ಬ್ರೇಕಿಂಗ್ ನ್ಯೂಸ್
16-12-21 02:45 pm HK Desk news ಕರ್ನಾಟಕ
Photo credits : Headline Karnataka
ಬಾಗಲಕೋಟೆ, ಡಿ.16 : ಪ್ರಶಸ್ತಿಗಳ ರಾಜ, ಬೆಟ್ಟದ ಹುಲಿ ಎಂದೇ ಹೆಸರಾಗಿದ್ದ ಅಭಿಮಾನಿಗಳ ಪಾಲಿನ ನೆಚ್ಚಿನ ಟಗರು ಅನಾರೋಗ್ಯದಿಂದ ಸಾವು ಕಂಡಿದ್ದು ನೂರಾರು ಜನರು ಸೇರಿ ಶವಯಾತ್ರೆ ಮೆರವಣಿಗೆ ನಡೆಸಿದ್ದಾರೆ.
ಆಕರ್ಷಕವಾಗಿದ್ದ ಟಗರನ್ನು ಐದು ಲಕ್ಷ ರೂ. ಕೊಟ್ಟು ಖರೀದಿಸಲಾಗಿತ್ತು. ಮಾಲೀಕ ಅದನ್ನು ಖರೀದಿಸಿ ಮನೆ ಮಗನಂತೆ ನೋಡಿಕೊಂಡಿದ್ದಲ್ಲದೆ ವಿವಿಧ ಕಡೆಗಳಲ್ಲಿ ಸ್ಪರ್ಧೆಗೆ ಕೊಂಡೊಯ್ದು ಜನಮೆಚ್ಚುಗೆ ಪಡೆದಿದ್ದ. ಅನಾರೋಗ್ಯದಿಂದ ಟಗರು ದಿಢೀರ್ ಆಗಿ ಸತ್ತಿದ್ದಕ್ಕೆ ಮಾಲೀಕ ಪಾಂಡು ಗೋಳಾಡಿ ಅತ್ತಿದ್ದಾನೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಪಾಂಡು ಟಗರನ್ನು 7 ವರ್ಷಗಳ ಹಿಂದೆ 5 ಲಕ್ಷ ರೂ. ಕೊಟ್ಟು ಖರೀದಿಸಿದ್ದ. ಪ್ರತಿ ಬಾರಿ ಟಗರಿನ ಕಾಳಗದಲ್ಲಿ ಈ ಬೆಟ್ಟದ ಹುಲಿಯದ್ದೆ ದರ್ಬಾರ್ ಆಗಿತ್ತು. ಜನರು ಪಂಥ ಕಟ್ಟಿ ಗೆದ್ದು ಈ ಟಗರಿನ ಅಭಿಮಾನಿಗಳಾಗಿದ್ದರು. ಮೈಸೂರು ದಸರಾ ಸೇರಿ ರಾಜ್ಯ ಮತ್ತು ಹೊರ ರಾಜ್ಯಗಳ ಟಗರಿನ ಕಾಳಗದಲ್ಲಿ ಬೆಟ್ಟದ ಹುಲಿ ಭಾರೀ ಹೆಸರು ಮಾಡಿತ್ತು.
ಈವರೆಗೆ 80 ಕ್ಕೂ ಅಧಿಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಟಗರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತನ್ನದೇ ಅಭಿಮಾನಿಗಳನ್ನು ಹೊಂದಿತ್ತು. ಟಗರು ಸತ್ತ ಸುದ್ದಿ ಕೇಳಿ ಕಲಹಳ್ಳಿಗೆ ಬಂದ ನೂರಾರು ಅಭಿಮಾನಿಗಳು ಆಗಮಿಸಿದ್ದು ಕಣ್ಣೀರಿಟ್ಟಿದ್ದಾರೆ.

ಗ್ರಾಮದಲ್ಲಿ ಮೃತಪಟ್ಟ ಟಗರನ್ನು ಶೃಂಗರಿಸಿ ಟ್ರ್ಯಾಕ್ಟರ್ ನಲ್ಲಿ ಮೆರವಣಿಗೆ ಮಾಡಿದ್ದಾರೆ. ಟಗರಿಗೆ ಭಂಡಾರ ಬಳಿದು ದುಃಖದಿಂದ ಮೆರವಣಿಗೆ ನಡೆಸಿದ್ದು ಅಂತಿಮ ಸಂಸ್ಕಾರದಲ್ಲಿ ನೂರಾರು ಜನರು ಭಾಗಿಯಾಗಿದ್ದಾರೆ.

ಗದಗ, ಧಾರವಾಡ, ಮೈಸೂರು, ಗಜೇಂದ್ರಗಡ ಸೇರಿ ವಿವಿಧೆಡೆಯಿಂದ ಟಗರಿನ ಅಂತಿಮ ದರ್ಶನಕ್ಕೆ ಟಗರು ಅಭಿಮಾನಿಗಳು ಬಂದಿದ್ದರು. ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಅಭಿಮಾನಿ ಯುವಕರು ಸೇರಿ ಟಗರಿನ ಕಟೌಟ್ ಕಟ್ಟಿ, ದೀಪ ಬೆಳಗಿ ಶ್ರದ್ದಾಂಜಲಿ ಸಲ್ಲಿಸಿ ಅಭಿಮಾನ ಮೆರೆದಿದ್ದಾರೆ.
Bagalkote Five lakh worth Ram dies fans in tears last rites performed with great honour. Pictures of this has gone viral on social media
02-02-26 08:14 pm
HK News Desk
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
ಮೂರು ದಶಕ ಕಳೆದರೂ ಮತ್ತೆ ಎಂಡೋ ಭೀತಿ ; ಉತ್ತರ ಕನ್ನಡ...
02-02-26 04:06 pm
ಮಾವನ ಮಗನ ಜೊತೆ ಎಂಗೇಜ್ಮೆಂಟ್ ; ಮದುವೆಗೆ ತಿಂಗಳು...
02-02-26 03:02 pm
ತಾಯಿ ದುಡುಕುತನಕ್ಕೆ ಮೂರು ಕಂದಮ್ಮಗಳು ಬಲಿ ! ಅತ್ತೆ...
02-02-26 12:18 pm
02-02-26 11:59 am
HK News Desk
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
Sunetra Pawar, Maharashtra Deputy CM: ಮಹಾರಾಷ್...
31-01-26 04:56 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
02-02-26 12:16 pm
HK News Desk
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm
ಲವ್ ಮ್ಯಾರೇಜ್ಗೆ ನೋ ಎಂದ ಪೋಷಕರು ; ಇಂಜೆಕ್ಷನ್ ಚು...
30-01-26 10:57 pm