ಬ್ರೇಕಿಂಗ್ ನ್ಯೂಸ್
08-02-22 02:45 pm HK Desk news ಕರ್ನಾಟಕ
ಬೆಂಗಳೂರು, ಫೆ.8 : ಹಿಜಾಬ್ ವಿಚಾರದ ಕಿಚ್ಚು ರಾಜ್ಯದಾದ್ಯಂತ ಆವರಿಸಿದೆ. ಕರಾವಳಿಯಿಂದ ಹತ್ತಿದ ಬೆಂಕಿ ಶಿವಮೊಗ್ಗ, ಬಾಗಲಕೋಟ, ಮಂಡ್ಯ, ವಿಜಯಪುರ ಹೀಗೆ ರಾಜ್ಯದ ಉದ್ದಗಲದಲ್ಲಿ ಹತ್ತಿಕೊಂಡಿದೆ. ಇದೇ ವೇಳೆ, ಹಿಜಾಬ್ ಹೋರಾಟ ಹೈಕೋರ್ಟ್ ಮೆಟ್ಟಿಲೇರಿದ್ದು ತೀವ್ರ ತಿಕ್ಕಾಟಕ್ಕೆ ವೇದಿಕೆ ಸೃಷ್ಟಿಸಿದೆ.
ರಾಜ್ಯ ಸರಕಾರದ ಪರವಾಗಿ ಎಜಿ ಪ್ರಭುಲಿಂಗ ನಾವದಗಿ ಕೋರ್ಟಿಗೆ ಹಾಜರಾಗಿದ್ದು ಹಿಜಾಬ್ ನಿಷೇಧ ವಿಚಾರದಲ್ಲಿ ವಾದ ಮಂಡಿಸಿದ್ದಾರೆ. ಕಾಲೇಜು ಎರಡು ತಿಂಗಳು ಇರುವಾಗ ಇಂತಹ ವಿವಾದ ಉಂಟಾಗ ಬಾರದಿತ್ತು. ಕಾಲೇಜು ಇನ್ನು ಎರಡು ತಿಂಗಳಿದ್ದು ಕೋರ್ಟ್ ಅಲ್ಲೀವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ವಿದ್ಯಾರ್ಥಿಗಳಿಗೆ ಔದಾರ್ಯ ತೋರಬೇಕು ಎಂದು ಅರ್ಜಿದಾರರ ಪರ ವಕೀಲ ಮೊಹಮ್ಮದ್ ತಾಕೀರ್ ವಾದ ಮಂಡನೆ ಮಾಡಿದ್ದಾರೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಔದಾರ್ಯ ತೋರುವುದು ಸಂವಿಧಾನದಲ್ಲಿ ಇಲ್ಲ. ಸಂವಿಧಾನದಲ್ಲಿ ಇರುವುದನ್ನು ಮಾತ್ರ ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ. ಮುಂದುವರಿದು ವಾದ ಮಂಡಿಸಿದ ಮೊಹಮ್ಮದ್ ತಾಕಿರ್, ಖುರಾನಲ್ಲಿ ವ್ಯಕ್ತಿಯ ಖಾಸಗಿ ಅಂಗಗಳನ್ನು ಮುಚ್ಚಬೇಕು ಎಂದಿದೆ. ಅದರಂತೆ ಹಿಜಾಬ್, ಬುರ್ಖಾ ಧರಿಸಲಾಗುವುದು. ನಮಗೆ ಹಿಜಾಬ್ ಧರಿಸಲು ಸಂವಿಧಾನದ ಧಾರ್ಮಿಕ ಹಕ್ಕಿನ ಪ್ರಕಾರ ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

ವಾದ ಆಲಿಸಿದ ನ್ಯಾಯಾಲಯ, ಖುರಾನ್ ಪ್ರತಿಯನ್ನು ಶಾಂತಿ ಪ್ರಕಾಶನದಿಂದ ಹೈಕೋರ್ಟಿಗೆ ತರಿಸುವಂತೆ ಸೂಚನೆ ನೀಡಿತು. ಅಲ್ಲದೆ, ಸರಕಾರದ ಹಿಜಾಬ್ ನಿಷೇಧಿಸುವ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಪರವಾಗಿ ವಾದ ಮಂಡಿಸಲು ಸೂಚನೆ ನೀಡಿದೆ. ಸರಕಾರದ ಪರವಾಗಿ ಅಟಾರ್ನಿ ಜನರಲ್ ಪ್ರಭುಲಿಂಗ ಹಾಜರಾಗಿದ್ದು ಮಧ್ಯಾಹ್ನ ನಂತರ ವಾದ ಮಂಡನೆ ಮಾಡಲಿದ್ದಾರೆ. ಕೋರ್ಟ್ ಎರಡೂ ಕಡೆಯ ವಾದ ಆಲಿಸಿದ ಬಳಿಕ ಸರಕಾರದ ಆದೇಶಕ್ಕೆ ತಾತ್ಕಾಲಿಕ ತಡೆ ನೀಡುತ್ತಾ ಅನ್ನುವ ಕುತೂಹಲ ಇದೆ.

ಇದಕ್ಕೂ ಮುನ್ನ ವಿಚಾರಣೆ ಆರಂಭಗೊಳ್ಳುವಾಗಲೇ ನ್ಯಾಯಾಧೀಶರು, ಹಿಜಾಬ್ ಬಗ್ಗೆ ವಿವಿಧ ಅರ್ಜಿಗಳು ಕೋರ್ಟಿಗೆ ಸಲ್ಲಿಕೆಯಾಗಿದ್ದು ಬೇರೆ ಬೇರೆಯಾಗಿ ವಿಚಾರಣೆ ನಡೆಸುವುದಿಲ್ಲ. ಒಂದು ಅರ್ಜಿಯನ್ನು ಪರಿಗಣಿಸಿ ವಿಚಾರಣೆ ನಡೆಸುತ್ತಿದ್ದು ಅದೇ ತೀರ್ಪು ಎಲ್ಲದಕ್ಕೂ ಅನ್ವಯ ಆಗಲಿದೆ ಎಂದು ಹೇಳಿದರು. ಭಂಡಾರ್ಕರ್ ಕಾಲೇಜಿನ ವಿದ್ಯಾರ್ಥಿನಿಯರು ಸೇರಿದಂತೆ ಹಲವು ಕಡೆಗಳಿಂದ ಹಿಜಾಬ್ ವಿಚಾರದಲ್ಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಕೆಯಾಗಿದೆ.
The Karnataka High Court has begun hearing the plea against a hijab ban in several junior colleges in parts of the state. Protests erupted in Mahatma Gandhi Memorial College in Udupi Tuesday as groups of students with saffron scarfs and those wearing hijabs clashed with each other.
29-08-26 10:49 pm
HK News Staffer
‘ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ನಂಗೆ ಗೊತ್ತಿದೆ...
29-08-26 10:47 pm
ನಾಗೇಂದ್ರ ರಾಜಿನಾಮೆ ನೀಡಿದ್ರೂ ಬಿಜೆಪಿ ಪಾದಯಾತ್ರೆ ಮ...
29-08-26 10:38 pm
ಸಿನಿಮಾಗಳಲ್ಲಿ ಮಹಿಳೆಯನ್ನು ಭೋಗದ ವಸ್ತುವನ್ನಾಗಿ ತೋರ...
28-08-26 09:35 pm
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
29-08-26 10:25 pm
HK News Staffer
ನೇಪಾಳ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್...
29-08-26 03:36 pm
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm