ಬ್ರೇಕಿಂಗ್ ನ್ಯೂಸ್
23-02-22 10:52 pm Bengaluru Correspondent ಕರ್ನಾಟಕ
ಬೆಂಗಳೂರು, ಫೆ.23 : ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಕೊಲೆ ಪ್ರಕರಣ ರಾಜ್ಯದಲ್ಲಿ ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದರೆ, ಕಳೆದ ಮೂರು ವರ್ಷಗಳಲ್ಲಿ ಕೋಮು ವೈಷಮ್ಯದ ಪ್ರಕರಣಗಳ ಸ್ಥಿತಿಗತಿ ಹೇಗಿದೆ ಎನ್ನುವ ಬಗ್ಗೆ ಕಾರ್ಯಕರ್ತರು ನಾಚಿಕೊಳ್ಳುವ ರೀತಿ ರಾಜ್ಯದ ಗೃಹ ಸಚಿವರು ವರದಿ ನೀಡಿದ್ದಾರೆ. 2019ರಿಂದ ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 63 ಕೋಮು ಗಲಭೆ ಪ್ರಕರಣಗಳು ನಡೆದಿದ್ದು, ಒಂದು ಪ್ರಕರಣದಲ್ಲಿಯೂ ಅಪರಾಧ ಸಾಬೀತು ಮಾಡಲಾಗಿಲ್ಲ. ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.
ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕೇಳಿದ ಪ್ರಶ್ನೆಗೆ ಸಚಿವರು ಈ ಮಾಹಿತಿ ನೀಡಿದ್ದಾರೆ. ಸರಕಾರದ ಅಂಕಿ ಅಂಶಗಳ ಪ್ರಕಾರ, ಈ ಪೈಕಿ ಹೆಚ್ಚಿನ ಪ್ರಕರಣಗಳಲ್ಲಿ ಇನ್ನೂ ತನಿಖೆ ನಡೆಯುತ್ತಿದೆ. ಉಳಿದವು ಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ. 63 ಪ್ರಕರಣಗಳಲ್ಲಿ ಯಾವುದರಲ್ಲೂ ಅಪರಾಧ ಸಾಬೀತು ಆಗಿಲ್ಲ. ಶಿವಮೊಗ್ಗದಲ್ಲಿ ಹರ್ಷ ಎಂಬ ಬಜರಂಗದಳ ಕಾರ್ಯಕರ್ತನ ಹತ್ಯೆ ಹಿನ್ನೆಲೆಯಲ್ಲಿ ಸಚಿವರು, ಬಿಜೆಪಿ ನಾಯಕರು ಅಬ್ಬರದ ಮಾತುಗಳನ್ನು ಆಡುತ್ತಿರುವಾಗಲೇ ಈ ರೀತಿಯ ವಿಭಿನ್ನ ಮಾಹಿತಿ ಬಿಜೆಪಿ ಸರಕಾರದಿಂದಲೇ ಅಧಿಕೃತವಾಗಿ ನೀಡಿದ್ದು ಸರಕಾರಕ್ಕೆ ಮುಜುಗರ ಸೃಷ್ಟಿಸುವಂತಾಗಿದೆ.
2019ರಲ್ಲಿ 12 ಪ್ರಕರಣಗಳು, 2020ರಲ್ಲಿ 21, 2021ರಲ್ಲಿ 23 ಪ್ರಕರಣಗಳು ವರದಿಯಾಗಿದ್ದವು. ಕಳೆದ ಎರಡು ತಿಂಗಳಲ್ಲಿ ಏಳು ಪ್ರಕರಣಗಳು ನಡೆದಿವೆ. ಮೂರು ವರ್ಷಗಳಲ್ಲಿ ಕೋಮು ಸಂಬಂಧೀ ಅತಿ ಹೆಚ್ಚು ಪ್ರಕರಣ ನಡೆದಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ. 12 ಕೇಸುಗಳು ಒಂದೇ ಜಿಲ್ಲೆಯಲ್ಲಿ ವರದಿಯಾಗಿವೆ. ಈ ಬಗ್ಗೆ ಹಿರಿಯ ವಕೀಲ ಬಿ.ಟಿ.ವೆಂಕಟೇಶ್ ವಿಭಿನ್ನ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವುದೇ ಪ್ರಕರಣ ಸಾಬೀತು ಪಡಿಸಲು ಸಾಕ್ಷಿ ಮುಖ್ಯವಾಗುತ್ತದೆ. ಆದರೆ ಈ ರೀತಿಯ ಪ್ರಕರಣಗಳಲ್ಲಿ ರಾಜಕೀಯ ಪಕ್ಷಗಳ ಹಸ್ತಕ್ಷೇಪ ಇರುವುದರಿಂದ ಸಾಕ್ಷಿಗಳನ್ನು ಬೆದರಿಸಿ, ಆಮಿಷ ಒಡ್ಡುವ ಮೂಲಕ ಕೋರ್ಟಿಗೆ ಹಾಜರಾಗದಂತೆ ಮಾಡುತ್ತಾರೆ. ಇದು ಬಲ ಮತ್ತು ಎಡ ಪಂಥದ ಎರಡೂ ಪ್ರಕರಣಗಳಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಕೆಲಸವಾಗುತ್ತದೆ. ಸಾಕ್ಷಿ ಇಲ್ಲದಿದ್ದರೆ ಕೋರ್ಟಿನಲ್ಲಿ ಕೇಸು ನಿಲ್ಲುವುದಿಲ್ಲ ಎಂದು ಹೇಳುತ್ತಾರೆ.
Karnataka has witnessed 63 instances of communal violence since 2019 with no conviction yet in a single case, Home Minister Araga Jnanendra told the Legislative Assembly in a written reply. This was a reply to a question by Chittapur Congress MLA Priyank Kharge.
23-08-25 10:40 pm
Bangalore Correspondent
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
23-08-25 04:58 pm
HK News Desk
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
23-08-25 10:22 pm
Mangalore Correspondent
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
ಆನಂದಾಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ "ಡೆನ್ನ ಡೆ...
23-08-25 07:02 pm
Mask Man Dharmasthala, Arrest, SIT: ಧರ್ಮಸ್ಥಳ...
23-08-25 03:04 pm
23-08-25 10:49 pm
Mangalore Correspondent
Sujatha Bhat, SIT, Dharmasthala Case; "ಸುಳ್ಳಜ...
23-08-25 06:21 pm
Dharmasthala Mask Man Arrest, SIT: ಧರ್ಮಸ್ಥಳ ಪ...
23-08-25 11:11 am
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm
Lucky Scheme, Shine Enterprises, Arrest, Mang...
22-08-25 09:17 pm