ಬ್ರೇಕಿಂಗ್ ನ್ಯೂಸ್
09-10-21 08:57 pm Headline Karnataka News Network ಕರ್ನಾಟಕ
ಬೆಂಗಳೂರು, ಅ.9: ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹಾಗೂ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿ ನಡೆಯಲಿದೆ. ರಾಜಕಾರಣಿಗಳ ಹೆಸರಿನಲ್ಲಿ ಡೀಲ್ ಮಾಡುವರ ಅಮಿಷಗಳಿಗೆ ಯಾರು ಕೂಡ ಬಲಿಯಾಗಿ ಹಣ ಕಳೆದುಕೊಳ್ಳಬೇಡಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಲಹೆ ಮಾಡಿದ್ದಾರೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಮೋಸ ಮಾಡಿದ ಬಗ್ಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಾದ ಬೆನ್ನಲ್ಲೇ ಗೃಹ ಸಚಿವರು ಪೊಲೀಸ್ ಹುದ್ದೆ ಕೊಡಿಸುವ ಹೆಸರಿನಲ್ಲಿ ವಂಚನೆ ಮಾಡುವರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ಮಾಡಿದ್ದಾರೆ.
ನೇಮಕಾತಿ ಪ್ರಕ್ರಿಯೆ ಅತ್ಯಂತ ಪಾರದರ್ಶಕ ಹಾಗೂ ನಿಯಮಾನುಸಾರ ನಡೆಯುತ್ತಿದ್ದು, ಅಭ್ಯರ್ಥಿಗಳಾಗಲೀ ಅಥವಾ ಪೋಷಕರಾಗಲೀ ಯಾವುದೇ ರೀತಿಯ ವದಂತಿಗೆ ಕಿವಿಗೊಡಬೇಡಿ. ನೇಮಕಾತಿಯಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಕೆಲವರು ನಂಬಿಕೆ ಹುಟ್ಟಿಸಿ ಅಭ್ಯರ್ಥಿಗಳನ್ನು ವಂಚಿಸುತ್ತಿರುವ ಘಟನೆಗಳು ವರದಿಯಾಗಿವೆ. ಅಭ್ಯರ್ಥಿಗಳಾಗಲೀ, ಪೋಷಕರಾಗಲೀ ಯಾರೂ ಅಮಿಷಗಳಿಗೆ ಬಲಿಯಾಗಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಪ್ರಸ್ತುತ 947 ಸಬ್ ಇನ್ಸ್ ಪೆಕ್ಟರ್ ಹಾಗೂ 4000 ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ದೈಹಿಕ ಸಾಮರ್ಥ್ಯ ಹಾಗೂ ಲಿಖಿತ ಪರೀಕ್ಷೆ ಅತ್ಯಂತ ಪಾರದರ್ಶಕತೆಯಿಂದ ನಡೆಯುತ್ತಿದ್ದು ಅದರಲ್ಲಿ ದಾಖಲಾಗುವ ಫಲಿತಾಂಶಗಳೇ ಅಭ್ಯರ್ಥಿ ಆಯ್ಕೆ ಮಾನದಂಡ ಆಗಿರುತ್ತದೆ. ಹುದ್ದೆ ಕೊಡಿಸುವುದಾಗಿ ಯಾರಾದರೂ ಆಮಿಷ ಒಡ್ಡಿದರೆ, ಅಭ್ಯರ್ಥಿಗಳು ಅಥವಾ ಪೋಷಕರು ವಿಷಯವನ್ನು ಪೊಲೀಸರಿಗೆ ತಿಳಿಸಬೇಕು. ಈ ಮೂಲಕ ವಂಚನೆಯಿಂದ ತಪ್ಪಿಸಿಕೊಳ್ಳಬೇಕು ಎಂದು ಆರಗ ಜ್ಞಾನೇಂದ್ರ ಸಲಹೆ ಮಾಡಿದ್ದಾರೆ.
ಪಿಎಸ್ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ವಂಚನೆ
ಮಹಿಳಾ ಅಭ್ಯರ್ಥಿಗಳಿಗೆ ಸರ್ಕಾರಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆ ಕೊಡಿಸುವುದಾಗಿ ನಂಬಿಸಿ 18 ಲಕ್ಷ ರೂ. ಪಡೆದು ವಂಚನೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪುಟ್ಟರಾಜು ವಂಚನೆಗೆ ಒಳಗಾದ ವ್ಯಕ್ತಿ. ಪುಟ್ಟರಾಜು ಅವರ ಪುತ್ರಿ ಪಿಎಸ್ಐ ದೈಹಿಕ ಪರೀಕ್ಷೆಯಲ್ಲಿ ಪಾಸಾಗಿದ್ದರು. ಲಿಖಿತ ಪರೀಕ್ಷೆ ಬರೆಯಬೇಕಿತ್ತು. ದೇವನಹಳ್ಳಿ ಮೂಲದ ಶ್ರೀನಿವಾಸ್ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಗುರುತಿಸಿಕೊಂಡಿದ್ದು, ತನಗೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಪರಿಚಯವಿದ್ದಾರೆ. ನಿಮ್ಮ ಮಗಳಿಗೆ ಪಿಎಸ್ಐ ಹುದ್ದೆ ಕೊಡಿಸುತ್ತೇನೆ ಎಂದು ನಂಬಿಸಿ 70 ಲಕ್ಷ ರೂ. ಡೀಲ್ ಕುದುರಿಸಿದ್ದ. ಅದರಲ್ಲಿ ಅಂತಿಮವಾಗಿ 55 ಲಕ್ಷ ರೂ.ಗೆ ಡೀಲ್ ಕುದುರಿಸಿ ಮುಂಗಡವಾಗಿ 18 ಲಕ್ಷ ರೂ. ಪಡೆದುಕೊಂಡಿದ್ದಾನೆ.
ಈ ಮಧ್ಯೆ ಪಿಎಸ್ಐ ಹುದ್ದೆಗಳ ನೇಮಕಾತಿಗೆ ಯಾರದೇ ಮಧ್ಯ ಪ್ರವೇಶದಿಂದ ಹುದ್ದೆ ದೊರೆಯುವುದಿಲ್ಲ ಎಂಬುದನ್ನು ಆಪ್ತರೊಬ್ಬರು ಪುಟ್ಟರಾಜುಗೆ ಹೇಳಿದ್ದರು. ಕೂಡಲೇ ಶ್ರೀನಿವಾಸ್ ಅವರನ್ನು ಭೇಟಿ ಮಾಡಿ ಹಣ ವಾಪಸು ನೀಡುವಂತೆ ಕೇಳಿದ್ದಾರೆ. ಹಣ ನಾನು ಕೊಟ್ಟು ಬಿಟ್ಟಿದ್ದೇನೆ ಎಂದು ಹೇಳಿ ಹಣ ವಾಪಸು ನೀಡಲು ನಿರಾಕರಿಸಿದ್ದಾರೆ. ಪುಟ್ಟರಾಜು ಸದಾಶಿವನಗರ ಪೊಲೀಸರಿಗೆ ದೂರು ನೀಡಿದ್ದು ಶ್ರೀನಿವಾಸ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಲಾಗಿದೆ.
The recruitment process of the Police Sub Inspector and Police Constable posts in the Police Department will be very transparent. Home Minister Aaruga Jnanendra advises not to lose money who deals with politicians name
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
29-08-26 10:25 pm
HK News Staffer
ನೇಪಾಳ ಪ್ರವಾಹದ ಬಳಿಕ ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್...
29-08-26 03:36 pm
ನೇಪಾಳದಲ್ಲಿ ಜಲಪ್ರಳಯ ; ಸಾವಿನ ಸಂಖ್ಯೆ 160ಕ್ಕೆ ಏರ...
27-08-26 12:39 pm
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
29-08-26 08:35 pm
HK News Staffer
ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಮಂಗಳೂರು ಡಿಸಿಪಿ...
29-08-26 07:01 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ತುಳುವನ್ನು ರಾಜ್ಯ...
29-08-26 04:39 pm
ಮಂಗಳೂರು ರೈಲ್ವೇ ; ಕೇರಳದಲ್ಲಿ ಯಾರು ಬಟ್ಟೆ ಬಿಚ್ಚಿ...
29-08-26 04:05 pm
ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪ...
28-08-26 08:57 pm
29-08-26 01:02 pm
HK News Staffer
ತುಮಕೂರು ; ಓವರ್ಟೇಕ್ ಭರದಲ್ಲಿ ಕಾರುಗಳ ನಡುವೆ ಮುಖ...
29-08-26 11:40 am
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಹುಡುಗಿಯ ಕತರ್...
28-08-26 09:03 pm
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm