ಬ್ರೇಕಿಂಗ್ ನ್ಯೂಸ್
09-02-22 01:36 pm HK Desk news ಕರ್ನಾಟಕ
ಬೆಂಗಳೂರು, ಫೆ.9 : ಹಿಜಾಬ್ ಕಿಚ್ಚಿನಿಂದ ಹೊತ್ತಿಕೊಂಡ ಬೆಂಕಿ ತಕ್ಕಮಟ್ಟಿಗೆ ಶಾಂತವಾಗಿದೆ. ಆದರೆ, ಶಿವಮೊಗ್ಗ ಮತ್ತು ಬಾಗಲಕೋಟದಲ್ಲಿ ಕಲ್ಲು ತೂರಾಟ ನಡೆದಿದ್ದರಿಂದ ಅಲ್ಲಿನ ಸ್ಥಿತಿ ವಿಷಮ ಸ್ಥಿತಿಗೆ ತಲುಪಿದೆ. ಸದ್ಯಕ್ಕೆ ಅಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಶಾಲೆಗೆ ರಜೆ ಘೋಷಣೆ ಮಾಡಿದ್ದರಿಂದ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಕಲ್ಲು ತೂರಾಟ, ಕಿಡಿಗೇಡಿ ಕೃತ್ಯದ ಪ್ರಕರಣದಲ್ಲಿ ಪೊಲೀಸರು 15ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.
ಶಿವಮೊಗ್ಗ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್ಎಸ್ ಯುಐ ಮತ್ತು ಎಬಿವಿಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿತ್ತು. ಕಾಲೇಜಿನ ಮುಂದಿನ ಧ್ವಜ ಸ್ತಂಭಕ್ಕೆ ಹತ್ತಿದ ಎಬಿವಿಪಿ ಕಾರ್ಯಕರ್ತರು ಅಲ್ಲಿ ಕೇಸರಿ ಧ್ವಜ ಹಾರಿಸಿದ್ದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ವೇಳೆ, ಕಲ್ಲು ತೂರಾಟ ನಡೆದಿದ್ದು ಹಲವರು ಗಾಯಗೊಂಡಿದ್ದರು. ಧ್ವಜ ಸ್ತಂಭಕ್ಕೆ ಕೇಸರಿ ಧ್ವಜ ಹಾಕಿದ್ದನ್ನು ವಿರೋಧಿಸಿ ಒಂದು ಕಡೆಯಿಂದ ಕಲ್ಲು ತೂರಾಟ ನಡೆಸಲಾಗಿತ್ತು. ಆನಂತರ, ಎನ್ಎಸ್ ಯುಐ ಕಾರ್ಯಕರ್ತರು ಕೇಸರಿಯನ್ನು ತೆಗೆದು ಅಲ್ಲಿ ರಾಷ್ಟ್ರ ಧ್ವಜ ಹಾರಿಸಿದ್ದರು. ಆದರೆ, ಅಲ್ಲಿ ರಾಷ್ಟ್ರ ಧ್ವಜ ತೆಗೆದು ಕೇಸರಿ ಧ್ವಜ ಹಾಕಲಾಗಿತ್ತು ಎಂದು ಸುದ್ದಿ ಹಬ್ಬಿತ್ತಾದರೂ, ಕಾಲೇಜಿನ ಆಡಳಿತ ಅಲ್ಲಿ ಯಾವುದೇ ಧ್ವಜ ಇರಲಿಲ್ಲ. ಖಾಲಿ ಸ್ತಂಭಕ್ಕೆ ಕೇಸರಿ ಧ್ವಜ ಹಾಕಲಾಗಿತ್ತು ಎಂದು ಸ್ಪಷ್ಟನೆ ನೀಡಿದೆ. ಪೊಲೀಸರು ಎರಡೂ ಧ್ವಜಗಳನ್ನು ವಶಕ್ಕೆ ಪಡೆದು ಉದ್ರಿಕ್ತರನ್ನು ಸ್ಥಳದಿಂದ ಚದುರಿಸಿದ್ದರು.

ಇದೇ ವೇಳೆ, ಬಾಗಲಕೋಟೆಯ ಬನಹಟ್ಟಿ ತಾಲೂಕಿನಲ್ಲಿ ಕಲ್ಲು ತೂರಾಟ, ಹಿಂಸೆಯನ್ನು ಖಂಡಿಸಿ ಹಿಂದು ಸಂಘಟನೆಗಳು ಇಂದು ತಾಲೂಕು ಬಂದ್ ಗೆ ಕರೆ ನೀಡಿದೆ. ಹೀಗಾಗಿ ಬನಹಟ್ಟಿ ತಾಲೂಕು ಬಂದ್ ಆಗಿದ್ದು, ಸದ್ಯಕ್ಕೆ ಸ್ಥಿತಿ ಶಾಂತವಾಗಿದೆ. ಆದರೆ ಹಿಜಾಬ್ ವಿಚಾರದಲ್ಲಿ ಹೊತ್ತಿಕೊಂಡ ಕಿಚ್ಚು ಈಗ ಕೋಮು ವೈಷಮ್ಯಕ್ಕೆ ಕಾರಣವಾಗಿದ್ದು, ರಾಜ್ಯದಾದ್ಯಂತ ಕಾವು ಹೊತ್ತಿಸಿದೆ. ಇದೇ ವೇಳೆ, ಹೈಕೋರ್ಟಿನಲ್ಲಿ ಹಿಜಾಬ್ ಪ್ರಕರಣ ವಿಚಾರಣೆಯಲ್ಲಿದ್ದು, ಇಂದು ಮಧ್ಯಾಹ್ನ 2.30ರಿಂದ ಮತ್ತೆ ವಿಚಾರಣೆ ನಡೆಯಲಿದೆ. ಸಂಜೆ ವೇಳೆಗೆ ಕೋರ್ಟ್ ಮಧ್ಯಂತರ ತೀರ್ಪು ನೀಡುವ ಸಾಧ್ಯತೆಯಿದೆ.
ಮಂಗಳವಾರ ರಾತ್ರಿ ರಾಜ್ಯದಲ್ಲಿನ ಬೆಳವಣಿಗೆ ಬಗ್ಗೆ ಹಿರಿಯ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಶಿಕ್ಷಣ ಸಚಿವ ನಾಗೇಶ್, ಅಶ್ವತ್ಥ್ ನಾರಾಯಣ ಸೇರಿದಂತೆ ಕೆಲವು ಸಚಿವರು ಪಾಲ್ಗೊಂಡಿದ್ದರು. ದೆಹಲಿಗೆ ತೆರಳಿದ್ದ ಸಿಎಂ ಬೊಮ್ಮಾಯಿ ಇಂದು ಬೆಂಗಳೂರಿಗೆ ಆಗಮಿಸಿದ್ದು, ಹಿಜಾಬ್ ಕಿಚ್ಚಿನ ಬಗ್ಗೆ ಮಧ್ಯಾಹ್ನ ತುರ್ತು ಸಭೆ ನಡೆಸಿದ್ದಾರೆ. ಹಿಜಾಬ್ ಬಗ್ಗೆ ಯಾವುದೇ ತೀರ್ಪು ಬಂದರೂ, ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದಾರೆ.
Hijab row in Karnataka 15 college students detained by Police in Shimoga. The miscreants have attacked a teacher with iron rods causing severe head injuries to him in Bagalkot district. BJP MLA Haratalu Halappa stood as a mute spectator even as a student was beaten up by a mob in Shivamogga district. Manjunath Naik (30), a school teacher has been attacked with iron rods by miscreants in Banahatti town of Bagalkot district after the violence erupted following students protest.
02-02-26 11:02 pm
HK News Desk
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
Manjeshwar Murder: ಆಸ್ತಿ ವಿಚಾರದಲ್ಲಿ ಗಲಾಟೆ ; ಬ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
ಮೂರು ದಶಕ ಕಳೆದರೂ ಮತ್ತೆ ಎಂಡೋ ಭೀತಿ ; ಉತ್ತರ ಕನ್ನಡ...
02-02-26 04:06 pm
02-02-26 10:40 pm
HK News Desk
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
02-02-26 10:37 pm
Bangalore Correspondent
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm