ಬ್ರೇಕಿಂಗ್ ನ್ಯೂಸ್
19-04-22 08:06 pm HK Desk news ಕರ್ನಾಟಕ
ವಿಜಯಪುರ, ಎ.19: ಹುಬ್ಬಳ್ಳಿ ಗಲಾಟೆಯಲ್ಲಿ ಆರ್ ಎಸ್ ಎಸ್ ಮುರ್ದಾಬಾದ್, ಐಎಸ್ಐ ಜಿಂದಾಬಾದ್ ಘೋಷಣೆ ವಿಡಿಯೋ ಕಂಡುಬಂದಿದ್ದು ಇದರ ಹಿಂದೆ ದೊಡ್ಡ ಷಡ್ಯಂತ್ರ ಇರುವ ಶಂಕೆಯಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮುಗ್ಧ, ಅಮಾಯಕ ಜನರನ್ನು ಬಂಧಿಸಬಾರದು ಅಂತ ಒಬ್ಬರು ನಾಯಕರು ಟ್ವಿಟ್ ಮಾಡ್ತಾರೆ ಎಂದು ಎಚ್ ಡಿ ಕೆ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಯತ್ನಾಳ್, ಅಮಾಯಕರು ಅಂತ ಇವರಿಗೆ ರಾತ್ರಿ ಕನಸು ಬಿದ್ದಿತ್ತಾ..? ಮುಸ್ಲಿಂ ವೋಟಿನ ಸಲುವಾಗಿ ದೇಶ ಮಾರಾಟಕ್ಕೆ ತಯಾರಾಗಿದ್ದಾರೆ. ಮುಂದಿನ ಬಾರಿ ಮುಸ್ಲಿಂ ವೋಟಿನಿಂದಷ್ಟೇ ಆಯ್ಕೆಯಾಗಿ ಬರ್ತೀರಾ..? ತಾಕತ್, ಧಮ್ ಇದ್ದರೆ ಆಯ್ಕೆಯಾಗಿ ಬನ್ನಿ ನೋಡೋಣ ಅಂತ ಸವಾಲು ಹಾಕಿದರು.
ಹಿಂದೂಗಳು ಯಾಕೆ ನಿಮಗೆ ವೋಟ್ ಹಾಕಬೇಕು. ನೀವು ಹಿಂದೂಗಳ ಮನೆ, ದೇಗುಲ ಮೇಲೆ ಕಲ್ಲು ಹೊಡೆದಿರುವ ಬಗ್ಗೆ ಖಂಡಿಸುವುದಿಲ್ಲ. ಪೊಲೀಸರ ಮೇಲೆ ಹಲ್ಲೆ ಮಾಡಿರೋದನ್ನು ಖಂಡಿಸುವುದಿಲ್ಲ. ನಾಳೆ ನಿಮ್ಮ ಸರ್ಕಾರ ಬಂದ್ರೆ ಪೊಲೀಸರಿಗೆ ಏನು ರಕ್ಷಣೆ ಕೊಡ್ತೀರಿ. ಅವರು ಹೇಳಿದ್ದಂತೆ ಸರ್ಕಾರ ನಡೆಸ್ತೀರಾ. ಈ ಎಲ್ಲಾ ಘಟನೆಗಳಿಂದ ನಿಮ್ಮ ಬಣ್ಣ ಬಯಲಾಗುತ್ತಿದೆ.
ನನ್ನ ಮಗನಿಗೆ ಗುಳಗಿ ಕೊಡಬೇಕು ಅಂತ ಅಳ್ತಾರೆ. ಇದು ನಾಟಕ ಅಂತ ಗೊತ್ತಿದೆ. ಇವರು ಯಾವಾಗ ಅಳತ್ತಾರೋ ಯಾವಾಗ ಕುತ್ತಿಗೆ ಕೊಯ್ತಾರೋ ಗೊತ್ತಿಲ್ಲ. ಕಾಶ್ಮೀರ ಫೈಲ್ ಸಿನಮಾ ಸತ್ಯ ಘಟನೆ. ಅದರಲ್ಲಿ ಸ್ವಲ್ಪ ಅಷ್ಟೇ ತೋರಿಸಿದ್ದಾರೆ. ಮುಸ್ಲಿಮರು ಶೇಕಡಾ 50 ರಷ್ಟಾದರೆ ಒಬ್ಬ ಹಿಂದೂವನ್ನು ಜೀವನ ಮಾಡೋಕೆ ಬಿಡಲ್ಲ. ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಏನಿದೆ ಗೊತ್ತಿಲ್ಲವೇ.. ಇದರ ಬಗ್ಗೆ ಒಮ್ಮೆಯಾದರೂ ಸಿದ್ದರಾಮಯ್ಯ, ಡಿಕೆಶಿ ಮಾತನಾಡ್ತಾರೆಯೇ.. ಮುಸ್ಲಿಮರು ಶೇಕಡಾ 50 ರಷ್ಟಾದರೆ ಯಾವ ಡಿಕೆಶಿ, ಸಿದ್ದರಾಮಯ್ಯ, ಎಂಬಿ ಪಾಟೀಲ್, ಕುಮಾರಣ್ಣಗೂ ವೋಟ್ ಹಾಕಲ್ಲ ಅವರು ಎಂದು ಹೇಳಿದರು.
ಆರೆಸ್ಸೆಸ್ ಇರೋದ್ರಿಂದ ದೇಶ ಉಳಿದಿದೆ, ಜನ ಸುರಕ್ಷಿತ ಇದ್ದಾರೆ !
ಆರ್ ಎಸ್ ಎಸ್ ಇರೋದ್ರಿಂದ ದೇಶ ಉಳಿದಿದೆ. ಆರ್ ಎಸ್ ಎಸ್ ಕಾರಣದಿಂದ ಹಿಂದೂಗಳು ಸುರಕ್ಷಿತವಾಗಿದ್ದಾರೆ. ದೇಶದಲ್ಲಿ ಆರ್ ಎಸ್ ಎಸ್ ಇರದಿರುತ್ತಿದ್ದರೆ, ನಮ್ಮ ದೇಶದಲ್ಲಿ ನೆಹರುನಂತಹ ಅಯೋಗ್ಯ ಪ್ರಧಾನ ಮಂತ್ರಿ ಇರುತ್ತಿದ್ದರು. ಅಂಥವರ ವಿರುದ್ಧ ಹೋರಾಟ ಮಾಡಿದ ಪರಿಣಾಮ ನಮ್ಮ ದೇಶದಲ್ಲಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಮಂತ್ರಿ, ಆರ್ ಎಸ್ ಎಸ್ ಮೂಲದವರೇ ಬಂದಿದ್ದಾರೆ. ಇದರಿಂದ ಜಗತ್ತಿನಲ್ಲಿ ಭಾರತ ಮೂರನೇ ಶಕ್ತಿಯಾಗಿದೆ. ಇಲ್ಲಾ ಅಂದ್ರೆ ಇವರ ಕೈಯಲ್ಲಿ ಕೊಟ್ಟಿದ್ದರೆ, ನೆಹರು ಕುಟುಂಬದ ಕೈಯಲ್ಲಿ ಕೊಟ್ಟಿದ್ದರೆ ರಾಹುಲ್ ಗಾಂಧಿ ಹ್ಯಾಂಗ್ ಅದಾನಲ್ಲ ನೋಡಿರಲ್ಲ. ಬಟಾಟೆಯಿಂದ ಬಂಗಾರ ತೆಗೀತಿನಿ ಅಂತಿದಾನೆ ರಾಹುಲ್ ಗಾಂಧಿ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದರು.
Yatnal slams HD Kumaraswami on Hindu Muslim riot in Hubli.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm