ಬ್ರೇಕಿಂಗ್ ನ್ಯೂಸ್
14-04-22 09:15 pm HK Desk news ಕರ್ನಾಟಕ
ತುಮಕೂರು, ಎ.14: ನಾನು ಸಚಿವ, ಶಾಸಕ, ಡಿಸಿಎಂ ಆಗಿದ್ದೇನೆ. ರಾಜ್ಯದಲ್ಲಿ ನಂಬರ್ ಟು ಪೊಸಿಶನ್ ಹೋಗಿದ್ದೇನೆ. ಆದ್ರೂ ನನನ್ನು ದೇವಸ್ಥಾನದೊಳಗೆ ಸೇರಿಸಲ್ಲ. ಹೀಗೆಂದು ಸಮಾಜದಲ್ಲಿ ಬೇರೂರಿರುವ ಜಾತಿ ವ್ಯವಸ್ಥೆಯ ಬಗ್ಗೆ ಬೇಜಾರು ಮಾತಾಡಿದ್ದಾರೆ, ಮಾಜಿ ಡಿಸಿಎಂ ಜಿ.ಪರಮೇಶ್ವರ್.
ಸ್ವಕ್ಷೇತ್ರ ಕೊರಟಗೆರೆಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಜಿ.ಪರಮೇಶ್ವರ್ ಈ ಹೇಳಿಕೆ ನೀಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಸಂದರೂ, ಜಾತಿ ವ್ಯವಸ್ಥೆಯನ್ನು ತೊಲಗಿಸಲು ಪಣ ತೊಟ್ಟು ಅಂಬೇಡ್ಕರ್ ಶ್ರೇಷ್ಠ ಸಂವಿಧಾನ ನೀಡಿದರೂ ನಮ್ಮಲ್ಲಿ ಸ್ಥಿತಿ ಬದಲಾಗಿಲ್ಲ. ನಾನು ದಲಿತ ಎಂಬ ಕಾರಣಕ್ಕೆ ದೇವಾಲಯದ ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಬಹಿರಂಗವಾಗಿಯೇ ಪರಮೇಶ್ವರ್ ಬೇಸರ ಹೊರಗೆ ಹಾಕಿದ್ದಾರೆ.
ನಾನು ಹಲವು ದೇಶಗಳನ್ನು ಸುತ್ತಾಡಿ ಬಂದಿದ್ದೇನೆ, ನಾನು ಶಾಸಕನಾಗಿದ್ದೇನೆ. ಎರಡು ಬಾರಿ ಸಚಿವನಾಗಿದ್ದೇನೆ, ರಾಜ್ಯದ ಅಧಿಕಾರ ಕೇಂದ್ರದಲ್ಲಿ ನಂಬರ್ ಟು ಆಗಿದ್ದೇನೆ. ಆದರೆ ನನಗೆ ದೇವಸ್ಥಾನಕ್ಕೆ ಸೇರಿಸಲ್ಲ. ನಾನು ದೇವಸ್ಥಾನಕ್ಕೆ ಹೋದ್ರೆ ಸ್ವಲ್ಪ ಸ್ವಲ್ಪ ಅಲ್ಲೇ ನಿಂತುಕೊಳ್ಳಿ ಎಂದು ಹೇಳಿ ಮಂಗಳಾರತಿ ತಟ್ಟೆ ತಂದು ಬಿಡ್ತಾರೆ. ನಾನು ಎಲ್ಲಿ ದೇವಾಲಯದೊಳಗೆ ಬಂದು ಬಿಡ್ತೀನೋ ಅಂತ ಹೀಗೆ ಮಾಡ್ತಾರೆ. ಇಂತಹ ಪರಿಸ್ಥಿತಿ ಈಗಲೂ ಸಮಾಜದಲ್ಲಿದೆ. ಅಂಬೇಡ್ಕರ್ ಹೆಸರಲ್ಲಿ ಜಯಂತಿ ಆಚರಣೆ ಮಾಡುತ್ತೇವೆ. ಆದರೆ ಜಾತಿ ವ್ಯವಸ್ಥೆಯ ತಾರತಮ್ಯ ಬದಲಾಗದ ಹೊರತು ಅಂಬೇಡ್ಕರ್ ಹೆಸರಲ್ಲಿ ಕಾರ್ಯಕ್ರಮ ಮಾಡಿ ಪ್ರಯೋಜನ ಇಲ್ಲ ಎಂದು ಕಾರ್ಯಕ್ರಮದ ವೇದಿಕೆ ಭಾಷಣದಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ.
A minister, a legislator, a DCM and gone to the number two position in the state, And it is not included in the temple. Former DCM G.Parameshwar said that the caste system is rooted in the society.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm