ಬ್ರೇಕಿಂಗ್ ನ್ಯೂಸ್
22-04-22 06:36 pm HK Desk news ಕರ್ನಾಟಕ
ಕಲಬುರ್ಗಿ, ಎ.22 : ಗಲಭೆಕೋರರ ವಿರುದ್ಧ ಯುಪಿ ಸಿಎಂ ಯೋಗಿಯ ರೀತಿಯಲ್ಲೇ ಬುಲ್ಡೋಜರ್ ಕಾರ್ಯಾಚರಣೆ ನಡೆಸಬೇಕೆಂಬ ಬೇಡಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು ಯಾವುದೇ ರೀತಿಯ ಕಾರ್ಯಾಚರಣೆ ನಡೆಸುವುದಕ್ಕೂ ನಮ್ಮಲ್ಲಿ ಕಾನೂನು ಇದೆ. ಗಲಭೆಯಲ್ಲಿ ಆಸ್ತಿ ಪಾಸ್ತಿ ಹಾನಿ ಮಾಡಿದರೆ ಅದನ್ನು ಆರೋಪಿಗಳ ಆಸ್ತಿಗಳಿಂದಲೇ ರಿಕವರಿ ಮಾಡಲು ಹೈಕೋರ್ಟ್ ನಿರ್ದೇಶನ ಇದೆ ಎಂದು ಹೇಳಿ ಬುಲ್ಡೋಜರ್ ಕಾರ್ಯಾಚರಣೆಯನ್ನೂ ನಡೆಸಬಲ್ಲೆ ಎನ್ನುವ ಸುಳಿವು ನೀಡಿದ್ದಾರೆ.
ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆ ನಂತರ ಹೈಕೋರ್ಟ್ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದೆ. ಯಾವ್ಯಾವ ಆಸ್ತಿಪಾಸ್ತಿಗೆ ಹಾನಿಯಾಗಿದೆ, ಅದನ್ನು ಅವರ ಆಸ್ತಿಗಳಿಂದಲೇ ರಿಕವರಿ ಮಾಡಲು ನಿರ್ದೇಶನ ಇದೆ. ಇದಕ್ಕಾಗಿ ಒಂದು ಕಮಿಷನ್ ಸಹ ನೇಮಿಸಲಾಗಿದೆ. ಹೀಗಾಗಿ ಗಲಭೆಕೋರರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ. ಅವುಗಳನ್ನು ನಾವು ಬಳಕೆ ಮಾಡುತ್ತೇವೆ ಎಂದು ಗಲಭೆಕೋರರರಿಗೆ ಸಿಎಂ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಹಿಂದೆ ತನಿಖೆ ನಡೆಸಿ ಯಾರನ್ನಾದ್ರೂ ಬಂಧಿಸಿದ್ದುಂಟೇ ?
ಪಿಎಸ್ಐ ನೇಮಕಾತಿ ಅಕ್ರಮ ಕುರಿತ ಪ್ರಶ್ನೆಗೆ, ಪ್ರಕರಣದಲ್ಲಿ ಆರೋಪಿ ದಿವ್ಯಾ ಹಾಗರಗಿ ಬಂಧನ ಖಂಡಿತ ಆಗುತ್ತೆ. ಈಗಾಗಲೇ ಅವರ ಪತಿಯನ್ನು ಸಿಐಡಿ ಅವರು ಅರೆಸ್ಟ್ ಮಾಡಿದ್ದಾರೆ. ನ್ಯಾಯಾಂಗ ತನಿಖೆ ಆಗಬೇಕು ಎನ್ನುವವರು ಇಷ್ಟು ದಿನ ಎಲ್ಲಿದ್ದರು ? ಈ ಅಕ್ರಮ ಗುರುತಿಸಿದ್ದೇ ನಾವು.. ನಾವೇ ಇದನ್ನ ಸಿಐಡಿ ತನಿಖೆಗೆ ಒಪ್ಪಿಸಿದ್ದೇವೆ. ನಾವು ಮುಕ್ತ ತನಿಖೆ ನಡೆಸುವುದರಿಂದಲೇ ಸಿಐಡಿ ಮುಕ್ತವಾಗಿ ಶಾಲೆಗಳ ಮೇಲೆ ರೇಡ್ ಮಾಡಿದೆ. ಹಿಂದೆಯೂ ನೇಮಕಾತಿಯಲ್ಲಿ ಅಕ್ರಮಗಳು ನಡೆದಿದ್ದವು. ಒಂದಾದ್ರೂ ತನಿಖೆಯಾಗಿದೆಯಾ ? ಯಾರನ್ನಾದ್ರೂ ಅರೆಸ್ಟ್ ಮಾಡಿದ್ದಾರಾ ? ಮೊದಲ ಬಾರಿಗೆ ನಾವೇ ಇದನ್ನು ತನಿಖೆಗೆ ಒಪ್ಪಿಸಿದ್ದು ಈಗಾಗಲೇ ಹಲವರನ್ನು ಅರೆಸ್ಟ್ ಮಾಡಿದ್ದೇವೆ. ಪ್ರಾಮಾಣಿಕರಿಗೆ ಅನ್ಯಾಯ ಆಗಬಾರದೆಂದು ನಾವು ತನಿಖೆ ಮಾಡುತ್ತಿದ್ದೇವೆ. ಯಾರೇ ತಪ್ಪಿತಸ್ಥರು ಇರಲಿ, ಅವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ನನ್ನ ಗನ್ ಮ್ಯಾನ್ ಅಲ್ಲ, ಆತ ಬಸವರಾಜ್ ಬೊಮ್ಮಾಯಿ ಕೊಟ್ಟ ಗನ್ ಮ್ಯಾನ್ ಎನ್ನುವ ಶಾಸಕ ಎಂ.ವೈ ಪಾಟೀಲ್ ಹೇಳಿಕೆಗೆ ತಿರುಗೇಟು ಕೊಟ್ಟ ಬೊಮ್ಮಾಯಿ, ಎಂ.ವೈ ಪಾಟೀಲ್ ಯಾರನ್ನ ಕೇಳಿದ್ದಾರೋ, ಅವರನ್ನ ಕೊಟ್ಟಿದ್ದೇವೆ. ತನ್ನ ಜೊತೆಗಿರುವ ಗನ್ ಮ್ಯಾನ್ ಬಗ್ಗೆ ಅವರಿಗೆ ಗೊತ್ತಿರಬೇಕು. ಏನ್ ನಡೀತಿದೆ ಎಲ್ಲಾ ಗೊತ್ತಿದ್ದೂ ಸುಮ್ಮನಿದ್ದು ಈಗ ನನಗೇನೂ ಗೊತ್ತಿಲ್ಲ ಅಂದ್ರೆ ಹೇಗೆ ? ಯಾರಾದ್ರೂ ನಂಬುವ ವಿಚಾರವೇ ಇದು ಎಂದು ಪ್ರಶ್ನೆ ಮಾಡಿದರು.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕರ್ನಾಟಕದ 40 ಪರ್ಸೆಂಟೇಜ್ ಸರ್ಕಾರ ತೆಗೆದು ಝೀರೋ ಪರ್ಸೆಂಟೆಜ್ ಸರ್ಕಾರ ತರುತ್ತೇವೆ ಎನ್ನುವ ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಕೇಜ್ರಿವಾಲ್ ಅವರ ಸುತ್ತಲೂ ಕುಳಿತವರು ಎಂಥವರಿದ್ದಾರೆ ? ಅವರ ಬ್ಯಾಗ್ರೌಂಡ್ ಏನಿದೆ ? ಪರ್ಸೆಂಟೇಜ್ ಬ್ಯಾಗ್ರೌಂಡ್ ಇದ್ದವರೇ ಅವರ ಹಿಂದೆ ಕೂತಿದ್ದಾರೆ. ಅಂಥವರಿಂದ ಏನಾದರೂ ಬದಲಾವಣೆಯಾಗಲು ಸಾಧ್ಯವಾ ? ಇದು ಗೊತ್ತಿಲ್ಲ ಅವರಿಗೆ ಎಂದು ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
CM Basavaraja Bommai has responded to the demand for a bulldozer campaign similar to that of a UP CM Yogi against rioters.
23-08-25 09:56 pm
Bangalore Correspondent
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
Mahesh Thimarodi, Kalladka Prabhakar Bhat: ಮಹ...
22-08-25 09:47 am
23-08-25 04:58 pm
HK News Desk
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
23-08-25 09:00 pm
Mangalore Correspondent
Veerendra Heggade Reacts, Dharmasthala News:...
23-08-25 07:25 pm
ಆನಂದಾಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ "ಡೆನ್ನ ಡೆ...
23-08-25 07:02 pm
Mask Man Dharmasthala, Arrest, SIT: ಧರ್ಮಸ್ಥಳ...
23-08-25 03:04 pm
Mervin Mendonca Accident, Udupi, Mangalore: ರ...
23-08-25 01:29 pm
23-08-25 06:21 pm
Mangaluru Correspondent
Dharmasthala Mask Man Arrest, SIT: ಧರ್ಮಸ್ಥಳ ಪ...
23-08-25 11:11 am
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm
Lucky Scheme, Shine Enterprises, Arrest, Mang...
22-08-25 09:17 pm
Mangalore Church, Moodbidri, Fraud: ಕಿಡ್ನಿ ವೈ...
21-08-25 11:00 pm