ಬ್ರೇಕಿಂಗ್ ನ್ಯೂಸ್
22-02-22 11:31 pm Bengaluru Correspondent ಕರ್ನಾಟಕ
ಬೆಂಗಳೂರು, ಫೆ.23 : ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಕೊಲೆ ಪ್ರಕರಣಕ್ಕೂ ಸಚಿವ ಕೆ.ಎಸ್ ಈಶ್ವರಪ್ಪ ಮತ್ತು ಸುಪಾರಿ ಕೊಟ್ಟವರ ನಡುವೆ ಏನೋ ಸಂಬಂಧ ಇದೆ ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸಂಶಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪಾರಿ ಕೊಟ್ಟವರಿಗೆ ಹಾಗೂ ಈಶ್ವರಪ್ಪಗೂ ಏನೋ ಸಂಬಂಧ ಇದೆ. ಮೊದಲು ಅದರ ಬಗ್ಗೆ ತನಿಖೆ ಮಾಡಲಿ. ಈಶ್ವರಪ್ಪನವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲಿ, ಸತ್ಯ ಹೊರಗಡೆ ಬರುತ್ತೆ. ಸಂಘ ಪರಿವಾರದವರು ಈವರೆಗೆ 36 ಕೊಲೆ ಮಾಡಿದ್ದಾರೆ. 13 ಜನ ಹಿಂದೂ ಯುವಕರ ಕೊಲೆಯಲ್ಲಿ ಸಂಘ ಪರಿವಾರದ ಪಾತ್ರ ಇದೆ ಎಂದು ಆರೋಪ ಮಾಡಿದರು.
ಶಿವಮೊಗ್ಗ ಯುವಕನ ಕೊಲೆ ಪ್ರಕರಣದ ನಂತರ ಆದ ಬೆಳವಣಿಗೆಗಳು ನಿಜಕ್ಕೂ ಖಂಡನೀಯ. ರಾಜ್ಯದಲ್ಲಿ ಕೊಲೆ ಪ್ರಕರಣಗಳು ಹೊಸದೇನಲ್ಲ. ಮಾಧ್ಯಮದ ವರದಿಯ ಪ್ರಕಾರ ಈ ಹತ್ಯೆಯಾದ ವ್ಯಕ್ತಿ ರೌಡಿಶೀಟರ್ ಅಂತ ಗೊತ್ತಾಗಿದೆ. ಆದರೆ ಸರ್ಕಾರದ ಜವಾಬ್ದಾರಿಯುತವಾದ ಸ್ಥಾನದಲ್ಲಿರುವವರ ಮಾತುಗಳು ಖಂಡನೀಯ. ಕೊಲೆ ನಡೆದ ತಕ್ಷಣ ಪೊಲೀಸರ ತನಿಖೆ ಆರಂಭವಾಗುವ ಮುನ್ನ ಸಚಿವ ಈಶ್ವರಪ್ಪ, ರಾಘವೇಂದ್ರ, ಪ್ರತಾಪ್ ಸಿಂಹ ಮುಸ್ಲಿಮರ ತಲೆಗೆ ಕಟ್ಟುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇವರ ಪ್ರಚೋದನಕಾರಿ ಹೇಳಿಕೆಯಿಂದ ಮುಸ್ಲಿಂ ಮನೆಯ ಮೇಲೆ, ಅಂಗಡಿಯ ಮೇಲೆ, ವಾಹನದ ಮೇಲೆ ಬೆಂಕಿ ಹಚ್ಚಲಾಗಿದೆ. 143 ಸೆಕ್ಷನ್ ಇದ್ರೂ ಮೆರವಣಿಗೆ ಮಾಡಿದ್ರು. ಪೊಲೀಸರ ಕಣ್ಣಮುಂದೆಯೇ ಈಶ್ವರಪ್ಪ ಕಡೆಯ ಐನೂರು ಜನ ಹುಡುಗರು ದಾಂಧಲೆ ಮಾಡ್ತಾರೆ. ಕಫ್ರ್ಯೂ ಹಾಗೂ ನಿಷೇಧಾಜ್ಞೆ ಉಲ್ಲಂಘಿಸಿರೋದು ಈಶ್ವರಪ್ಪ, ಈಶ್ವರಪ್ಪ – ಎ1, ರಾಘವೇಂದ್ರ, ಗೃಹಸಚಿವರು ಇವರೆಲ್ಲ ನೇರ ಹೊಣೆ. ಎರಡು ದಿನದ ಮುಂಚೆ ಶಿವಮೊಗ್ಗದಲ್ಲಿ ಇಬ್ಬರು ಮುಸ್ಲಿಮರ ಹತ್ಯೆಯಾಗಿತ್ತು ಎಂದರು.
ಹಿಜಾಬ್‍ಗೂ ಕೊಲೆಗೂ ನೇರ ಲಿಂಕ್ ಬಗ್ಗೆ ನಾನೇನು ಪ್ರತಿಕ್ರಿಯೆ ಕೊಡಲಾರೆ. ತನಿಖೆ ನಡೆಯುತ್ತಿದೆ, ನೈಜ್ಯ ಕಾರಣ ಬರಲಿ. ನಾಯಕರ ಒತ್ತಡಕ್ಕೆ ಮಣಿದು ಅಮಾಯಕರನ್ನು ಬಂಧಿಸೋದು ಅಲ್ಲ. ಹಿಜಬ್ ವಿಚಾರದಲ್ಲಿ ಸರ್ಕಾರ ವೈಫಲ್ಯವಾಗಿದೆ. ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳೋಕೆ ಈ ರೀತಿಯ ಕೆಲಸ ಮಾಡಿರಬಹುದು ಎಂದು ಕಿಡಿಕಾರಿದರು.
SDPI President Abdul Majeed Garam has said that he has something to do with minister KS Eshwarappa and Supari in connection with the murder of a Hindu activist in Shimoga.
02-02-26 11:02 pm
HK News Desk
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
Manjeshwar Murder: ಆಸ್ತಿ ವಿಚಾರದಲ್ಲಿ ಗಲಾಟೆ ; ಬ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
ಮೂರು ದಶಕ ಕಳೆದರೂ ಮತ್ತೆ ಎಂಡೋ ಭೀತಿ ; ಉತ್ತರ ಕನ್ನಡ...
02-02-26 04:06 pm
02-02-26 10:40 pm
HK News Desk
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
02-02-26 10:37 pm
Bangalore Correspondent
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm