ಬ್ರೇಕಿಂಗ್ ನ್ಯೂಸ್
22-02-22 02:50 pm Bengaluru Correspondent ಕರ್ನಾಟಕ
ಬೆಂಗಳೂರು, ಫೆ.22 : ಶಿವಮೊಗ್ಗದಲ್ಲಿ ಭಾನುವಾರ ರಾತ್ರಿಯೇ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಆದರೆ ಸೋಮವಾರ ಸಚಿವರು, ಬಿಜೆಪಿ ನಾಯಕರು ಸೇರಿ ಮೆರವಣಿಗೆ ಮಾಡಿದ್ದಾರೆ. ಇದು ಸರ್ಕಾರಿ ಪ್ರಾಯೋಜಿತ ಮೆರವಣಿಗೆ, ಗಲಾಟೆ. ಇವರೇ ಸೆಕ್ಷನ್ ಉಲ್ಲಂಘಿಸಿ, ಕಲ್ಲು ತೂರಾಟ ಮಾಡಿಸಿ, ಅಲ್ಲಿನ ಗಲಾಟೆಗೆ ಕಾರಣವಾಗಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದ ಘಟನೆಗಳಿಗೆ ಹೊಣೆ ಯಾರು ? ಮಾಜಿ ಸಿಎಂ ಯಡಿಯೂರಪ್ಪ, ಹೋಮ್ ಮಿನಿಸ್ಟರ್, ಈಶ್ವರಪ್ಪ ಅದೇ ಜಿಲ್ಲೆಯವರು. 144 ಸೆಕ್ಷನ್ ಜಾರಿ ಇರುವಾಗ ಮೆರವಣಿಗೆ ಮಾಡಲು ಯಾಕೆ ಅವಕಾಶ ಕೊಟ್ಟರು. ಸಂಸದ ರಾಘವೇಂದ್ರ ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಭಾಗಿಯಾಗಿದ್ದರು. ಹೀಗಾಗಿ ಇದನ್ನು ಸರ್ಕಾರದ ಪ್ರಾಯೋಜಿತ ಮೆರವಣಿಗೆ ಎನ್ನಬೇಕು. ಮೆರವಣಿಗೆಯಲ್ಲಿ ಇವರ ನಡುವೆಯೇ ಕಲ್ಲು ತೂರಾಟ ನಡೆಯುತ್ತದೆ. ಒಬ್ಬ ಸಚಿವ, ಒಬ್ಬ ಸಂಸದ ಇದ್ದೂ ಸೆಕ್ಷನ್ ಉಲ್ಲಂಘನೆ ಆಗಿದೆ. ಸರ್ಕಾರದ ಯಾರದ್ದು ಇರೋದು ? ಶಿವಮೊಗ್ಗದಲ್ಲಿ ಆಸ್ತಿ ಪಾಸ್ತಿಗೆ ಹಾನಿಯಾಗಿದ್ದವರೇ, ಅದಕ್ಕೆ ಬಿಜೆಪಿ, ಬಜರಂಗದಳ ಕಾರಣ. ದೊನ್ನೆ,ಕತ್ತಿ, ತಲ್ವಾರ್ ಇಡಕೊಂಡು ಮೆರವಣಿಗೆ ಮಾಡಿದ್ದಾರೆ. ಇದು ಮಾನವೀಯತೆ ಇರುವ ಸರ್ಕಾರನಾ.. ಇದು ಗೂಂಡಾಗಳ ಸರ್ಕಾರ. ಒಬ್ಬ ಸಚಿವರೇ ಸೆಕ್ಷನ್144 ಗೌರವಿಸದಿದ್ದರೇ ಇದನ್ನು ಸರ್ಕಾರ ಎನ್ನಲಿಕ್ಕಾಗುತ್ತಾ.. ಇದಕ್ಕೆಲ್ಲ ನೇರವಾಗಿ ಈಶ್ವರಪ್ಪ ಹಾಗೂ ಬಿವೈ ರಾಘವೇಂದ್ರ ಹೊಣೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಸರ್ಕಾರದ ಇವರದ್ದೇ ಇದೆ. ಕೊಲೆ ಘಟನೆ ಹಿಂದೆ ಸಿಎಫ್ಐ, ಎಸ್ಡಿಪಿಐ ಬಗ್ಗೆ ಸಾಕ್ಷಿಗಳು ಇದ್ದರೆ ಬ್ಯಾನ್ ಮಾಡಲಿ. ಇದಕ್ಕೆ ನಮ್ಮ ತಕರಾರು ಇಲ್ಲ. ಸಾರ್ವಜನಿಕರ ಆಸ್ತಿ ಹಾನಿಯಾಗಿದೆ. ಮಾಧ್ಯಮದವರ ಮೇಲೆ ಹಲ್ಲೆ ಆಗಿದೆ. ಇದು ಸರ್ಕಾರದ ಜವಬ್ದಾರಿನಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಈಶ್ವರಪ್ಪ ಕೇಸರಿ ಬಾವುಟ ಹಾರಿಸ್ತೇವೆ ಎಂಬ ಹೇಳಿಕೆಯ ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಷ್ಟ್ರೀಯ ಖಾಸಗಿ ವಾಹಿನಿಗೆ ಸಂದರ್ಶನ ಕೊಟ್ಟಿದ್ದಾರೆ. ಈಶ್ವರಪ್ಪ ಹೇಳಿಕೆ ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ. ಆಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಹೋರಾಟ ಸರಿಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ನಾವು ಒತ್ತಾಯ ಮಾಡ್ತೇವೆ. ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲು ಆಗಬೇಕು. ಈ ಬಗ್ಗೆ ಸಂಜೆ ರಾಜ್ಯಪಾಲರನ್ನ ಭೇಟಿ ಮಾಡ್ತೇವೆ. ವಿಧಾನಸೌಧದಿಂದ ರಾಜಭವನಕ್ಕೆ ವಾಕ್ ಮಾಡುತ್ತೇವೆ. ಈಶ್ವರಪ್ಪ ಅವರನ್ನು ಪದಚ್ಯುತಿ ಮಾಡುವಂತೆ ಒತ್ತಾಯಿಸುತ್ತೇವೆ ಎಂದರು ಸಿದ್ದರಾಮಯ್ಯ.
Eshwarappa violated Section 144 to take Bajrang Dal activists body home, claims Siddaramaiah
23-08-25 10:40 pm
Bangalore Correspondent
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
23-08-25 04:58 pm
HK News Desk
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
ಚಿತ್ರನಟಿ ಆರೋಪ ಬೆನ್ನಲ್ಲೇ ಮಂಗಳಮುಖಿಯಿಂದಲೂ ದೂರು,...
22-08-25 01:11 pm
23-08-25 10:22 pm
Mangalore Correspondent
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
ಆನಂದಾಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ "ಡೆನ್ನ ಡೆ...
23-08-25 07:02 pm
Mask Man Dharmasthala, Arrest, SIT: ಧರ್ಮಸ್ಥಳ...
23-08-25 03:04 pm
23-08-25 10:49 pm
Mangalore Correspondent
Sujatha Bhat, SIT, Dharmasthala Case; "ಸುಳ್ಳಜ...
23-08-25 06:21 pm
Dharmasthala Mask Man Arrest, SIT: ಧರ್ಮಸ್ಥಳ ಪ...
23-08-25 11:11 am
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm
Lucky Scheme, Shine Enterprises, Arrest, Mang...
22-08-25 09:17 pm