ಬ್ರೇಕಿಂಗ್ ನ್ಯೂಸ್
02-03-22 10:55 pm HK Desk news ಕರ್ನಾಟಕ
ಹಾವೇರಿ, ಮಾ.2: ನಮ್ಮ ಕರ್ನಾಟಕದಲ್ಲಿ ಮೆಡಿಕಲ್ ಇಂಜಿನಿಯರಿಂಗ್ ಕಾಲೇಜು ಹೆಸರಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಶಿಕ್ಷಣಕ್ಕಾಗಿ ಮೆಡಿಕಲ್ ಕಾಲೇಜು ತೆಗೆದಿಲ್ಲ, ಲೂಟಿ ಮಾಡಲು ತೆಗೆದಿದ್ದಾರೆ. ಇಲ್ಲಿ ಮೆಡಿಕಲ್ ವಿದ್ಯಾಭ್ಯಾಸ ಮಾಡಲು ಸೌಲತ್ತು ಇಲ್ಲ. ಇದ್ದರೂ ಕೋಟಿಗಟ್ಟಲೆ ಹಣ ಬೇಕು. ಮೆಡಿಕಲ್ ಕಾಲೇಜು ನಡೆಸುತ್ತಿರುವವರೇ ಇಂದು ನವೀನ್ ಜೀವ ತೆಗೆದಿದ್ದಾರೆ ಎಂದು ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಹರಿಹಾಯ್ದಿದ್ದಾರೆ.
ಯುಕ್ರೇನಲ್ಲಿ ರಷ್ಯಾ ಬಾಂಬ್ ದಾಳಿಗೆ ಬಲಿಯಾದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಮೆಡಿಕಲ್ ವಿದ್ಯಾರ್ಥಿ ನವೀನ್ ಮನೆಗೆ ಭೇಟಿಯಿತ್ತು ಮನೆಯವರಿಗೆ ಸಾಂತ್ವನ ಹೇಳಿ ಸರಕಾರ, ವ್ಯವಸ್ಥೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವೀನ್ ಸ್ವರ್ಗಸ್ಥನಾಗಿದ್ದಾನೆ, ಈ ಘಟನೆ ನಡೆಯಬಾರದಾಗಿತ್ತು. ಯಾರದೋ ದೇಶದ ಯುದ್ದದಲ್ಲಿ ನಮ್ಮವರು ಬಲಿಯಾಗುವಂತದ್ದು ದುರಂತ. ತಮ್ಮ ದೇಶಕ್ಕೆ ಬಂದವರನ್ನು ಕಾಪಾಡುವುದು ಅವರ ಕರ್ತವ್ಯ. ಬೇರೆ ದೇಶಕ್ಕೆ ಹೋದವರನ್ನು ಕರೆ ತರುವುದು ನಮ್ಮ ಕರ್ತವ್ಯ. ರಾಜ್ಯದ ಕೇಂದ್ರ ಮಂತ್ರಿಗಳು ಮತ್ತು ಇದೇ ಜಿಲ್ಲೆಯ ಸಿಎಂಗೆ ಈ ಬಗ್ಗೆ ಆಗ್ರಹ ಮಾಡುತ್ತೇನೆ. ಉಕ್ರೇನಲ್ಲಿರುವ ಮಕ್ಕಳನ್ನು ಜೊತೆಗೆ ಅಲ್ಲಿರುವ ಜನರನ್ನು ಕರೆತರವುದು ವೇಗವಾಗಿ ಆಗಬೇಕು. ಇದಕ್ಕಾಗಿ ಏನು ಮಾಡಬೇಕೋ ಅದನ್ನು ಮಾಡಿ ಎಂದು ಆಗ್ರಹಿಸಿದರು.
ಎಂಬಿಬಿಎಸ್ ಕಲಿತ ರ್ಯಾಂಕ್ ಸ್ಟೂಡೆಂಟನ್ನು ಕಳೆದುಕೊಂಡಿದ್ದು ನಮ್ಮ ಸಮಾಜದ ದುರಂತ. ಇನ್ನು ಒಂದೇ ವರ್ಷದಲ್ಲಿ ವೈದ್ಯನಾಗಬೇಕಾದವನು ಇಲ್ಲ ಎಂದರೆ ಕುಟುಂಬಕ್ಕೆ ನೋವು ಆಗುತ್ತೆ. ಆದರೆ ನವೀನ್ ಮೃತದೇಹವನ್ನಾದ್ರು ಕೇಂದ್ರ ಸರಕಾರ ತಂದು ಕೊಡಬೇಕು. ಅವರ ಸಹೋದರ ಹರ್ಷನಿಗೆ ಸರ್ಕಾರಿ ನೌಕರಿ ಕೋಡಬೇಕು. ಇಲ್ಲವಾದಲ್ಲಿ ಶ್ರೀರಾಮ್ ಸೇನೆ ಉಗ್ರ ಹೋರಾಟಕ್ಕೆ ಮುಂದಾಗುತ್ತದೆ ಎಂದು ಎಚ್ಚರಿಸಿದರು.
Pramod Muthalik slams medical college, says college responsible for the death of Naveen in Ukraine
23-08-25 10:40 pm
Bangalore Correspondent
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
23-08-25 04:58 pm
HK News Desk
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
23-08-25 10:22 pm
Mangalore Correspondent
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
ಆನಂದಾಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ "ಡೆನ್ನ ಡೆ...
23-08-25 07:02 pm
Mask Man Dharmasthala, Arrest, SIT: ಧರ್ಮಸ್ಥಳ...
23-08-25 03:04 pm
23-08-25 06:21 pm
Mangaluru Correspondent
Dharmasthala Mask Man Arrest, SIT: ಧರ್ಮಸ್ಥಳ ಪ...
23-08-25 11:11 am
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm
Lucky Scheme, Shine Enterprises, Arrest, Mang...
22-08-25 09:17 pm
Mangalore Church, Moodbidri, Fraud: ಕಿಡ್ನಿ ವೈ...
21-08-25 11:00 pm