ಬ್ರೇಕಿಂಗ್ ನ್ಯೂಸ್
27-04-22 05:24 pm Bangalore Correspondent ಕರ್ನಾಟಕ
ಬೆಂಗಳೂರು, ಎ.27 : ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತ ಆರೋಪಿ ಸೌಮ್ಯ ನೀಡಿದ ಮಾಹಿತಿ ಮೇರೆಗೆ ಧಾರವಾಡ ವಿವಿಯಲ್ಲಿ ಭೂಗೋಳಶಾಸ್ತ್ರದ ಹಿರಿಯ ಪ್ರಾಧ್ಯಾಪಕರಾಗಿರುವ ವ್ಯಕ್ತಿಯನ್ನು ಮಲ್ಲೇಶ್ವರಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಧಾರವಾಡ ವಿಶ್ವವಿದ್ಯಾಲಯ ಮೌಲ್ಯಮಾಪನ ವಿಭಾಗದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನಾಗರಾಜ್ ಅವರಿಗೆ ಪ್ರಶ್ನೆಪತ್ರಿಕೆ ತಯಾರಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚನೆ ನೀಡಿತ್ತು. ಇದರಂತೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಾಗ ಭೂಗೋಳಶಾಸ್ತ್ರದ ಅತಿಥಿ ಉಪನ್ಯಾಸಕಿಯಾಗಿದ್ದ ಸೌಮ್ಯ ಅವರಿಗೆ ಪ್ರಶ್ನೆಗಳನ್ನು ಸಿದ್ಧಪಡಿಸಲು ನಾಗರಾಜ್ ಹೇಳಿದ್ದರು ಎನ್ನಲಾಗಿದೆ. ಇದರಂತೆ 17 ಪ್ರಶ್ನೆಗಳನ್ನ ಸಿದ್ದಪಡಿಸಿ ಸೌಮ್ಯ ನೀಡಿದ್ದರು. ಇದರಲ್ಲಿ 12 ಪ್ರಶ್ನೆಗಳನ್ನು ಉಳಿಸಿಕೊಂಡಿದ್ದರು. ಸದ್ಯ ನಾಗರಾಜ್ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಮೂಲತಃ ಮೈಸೂರಿನ ನಿವಾಸಿಯಾಗಿರುವ ಆರೋಪಿ ಸೌಮ್ಯ ಭೂಗೋಳ ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದರು. 2013 ರಿಂದ 2015ರ ವರೆಗೆ ಕೆ.ಆರ್. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
ನಂತರ ಮಾನಸ ಗಂಗೋತ್ರಿ ಮೈಸೂರು ವಿಶ್ವವಿದ್ಯಾಲಯಕ್ಕೆ ಸೇರ್ಪಡೆಯಾಗಿದ್ದರು. 2019 ರಿಂದ 20ರ ವರೆಗೆ ಭೂಗೋಳ ಶಾಸ್ತ್ರದಲ್ಲಿ ಪಿಹೆಚ್ಡಿ ಅಧ್ಯಯನ ಮಾಡಿದ್ದರು. ನಂತರ ಮಾನಸ ಗಂಗೋತ್ರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಮೈಸೂರಿನಲ್ಲಿ ಪಿಹೆಚ್ಡಿ ಅಧ್ಯಯನ ಮಾಡುತ್ತಿದ್ದ ಸೌಮ್ಯಾಳಿಗೆ ನಾಗರಾಜ್ ಮಾರ್ಗದರ್ಶಕರಾಗಿದ್ದರು. ಹೀಗಾಗಿ ಶಿಷ್ಯೆ ಸೌಮ್ಯಗೆ ಕೆಲವು ಪ್ರಶ್ನೆಗಳನ್ನ ಸಿದ್ಧಪಡಿಸಿ ಕಳಿಸುವಂತೆ ಸೂಚಿಸಿದ್ದರಂತೆ.
ಅದರಂತೆ ಸೌಮ್ಯ 17 ಪ್ರಶ್ನೆಗಳನ್ನ ಸಿದ್ಧಪಡಿಸಿ ಕಳುಹಿಸಿದ್ದರು. ಈ ಪೈಕಿ 12 ಪ್ರಶ್ನೆಗಳನ್ನ ಪ್ರೊಫೆಸರ್ ನಾಗರಾಜ್ ಯಥಾವತ್ತಾಗಿ ಉಳಿಸಿಕೊಂಡಿದ್ದರು. ಗುರುಗಳಿಗೆ ಕಳಿಸಿದ್ದ ಪ್ರಶ್ನೆಗಳನ್ನ ಪರೀಕ್ಷೆಗೆ ಅರ್ಧ ಗಂಟೆ ಮೊದಲು ಸೌಮ್ಯ ಸ್ನೇಹಿತೆಯರಿಗೆ ಕಳುಹಿಸಿದ್ದು ಪೇಚಿಗೆ ಸಿಲುಕಿದ್ದಾರೆ.
The question papers for the recruitment to posts of Assistant Professors were allegedly leaked to selected candidates, shocking the state.Malleshwaram police, that is investigating the case, has taken Nagaraj, of the Geography Department, into their custody and are questioning him on the scandal.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm