳಿಕೆ ನೀಡಿದ್ರು.
Some people from Delhi have paid a sum of Rs 2500 crore to the CM.He was speaking to reporters at Ramadurga in the district.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm