ಬ್ರೇಕಿಂಗ್ ನ್ಯೂಸ್
07-10-21 08:54 pm Headline Karnataka News Network ಕರ್ನಾಟಕ
ನವದೆಹಲಿ, ಅ.7: ಉತ್ತರ ಪ್ರದೇಶದ ಲಖೀಮ್ ಪುರ್ ಖೇರಿಯಲ್ಲಿ ನಡೆದ ರೈತರ ಮೇಲೆ ಜೀಪು ಹರಿಸಿದ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದ ಬಿಜೆಪಿ ಸಂಸದ ವರುಣ್ ಗಾಂಧಿಯನ್ನು 80 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯತ್ವದಿಂದ ತೆಗೆದು ಹಾಕಲಾಗಿದೆ. ರೈತರ ಮೇಲಿನ ದಾಳಿಯನ್ನು ಖಂಡಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ವರುಣ್ ಗಾಂಧಿ ಆಗ್ರಹಿಸಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಅದರಿಂದ ಸಂಸದೆ ಮನೇಕಾ ಗಾಂಧಿ ಮತ್ತು ವರುಣ್ ಗಾಂಧಿಯ ಹೆಸರನ್ನು ಕೈಬಿಡಲಾಗಿದೆ. ವರುಣ್ ಗಾಂಧಿ ಉತ್ತರ ಪ್ರದೇಶದ ಫಿಲಿಭಿತ್ ಕ್ಷೇತ್ರದಲ್ಲಿ ಸಂಸದನಾಗಿದ್ದರೆ, ಮನೇಕಾ ಗಾಂಧಿ ಸುಲ್ತಾನ್ ಪುರ್ ಕ್ಷೇತ್ರದಲ್ಲಿ ಸಂಸದರಾಗಿದ್ದಾರೆ.
ಲಖೀಮ್ ಪುರ್ ಹಿಂಸಾಚಾರ ಘಟನೆಯ ಬಳಿಕ ಕೇಂದ್ರ ಸರಕಾರ ಕೃಷಿ ಕಾಯ್ದೆ ಬಗ್ಗೆ ವರುಣ್ ಗಾಂಧಿ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರು. ಅಲ್ಲದೆ, ರೈತರ ಮೇಲೆ ಜೀಪು ಹರಿಸಿದ ಘಟನೆಯ ಎರಡು ವಿಡಿಯೋವನ್ನು ವರುಣ್ ಗಾಂಧಿ ತನ್ನ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ, ಕೃತ್ಯ ಎಸಗಿದ ಆರೋಪಿಗಳು, ಜೀಪು ಮಾಲಕ ಮತ್ತು ಅದರಲ್ಲಿದ್ದ ಎಲ್ಲರನ್ನೂ ಬಂಧಿಸುವಂತೆ ಆಗ್ರಹಿಸಿದ್ದರು. ಈ ವಿಡಿಯೋ ತುಂಬ ಸ್ಪಷ್ಟವಾಗಿದೆ. ಪ್ರತಿಭಟನಾಕಾರರು ಸುಮ್ಮನೆ ಹಿಂಸಾಚಾರ ಎಬ್ಬಿಸಿದ್ದಲ್ಲ. ಅಮಾಯಕ ರೈತರು ಬಲಿಯಾಗಿದ್ದಾರೆ. ಈ ರೀತಿಯ ಕ್ರೂರ ನಡೆಯ ಕುರಿತ ಸಂದೇಶ ಎಲ್ಲ ರೈತರ ತಲೆಗೆ ಹೊಕ್ಕುವ ಮೊದಲು ಆರೋಪಿಗಳನ್ನು ಶಿಕ್ಷಿಸುವ ಮೂಲಕ ನ್ಯಾಯ ದೊರಕಿಸಬೇಕಾಗಿದೆ ಎಂದು ವರುಣ್ ಗಾಂಧಿ ಟ್ವೀಟ್ ಮಾಡಿದ್ದರು.
ಉತ್ತರ ಪ್ರದೇಶ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ, ನ್ಯಾಯದ ವಿಚಾರದಲ್ಲಿ ದಿಟ್ಟವಾಗಿ ಪ್ರಶ್ನೆಗಳನ್ನು ತೂರಿದ್ದ ವರುಣ್ ಗಾಂಧಿ ಬಿಜೆಪಿ ವರಿಷ್ಠರಿಗೇ ಇರಿಸು ಮುರಿಸು ಮಾಡಿದ್ದರು. ಇದಕ್ಕಾಗಿ ತಾಯಿ, ಮಗನನ್ನು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯತ್ವದಿಂದಲೇ ತೆಗೆದು ಹಾಕಿ ಶಿಕ್ಷೆ ವಿಧಿಸಲಾಗಿದೆ ಎನ್ನುವ ಮಾತು ಕೇಳಿಬಂದಿದೆ. ಈ ರೀತಿ ಟ್ವೀಟ್ ಮಾಡಿದ ಎರಡೇ ದಿನದಲ್ಲಿ ಬಿಜೆಪಿ ವರಿಷ್ಠರು ಚಾಟಿ ಬೀಸಿದ್ದಾರೆ.
Bharatiya Janata Party (BJP) leader Varun Gandhi has been dropped from the 80-member National Executive along with his mother Maneka Gandhi. Party chief JP Nadda released the list on Thursday.While Varun Gandhi represents Pilibhit in the Lower House, Maneka is a Lok Sabha MP from Sultanpur.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm