ಬ್ರೇಕಿಂಗ್ ನ್ಯೂಸ್
08-02-22 07:56 pm HK Desk news ಕರ್ನಾಟಕ
ಬೆಂಗಳೂರು, ಫೆ.8 : ಹಿಜಾಬ್ ಮತ್ತು ಶಿಕ್ಷಣದ ಬಗ್ಗೆ ಆಯ್ಕೆ ಬಂದಲ್ಲಿ ಶಿಕ್ಷಣ ಆಯ್ದುಕೊಳ್ಳಿ. ಹಿಜಾಬ್ ಮನೆಯೊಳಗೆ ಇಟ್ಟುಕೊಳ್ಳಿ. ಶಿಕ್ಷಣಕ್ಕೆ ಧರ್ಮ ಬೇಡ ಎಂದು ಹೇಳಿಕೆ ನೀಡಿದ್ದ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುರೈಯಾ ಅಂಜುಮ್ ಗೆ ನೂರಕ್ಕೂ ಹೆಚ್ಚು ಬೆದರಿಕೆ ಕರೆ ಬಂದಿರುವ ಬಗ್ಗೆ ಆಕೆಯೇ ಹೇಳಿಕೊಂಡಿದ್ದಾರೆ.
ಮಾಧ್ಯಮವೊಂದರ ಡಿಬೇಟ್ ನಲ್ಲಿ ಪಾಲ್ಗೊಂಡ ಸುರೈಯಾ ಅಂಜುಮ್, ತನಗೆ ಇಂಟರ್ನೆಟ್ ಕರೆಗಳ ಮೂಲಕ ನಿರಂತರ ಬೆದರಿಕೆ ಕರೆ ಬಂದಿದೆ. ಫೇಸ್ಬುಕ್ ನಲ್ಲಿ ಲೈವ್ ಬಂದು ವಿಡಿಯೋ ಮಾಡಿದ 24 ಗಂಟೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಕರೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ನೀಡಲಿದ್ದೇನೆ ಎಂದು ಹೇಳಿದ್ದಾರೆ.
ಹಿಜಾಬ್ ವಿಚಾರ ಕೋರ್ಟಿನಲ್ಲಿ ಇರುವುದರಿಂದ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿ ಹೋರಾಟ ಮಾಡುವುದು ಬೇಡ. ಹಿಜಾಬ್ ಮತ್ತು ಶಿಕ್ಷಣ ನಿಮ್ಮ ಆಯ್ಕೆಯಾದಲ್ಲಿ ಶಿಕ್ಷಣವೇ ಆದ್ಯತೆಯಾಗಲಿ. ಧರ್ಮದ ಆಚರಣೆ ಏನಿದೆ ಅದೆಲ್ಲವೂ ಮನೆಯಲ್ಲೇ ಇರಲಿ. ಧರ್ಮಕ್ಕಿಂತ ದೇಶ ಮೊದಲು. ಭಾರತೀಯಳು ಎನ್ನುವುದು ನನಗೆ ಮೊದಲು. ಇದು ನನ್ನ ಆಯ್ಕೆ. ನನ್ನ ಸೋದರಿಯರಿಗೂ ಇದನ್ನೇ ಹೇಳುತ್ತೇನೆ.
ಪಿಎಫ್ಐ ಮತ್ತು ಎಸ್ಡಿಪಿಐ ಅವರ ರಾಜಕೀಯ ಅಸ್ತಿತ್ವ ಸಾಧಿಸುವಲ್ಲಿ ದಾಳ ಆಗಬೇಡಿ. ಆರೆಸ್ಸೆಸ್- ಬಿಜೆಪಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನೀವು ಬಲಿಪಶು ಆಗಬೇಡಿ ಎಂದು ಹೇಳುತ್ತೇನೆ ಎಂಬುದಾಗಿ ಸುರೈಯಾ ಅಂಜುಮ್ ಹೇಳಿದ್ದಾರೆ. ಸುರೈಯಾ ಅಂಜುಮ್, ತನ್ನ ಫೇಸ್ಬುಕ್ ಪೇಜ್ ನಲ್ಲಿ ಹಿಜಾಬ್ ವಿಚಾರದಲ್ಲಿ ಲೈವ್ ಬಂದು ವಿಡಿಯೋ ಮಾಡಿದ್ದರು.
Congress Suraiya Anjum gets hundreds of threat calls after her Facebook video goes viral stating to remove Hijab. Recently speaking in her Facebook live video she had stated that Muslim girls should remove third hijab and go to their classes.
23-08-25 10:40 pm
Bangalore Correspondent
HK Patil, Illegal Mining: 20 ಕೋಟಿ ಮೆಟ್ರಿಕ್ ಟನ...
23-08-25 09:56 pm
ಆ.23ರಿಂದ ಹಿಂದುಳಿದ ವರ್ಗಗಳ ಸಾಮಾಜಿಕ - ಶೈಕ್ಷಣಿಕ...
22-08-25 10:28 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಸಂಚಾರ ಉಲ್ಲಂಘನೆ ದಂ...
22-08-25 08:01 pm
Tumkur School, Compound News, Student: ಸ್ಕೂಲ್...
22-08-25 12:29 pm
24-08-25 01:47 pm
HK News Desk
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
ಪತ್ನಿಯ ಪದವಿ ಪ್ರದಾನ ಸಮಾರಂಭಕ್ಕೆ ಬ್ರಿಟನ್ ತೆರಳಲು...
22-08-25 08:07 pm
Another Security, Parliament, Arrest: ಸಂಸತ್ತಿ...
22-08-25 02:00 pm
24-08-25 02:48 pm
Mangalore Correspondent
ಬೇರೆ ಕಡೆ ಇಲ್ಲದ ಕಾನೂನನ್ನು ನಮ್ಮ ಜಿಲ್ಲೆಯಲ್ಲಿ ಹೇರ...
23-08-25 10:22 pm
MP Brijesh Chowta, Mangalore: ಅಡಿಕೆ ಹಳದಿ ರೋಗ...
23-08-25 09:00 pm
Veerendra Heggade Reacts, Dharmasthala News:...
23-08-25 07:25 pm
ಆನಂದಾಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ "ಡೆನ್ನ ಡೆ...
23-08-25 07:02 pm
24-08-25 12:41 pm
HK News Desk
ಗೋಳ್ತಮಜಲು ; 2500 ಕೇಜಿ ಪಡಿತರ ಅಕ್ಕಿ ಅಕ್ರಮ ದಾಸ್ತ...
23-08-25 10:49 pm
Sujatha Bhat, SIT, Dharmasthala Case; "ಸುಳ್ಳಜ...
23-08-25 06:21 pm
Dharmasthala Mask Man Arrest, SIT: ಧರ್ಮಸ್ಥಳ ಪ...
23-08-25 11:11 am
ಕ್ಲಾಸ್ ನಲ್ಲಿ ಹೊಡೆದಿದ್ದಕ್ಕೆ ಶಿಕ್ಷಕನ ಮೇಲೆ 9ನೇ ತ...
22-08-25 09:57 pm