ಬ್ರೇಕಿಂಗ್ ನ್ಯೂಸ್
24-03-22 10:30 am Bengaluru Correspondent ಕರ್ನಾಟಕ
ಬೆಂಗಳೂರು, ಮಾ.24 : ಕರಾವಳಿಯಲ್ಲಿ ಹಿಂದುಗಳ ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧ ಮಾಡಿರುವ ವಿಚಾರದ ಬಗ್ಗೆ ವಿಧಾನಸಭೆಯಲ್ಲಿ ತೀವ್ರ ಚರ್ಚೆ ನಡೆದಿದ್ದು ಶಾಸಕ ಯು.ಟಿ ಖಾದರ್ ಮಾತಿಗೆ ಕಾನೂನು ಸಚಿವ ಮಾಧುಸ್ವಾಮಿ ತಿರುಗೇಟು ನೀಡಿದ್ದಾರೆ.
ಮಂಗಳೂರಿನ ಶಾಸಕ ಯು.ಟಿ ಖಾದರ್ ವಿಷಯ ಪ್ರಸ್ತಾವಿಸಿ, ಬಪ್ಪನಾಡು ಇನ್ನಿತರ ದೇವಸ್ಥಾನಗಳ ಆವರಣದಲ್ಲಿ ವ್ಯಾಪಾರ ನಿರ್ಬಂಧಿಸಿ ಬ್ಯಾನರ್ ಹಾಕಲಾಗಿದೆ. ಇದರಿಂದ ಕೋಮು ಸಾಮರಸ್ಯ ಕದಡುವ ಯತ್ನ ನಡೆದಿದೆ. ದೇವಸ್ಥಾನದ ಕಮಿಟಿಗೆ ತಿಳಿಯದಂತೆ ಯಾರೋ ಹೆಸರಿಲ್ಲದೆ ಬ್ಯಾನರ್ ಹಾಕುತ್ತಿದ್ದಾರೆ. ಇಂಥ ಬ್ಯಾನರ್ ಹಾಕುತ್ತಿರುವವರು ಹೇಡಿಗಳು, ಕಿಡಿಗೇಡಿಗಳು. ಇಂಥವನ್ನು ನಿಯಂತ್ರಣ ಮಾಡಬೇಕಾದ ಸರಕಾರ ಮೌನವಾಗಿದೆ ಎಂದು ಹೇಳಿದರು.

ಖಾದರ್ ಹೇಡಿಗಳು ಎಂದು ಪದ ಬಳಸಿದ್ದಕ್ಕೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪಿಸಿದ್ದು ತೀವ್ರ ತರಾಟೆಗೆ ಎತ್ತಿಕೊಂಡಿದ್ದಾರೆ. ರೇಣುಕಾಚಾರ್ಯ ಸೇರಿ ಆಡಳಿತ ಪಕ್ಷದ ಸದಸ್ಯರು ಆಕ್ಷೇಪಿಸಿ, ಖಾದರ್ ಕ್ಷಮೆಗೆ ಆಗ್ರಹಿಸಿದ್ದಾರೆ. ಹೇಡಿಗಳು ಅನ್ನೋದು ಯಾರಿಗೆ.. ಇವರೇ ಈ ಹಿಂದೆ ಕಾನೂನು ಮಾಡಿದ್ದಲ್ವಾ ಎಂದು ಛೇಡಿಸಿದ್ದಾರೆ. ಬಳಿಕ ಸಭಾಧ್ಯಕ್ಷ ಕಾಗೇರಿ, ವಿಚಾರದ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ಉತ್ತರ ನೀಡುತ್ತಾರೆ ಎಂದು ಎಲ್ಲರನ್ನೂ ಸಮಾಧಾನಪಡಿಸಿದರು.

ಸದನಕ್ಕೆ ಉತ್ತರ ನೀಡಿದ ಮಾಧುಸ್ವಾಮಿ, 2002ರಲ್ಲಿ ನಿಮ್ಮದೇ ಕಾಂಗ್ರೆಸ್ ಸರಕಾರ ಇದ್ದಾಗ ಈ ವಿಚಾರದಲ್ಲಿ ಕಾನೂನು ಮಾಡಿದೆ. ಹಿಂದು ಮುಜರಾಯಿ ದೇಗುಲ ವ್ಯಾಪ್ತಿಯ ಸಂಬಂಧಪಟ್ಟ ಭೂಮಿ, ಕಟ್ಟಡಗಳಲ್ಲಿ ಹಿಂದುಯೇತರ ವ್ಯಕ್ತಿಗಳಿಗೆ ವಹಿವಾಟು ನಡೆಸಲು ಅವಕಾಶ ಇಲ್ಲ ಎಂದು ಕಾನೂನು ಇದೆ. ಹೀಗಿದ್ದರೂ, ನೀವು ಈ ಬಗ್ಗೆ ಪ್ರಶ್ನೆ ಮಾಡುತ್ತೀರಲ್ಲಾ.. ನೀವೇ ಮಾಡಿದ ಕಾನೂನು ಅಲ್ವಾ ಸಿದ್ದರಾಮಯ್ಯ ಅವರೇ.. ಈಗ ನಮಗೆ ಪ್ರಶ್ನೆ ಮಾಡುತ್ತೀರಿ. ಅಲ್ಲಿ ದೇವಸ್ಥಾನ ಆವರಣ ಬಿಟ್ಟು ಉಳಿದ ಕಡೆ ಅಂತಹ ಪ್ರಕರಣ ಆಗಿದ್ದಲ್ಲಿ ಅಥವಾ ಇತರೇ ಸಾರ್ವಜನಿಕ ಜಾಗದಲ್ಲಿ ಬ್ಯಾನರ್ ಹಾಕುವುದು, ವ್ಯಾಪಾರ ನಿರ್ಬಂಧಿಸುವುದು ಕಂಡುಬಂದಲ್ಲಿ ಸರಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಕಾನೂನು ಈಗ ಸರಿ ಮಾಡಬಹುದಲ್ವಾ ಎಂದು ಖಾದರ್ ಮರು ಪ್ರಶ್ನೆ ಹಾಕಿದರು. ಸರಿ ಮಾಡೋದು ಆಮೇಲೆ. ಈಗ ಕಾನೂನು ಹೀಗೆ ಇದೆ ಎನ್ನುವುದನ್ನು ಸದನಕ್ಕೆ ತಿಳಿಸಿದ್ದೇನೆ ಎಂದರು ಮಾಧುಸ್ವಾಮಿ.
Banners banning Muslims shops, MLA UT Khader slams Bjp party, says those who fixed those banners are cowards for which the opposition had heated arguments in Vidhana Soudha. Banners have been put up in various temples’ annual fairs in coastal Karnataka stating that Muslim shopkeepers would be banned from setting up stalls or shops. According to locals, most of the temple committees came under the pressure of right-wing groups to exclude Muslim shops and not allow them to do business.
03-02-26 11:53 am
Bangalore Correspondent
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
Manjeshwar Murder: ಆಸ್ತಿ ವಿಚಾರದಲ್ಲಿ ಗಲಾಟೆ ; ಬ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
03-02-26 11:55 am
HK News Desk
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm