ಬ್ರೇಕಿಂಗ್ ನ್ಯೂಸ್
14-04-22 12:16 pm Bengaluru Correspondent ಕರ್ನಾಟಕ
ಬೆಂಗಳೂರು, ಎ.14: ಸಚಿವ ಈಶ್ವರಪ್ಪ ವಿರುದ್ಧ 40 ಶೇಕಡಾ ಕಮಿಷನ್ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಮೂಲತಃ ಕಾಂಗ್ರೆಸ್ ಕಾರ್ಯಕರ್ತ. ಕಾಂಗ್ರೆಸಿನ 40 ಶೇ. ಕಮಿಷನ್ ಆರೋಪದ ಟೂಲ್ ಕಿಟ್ ನಲ್ಲಿ ಸಂತೋಷ್ ಪಾಟೀಲ್ ಕೂಡ ಭಾಗವಾಗಿದ್ದ ಅನ್ನುವುದಕ್ಕೆ ಬಹಳಷ್ಟು ಸಾಕ್ಷ್ಯಗಳು ಸಿಕ್ಕಿವೆ. ಸಂತೋಷ್ ಒಬ್ಬ ಕಾಂಗ್ರೆಸಿನದ್ದೇ ಕಾರ್ಯಕರ್ತನಾಗಿದ್ದು ಆತನನ್ನು ಬಲಿ ಕೊಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿಯು, ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡಿದೆ. ಹಿಂದೊಮ್ಮೆ ರಾಹುಲ್ ಗಾಂಧಿಯ ಸಹಿಯನ್ನು ಪೋರ್ಜರಿ ಮಾಡಿದ್ದ ಆರೋಪದಲ್ಲಿ ಸಂತೋಷ್ ಪಾಟೀಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. 40 ಶೇಕಡಾ ಕಮಿಷನ್ ಅನ್ನುವುದು ಕಾಂಗ್ರೆಸಿನ ಟೂಲ್ ಕಿಟ್ ಭಾಗವಾಗಿದೆ. ಸಂತೋಷ್ ಪಾಟೀಲ್ ಇದನ್ನು ತನ್ನ ಡೆತ್ ನೋಟ್ ನಲ್ಲಿ ಬರೆದಿದ್ದಾರೆ ಎಂದು ಹೇಳಿದೆ.
ಸಂತೋಷ್ ಪಾಟೀಲ್, ಈ ಹಿಂದೆ ರಾಹುಲ್ ಗಾಂಧಿಯ ಸಹಿಯನ್ನು ಪೋರ್ಜರಿ ಮಾಡಿದ್ದು ಸುಳ್ಳೇ.. ಇದಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ಆತನನ್ನು ಉಚ್ಚಾಟನೆ ಮಾಡಿದ್ದು ಸುಳ್ಳೇ.. ಆತ ಕಾಂಗ್ರೆಸಿನ ಬೇನಾಮಿ ಅಧ್ಯಕ್ಷೆ ಬಗ್ಗೆ ಉದಾರ ಮನಸ್ಸು ಹೊಂದಿದ್ದು ಸುಳ್ಳೇ.. ಅಲ್ಲದೆ, ಸಂತೋಷ್ ಪಾಟೀಲ್ ಕಾಂಗ್ರೆಸಿನ ಬೇನಾಮಿ ಮಹಿಳಾ ಅಧ್ಯಕ್ಷೆ ಒಬ್ಬರ ಸೂತ್ರದ ಗೊಂಬೆಯಾಗಿದ್ದು ಅಲ್ಲವೇ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಕರ್ನಾಟಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ಪಡೆಯುವುದಕ್ಕಾಗಿ 2016ರಲ್ಲಿ ಸಂತೋಷ್ ಪಾಟೀಲ್ ತನಗೆ ರಾಹುಲ್ ಗಾಂಧಿಯ ಶಿಫಾರಸು ಇದೆಯೆಂದು ನಕಲಿ ಪತ್ರವೊಂದನ್ನು ಹಾಜರು ಪಡಿಸಿದ್ದ ಎನ್ನಲಾಗಿದ್ದು, ಈ ಬಗ್ಗೆ ಆತನ ವಿರುದ್ಧ ಕೇಸು ದಾಖಲಾಗಿತ್ತು. ಆಬಳಿಕ ಕಾಂಗ್ರೆಸ್ ಪಕ್ಷದಿಂದ ಪಾಟೀಲನ್ನು ಉಚ್ಚಾಟನೆ ಮಾಡಿದ್ದರು ಎನ್ನಲಾಗುತ್ತಿದ್ದು, ಆನಂತರ ಬಿಜೆಪಿ ಸೇರ್ಪಡೆಯಾಗಿದ್ದ.
ಬಿಜೆಪಿಯಲ್ಲಿ ಗುರುತಿಸಿಕೊಂಡು ಗುತ್ತಿಗೆದಾರನಾಗಿದ್ದ ಸಂತೋಷ್ ಪಾಟೀಲ್ ತನಗೆ ಹಳ್ಳಿಗಳಲ್ಲಿ ಮಾಡಿರುವ ಕಾಮಗಾರಿ ವಿಚಾರದಲ್ಲಿ ಬಿಲ್ ಪಾಸ್ ಮಾಡಿಲ್ಲ. ಇದಕ್ಕಾಗಿ ಸಚಿವ ಈಶ್ವರಪ್ಪ ಜೊತೆಗಿದ್ದವರು 40 ಶೇ. ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಎರಡು ದಿನಗಳ ಹಿಂದೆ ಉಡುಪಿಯಲ್ಲಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ಈಶ್ವರಪ್ಪ ಅವರೇ ಕಾರಣ ಎಂದು ಆರೋಪಿಸಿದ್ದರು.
The state BJP unit on Wednesday alleged that contractor Santosh Patil was originally a Congress worker, adding that he had carried out works without the required sanction from authorities.In a series of tweets, the official handle of the state BJP unit alleged that the 40% commission scam was a 'toolkit' developed by Congress. "Did Congress villains weave another plot to nurture this conspiracy?" BJP asked.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm