ಬ್ರೇಕಿಂಗ್ ನ್ಯೂಸ್
11-04-22 04:12 pm HK Desk news ಕರ್ನಾಟಕ
ಚಿಕ್ಕಮಗಳೂರು, ಎ.11 : ಯಾರೇ ಕಾನೂನನ್ನ ಕೈಗೆತ್ತಿಕೊಂಡ್ರೂ ಅದು ತಪ್ಪೇ. ಆದರೆ ಕಲ್ಲಂಗಡಿ ಹಣ್ಣಿನ ಬಗ್ಗೆ ಕನಿಕರ ತೋರಿಸುವವರು, ತಲೆ ಹೊಡೆದಾಗ ಯಾಕೆ ಕನಿಕರ ತೋರಿಸಲಿಲ್ಲ ಅನ್ನೋದನ್ನು ಕೇಳಬೇಕಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಕಲ್ಲಂಗಡಿ ವ್ಯಾಪಾರಿ ಬಗ್ಗೆ ಕುಮಾರಸ್ವಾಮಿ, ಸಿದ್ದರಾಮಯ್ಯ ಇಬ್ಬರ ಹೇಳಿಕೆಯನ್ನೂ ನಾನು ಗಮನಿಸಿದ್ದೇನೆ. ಅಖಂಡ ಶ್ರೀನಿವಾಸ್ ಅವರ ಮನೆಗೆ ಬೆಂಕಿ ಬಿದ್ದಾಗ ಎಲ್ಲರೂ ಸುಮ್ಮನಿದ್ದರು. ಕಲ್ಲಂಗಡಿ ಹಣ್ಣಿನ ಬಗ್ಗೆ ತೋರಿಸುವ ಕಳಕಳಿ, ಸಂಕಟವನ್ನ ತಲೆ ಹೊಡೆದಾಗಲೂ ತೋರಿಸಲಿ. ತಲೆ ಹೊಡೆದಾಗ ಯಾಕೆ ಎಲ್ಲರೂ ಸುಮ್ಮನಿರುತ್ತಾರೆ. ನಾವು ಖಂಡಿಸಿದರೆ ವೋಟು ಹೋಗುತ್ತೆ ಅನ್ನೋ ಸಂಕಟನಾ?ಎಂದು ಸೀಟಿ ರವಿ ಮಾರ್ಮಿಕ ಪ್ರಶ್ನೆ ಎತ್ತಿದ್ದಾರೆ. ಆದ್ರೆ ಕಾನೂನನ್ನ ಯಾರು ಕೈಗೆತ್ತಿಕೊಳ್ಳುವುದನ್ನೂ ನಾವು ಸಮರ್ಥಿಸುವುದಿಲ್ಲ. ಅಲ್ಲಿ ಯಾರು ತಪ್ಪು ಮಾಡಿದ್ದಾರೋ ಅವರ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಅವರಿಗೆ ಮಾತ್ರ ರಕ್ತ ಕೆಂಪಗೆ ಇರೋದಾ.. ನಮಗಿಲ್ವಾ?
ಚಂದ್ರು ಹತ್ಯೆ ಬಗ್ಗೆ ಸಚಿವರು ಮತ್ತು ಪೊಲೀಸರ ಪ್ರತ್ಯೇಕ ಹೇಳಿಕೆ ಕುರಿತು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ರವಿ, ಚಂದ್ರು ಹತ್ಯೆ ಕುರಿತು ಆತನ ತಾಯಿ, ಪ್ರತ್ಯಕ್ಷದರ್ಶಿ ಹೇಳಿಕೆ ಕೊಟ್ಟಿದ್ದಾರೆ. ಆದರೆ ಹತ್ಯಾ ಮೂಲ ಬಿಟ್ಟು ಬೇರೆಲ್ಲ ವಿಚಾರಗಳು ಚರ್ಚೆಯಾಗುತ್ತಿವೆ. ಹತ್ಯೆ ಮಾಡಿದ್ದೇ ಒಂದು ಅಪರಾಧ, ಅಂತಹ ಮನಸ್ಥಿತಿ ಇವರಿಗೆ ಯಾಕೆ ಬಂತು? ಈ ಬಗ್ಗೆ ಎಲ್ಲರೂ ಯೋಚನೆ ಮಾಡಬೇಕು. ಸಣ್ಣ ಸಣ್ಣ ವಿಚಾರಗಳಿಗೆ ಅವರು ಯಾಕೆ ಕೆರಳುತ್ತಾರೆ. ಅಖಂಡ ಶ್ರೀನಿವಾಸ್ ಮನೆಗೆ ಯಾಕೆ ಎಲ್ಲರೂ ಸೇರಿ ಬೆಂಕಿ ಹಾಕಿದ್ದರು ? ಅವರಿಗೆ ಮಾತ್ರ ರಕ್ತ ಕೆಂಪಗೆ ಇರೋದಾ, ನಮಗೆ ಇಲ್ವಾ.? ಹರ್ಷನ ಹತ್ಯೆ ಮಾಡುವ ಮನಸ್ಥಿತಿ ಯಾಕೆ ಬಂತು ? ಈ ಎಲ್ಲದರ ಬಗ್ಗೆ ಗಂಭೀರವಾಗಿ ಯೋಚನೆ ಮಾಡಲಿ ಎಂದು ಟಾಂಗ್ ನೀಡಿದ್ದಾರೆ.
Chikmagalur Right wing activists vandalise Muslim traders shop CT Ravi questions why congress shows so much concern where they never showed on people who were killed.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 03:36 pm
HK News Staffer
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm