ಅಳಂದಾ ಪಟ್ಟಣ ಉದ್ವಿಗ್ನ ; ಶಿವರಾತ್ರಿ ಉತ್ಸವಕ್ಕೆ ದರ್ಗಾದ ಒಳಗಿದ್ದ ಶಿವಲಿಂಗಕ್ಕೆ ಪೂಜೆ, ಕಲ್ಲು ತೂರಾಟ, ದೊಣ್ಣೆ ಹಿಡಿದು ಹಲ್ಲೆಗೆ ಮುಂದಾದ ಯುವಕರು, ಪೊಲೀಸರ ಲಾಠಿಚಾರ್ಜ್ !  

01-03-22 06:36 pm       HK Desk news   ಕರ್ನಾಟಕ

ವ್ಯಾಪಕ ವಿರೋಧ, ಕಲ್ಲು ತೂರಾಟದ ಮಧ್ಯೆಯೇ ಕೇಂದ್ರ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ ಹಿಂದು ಸಂಘಟನೆಗಳ ಪ್ರಮುಖರು ಮುಸ್ಲಿಮರ ದರ್ಗಾದ ಆವರಣದಲ್ಲಿರುವ ಅತ್ಯಂತ ಪುರಾತನ ಎನ್ನಲಾದ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ.

ಕಲಬುರ್ಗಿ, ಮಾ.1: ವ್ಯಾಪಕ ವಿರೋಧ, ಕಲ್ಲು ತೂರಾಟದ ಮಧ್ಯೆಯೇ ಕೇಂದ್ರ ಸಚಿವ ಭಗವಂತ ಖೂಬಾ ನೇತೃತ್ವದಲ್ಲಿ ಹಿಂದು ಸಂಘಟನೆಗಳ ಪ್ರಮುಖರು ಮುಸ್ಲಿಮರ ದರ್ಗಾದ ಆವರಣದಲ್ಲಿರುವ ಅತ್ಯಂತ ಪುರಾತನ ಎನ್ನಲಾದ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ. ಸೀಮಿತ ಹತ್ತು ಮಂದಿ ಪೂಜೆ ಸಲ್ಲಿಸಿ ಹೊರಬರುತ್ತಿದ್ದಂತೆ ಹಿಂದು- ಮುಸ್ಲಿಮರ ಮಧ್ಯೆ ಘೋಷಣೆಗಳ ವಿನಿಮಯ ಮತ್ತು ಕಲ್ಲು ತೂರಾಟ ಆಗಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿ ಜನರನ್ನು ಚದುರಿಸಿದ್ದಾರೆ.

ಕಲಬುರ್ಗಿ ಜಿಲ್ಲೆಯ ಅಳಂದಾ ಪಟ್ಟಣದಲ್ಲಿರುವ ಹಳೆಯ ಲಾಡ್ಲೆ ಮಶಾಕ್ ದರ್ಗಾ ಕಟ್ಟಡದ ಆವರಣದಲ್ಲಿ ರಾಘವ ಚೈತನ್ಯ ಶಿವಲಿಂಗ ಇದ್ದು, ಅದಕ್ಕೆ ಪೂಜೆ ಸಲ್ಲಿಸಲು ಹಿಂದುಗಳಿಗೆ ಅವಕಾಶ ಇರಲಿಲ್ಲ. ಈ ಬಾರಿ ಶಿವರಾತ್ರಿಯಂದು ನಾವು ಪೂಜೆ ಸಲ್ಲಿಸುತ್ತೇವೆಂದು ಹಿಂದು ಸಂಘಟನೆಗಳು ಶಪಥ ಮಾಡಿದ್ದು, ಅದಕ್ಕಾಗಿ ಉತ್ತರ ಕರ್ನಾಟಕದ ಹಲವೆಡೆಯಿಂದ ಸಂಘಟನೆಗಳ ಕಾರ್ಯಕರ್ತರು ಅಳಂದಾ ಪಟ್ಟಣಕ್ಕೆ ತೆರಳಿದ್ದರು. ಆದರೆ, ಪೊಲೀಸರು ದರ್ಗಾದ ಒಳಗೆ ಹೋಗಲು ಅವಕಾಶ ನೀಡಲಿಲ್ಲ. ಪ್ರಮೋದ್ ಮುತಾಲಿಕ್ ಮತ್ತು ಚೈತ್ರಾ ಕುಂದಾಪುರ ಬರದಂತೆ ನಿಷೇಧ ಹಾಕಲಾಗಿತ್ತು.

ದರ್ಗಾದ ಒಳಗೆ ಹೋಗಲು ಬಿಡಲ್ಲ ಎಂದು ಮುಸ್ಲಿಮರು ಕೂಡ ಪಟ್ಟು ಹಿಡಿದಿದ್ದರು. ಕೈಯಲ್ಲಿ ದೊಣ್ಣೆ, ಕೋಲು ಹಿಡಿದು ಹಿಂದುಗಳನ್ನು ಅಟ್ಟಿಸುತ್ತೇವೆಂದು ಎಂದು ಯುವಕರು ಒಂದೆಡೆ ಸೇರಿದ್ದರು. ಎರಡೂ ಕಡೆಯಲ್ಲಿ ಸಾಕಷ್ಟು ಜನರು ಸೇರಿದ್ದರಿಂದ ಪೊಲೀಸರನ್ನು ಹೆಚ್ಚುವರಿಯಾಗಿ ನಿಯೋಜನೆ ಮಾಡಲಾಗಿತ್ತು. ಕೊನೆಗೆ, ಹತ್ತು ಮಂದಿಗೆ ಮಾತ್ರ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ಸಚಿವ ಭಗವಂತ ಖೂಬಾ, ಶಾಸಕ ರಾಜಕುಮಾರ್ ಪಾಟೀಲ್, ಬಸವರಾಜ ಮತ್ತಿಮೂಡು, ಕಡಗಂಚಿ ಮಠದ ಸ್ವಾಮೀಜಿ ಸೇರಿ ಹತ್ತು ಮಂದಿಗಷ್ಟೇ ಅವಕಾಶ ನೀಡಿದ್ದರಿಂದ ಹೂವು, ಹಣ್ಣುಗಳನ್ನು ಹೊತ್ತುಕೊಂಡು ದರ್ಗಾದ ಒಳಗೆ ಹೋಗಿದ್ದರು. ಪೊಲೀಸ್ ಭದ್ರತೆಯಲ್ಲಿ ಪೂಜೆ ಸಲ್ಲಿಸಿ ಹೊರಬರುತ್ತಿದ್ದಂತೆ, ಜನರ ಗುಂಪು ಸೇರಿದ್ದು ಒಂದೆಡೆ ಜೈಶ್ರೀರಾಮ್ ಘೋಷಣೆ, ಮತ್ತೊಂದು ಕಡೆಯಿಂದ ಅಲ್ಲಾಹು ಅಕ್ಬರ್ ಘೋಷಣೆ ಕೇಳಿಬಂದಿದೆ. ಅಲ್ಲದೆ, ಸಚಿವರು, ಶಾಸಕರು ಪ್ರಯಾಣಿಸುತ್ತಿದ್ದ ವಾಹನಗಳಿಗೆ ಕಲ್ಲು ತೂರಾಟ ಮಾಡಿ, ಪುಡಿ ಮಾಡಲಾಗಿದೆ. ಪೊಲೀಸರ ಜೀಪು, ಇತರ ವಾಹನಗಳಿಗೂ ಕಲ್ಲು ತೂರಿ ಹಾನಿ ಮಾಡಲಾಗಿದೆ.

ಕಲ್ಲು ತೂರಾಟ ಆಗುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಉದ್ರಿಕ್ತ ಜನರನ್ನು ಚದುರಿಸಿದ್ದಾರೆ. ಘಟನೆಯಲ್ಲಿ ಪೊಲೀಸರು, ಮಾಧ್ಯಮ ವ್ಯಕ್ತಿಗಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

Hindu Muslim shout slogans in Kalburgi after miscreants desecrate shivalinga. Amid Mahashivaratri celebrations across the country, a tense atmosphere prevailed in Karnataka's Kalaburagi district on Tuesday, March 1. Hundreds of Muslims protested against those offering prayers to a Shivalinga inside a Dargah in Kalaburagi's Aland city. The protesters, wielding swords, gathered around the dargah, in a bid to stop the Hindu devotees from offering prayers to the Raghava Chaitanya Shivalinga in the Ladle Mashak Dargah premises. Meanwhile, the Hindu leaders slammed the district administration for barring them and at the BJP government for "snatching their religious rights."