ಬ್ರೇಕಿಂಗ್ ನ್ಯೂಸ್
28-09-21 05:32 pm Headline Karnataka News Network ಕರ್ನಾಟಕ
ಮೈಸೂರು, ಸೆ.28: ಪೊಲೀಸರು ಕೆಲವೊಮ್ಮೆ ಅಧಿಕಾರ ದುರುಪಯೋಗ ಮಾಡುವುದು ಕೇಳಿಬರುತ್ತದೆ. ಹಾಗಂತ, ಈ ಬಗ್ಗೆ ದೂರು ನೀಡಲು ಜನ ಹಿಂಜರಿಯುತ್ತಾರೆ. ಆದರೆ, ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸರ ವಿರುದ್ಧ ದೂರು ನೀಡಲೆಂದೇ ಹೊಸ ವ್ಯವಸ್ಥೆ ಜಾರಿಗೆ ತರುವುದಾಗಿ ಹೇಳಿದ್ದಾರೆ.
ಮೈಸೂರಿನ ಜ್ಯೋತಿ ನಗರ ಪೊಲೀಸ್ ತರಬೇತಿ ಶಾಲೆ ಮೈದಾನದಲ್ಲಿ ಮಹಿಳಾ ಪೊಲೀಸ್ ಕಾನ್ಸ್‌ಟೆಬಲ್‌ಗಳ 6ನೇ ತಂಡ ನಿರ್ಗಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಚಿವ ಅರಗ ಜ್ಞಾನೇಂದ್ರ ಮಾತನಾಡಿದರು.
"ಪೊಲೀಸರ ಕಡೆಯಿಂದಲೂ ಇತ್ತೀಚೆಗೆ ಅಪರಾಧ ಹೆಚ್ಚುತ್ತಿವೆ, ಹೀಗಾಗಿ ಪೊಲೀಸರ ವಿರುದ್ಧವೂ ಎಸ್‌ಪಿ, ಡಿಜಿ ಕಚೇರಿಗಳಲ್ಲಿ ದೂರು ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು.
"ಪೊಲೀಸರಿಂದ ಅಪರಾಧಕ್ಕೊಳಗಾದವರು ದೂರು ನೀಡಬೇಕು. ಅದಕ್ಕಾಗಿ ಅಗತ್ಯ ವಾತಾವರಣ ನಿರ್ಮಾಣ ಮಾಡಲು ವ್ಯವಸ್ಥೆ ಮಾಡಿದ್ದೇವೆ. ಬೆಂಗಳೂರಿಗೆ ಹೋದ ತಕ್ಷಣ ಈ ಬಗ್ಗೆ ಅಧಿಕಾರಗಳ ಸಭೆ ನಡೆಸುತ್ತೇನೆ. ಪೊಲೀಸರ ಮೇಲೆಯೇ ಕೆಲವೊಂದಷ್ಟು ದೂರುಗಳಿವೆ. ಇದನ್ನು ತಡೆಯಲು ಈ ಕ್ರಮ ಅನಿವಾರ್ಯವಾಗಿದೆ," ಎಂದು ಗೃಹ ಸಚಿವರು ಹೇಳಿದರು.
"ಪ್ರತಿ ಜಿಲ್ಲೆಯಲ್ಲೂ ಎರಡು ದೂರವಾಣಿ ಸಂಖ್ಯೆ ಸಮೇತ ಕೇಂದ್ರ ಸ್ಥಾಪನೆಗೆ ಮುಂದಾಗುತ್ತಿದ್ದೇವೆ. ಜನಸ್ನೇಹಿ ಪೊಲೀಸ್ ದೃಷ್ಟಿಯಿಂದ ಈ ವ್ಯವಸ್ಥೆ ಶೀಘ್ರದಲ್ಲೇ ಜಾರಿ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
"ಈ ದೇಶದ 130 ಕೋಟಿ ಜನಸಂಖ್ಯೆಯ ಆಂತರಿಕ ರಕ್ಷಣೆಯ ಸವಾಲು ಇದಾಗಿದ್ದು, ಇದನ್ನು ಸೈನಿಕರು ಮಾಡಲು ಸಾಧ್ಯವಿಲ್ಲ. ಅದನ್ನು ಮಾಡುತ್ತಿರುವುದು ಪೊಲೀಸರು. ಶಾಂತಿ ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ಉತ್ತಮವಾಗಿ ನಿರ್ವಹಿಸುತ್ತಿದೆ," ಎಂದರು.
"ಪೊಲೀಸರು ಅಂದರೆ ಗಂಡಸರು ಅನ್ನುವ ಪರಿಕಲ್ಪನೆ ಇತ್ತು. ನೂರಕ್ಕೆ 25 ಭಾಗ ಮಹಿಳೆಯರು ಇರಬೇಕು, ಆದರೆ ರಾಜ್ಯದಲ್ಲಿ ಶೇ.10ರಷ್ಟು ಮಹಿಳಾ ಪೊಲೀಸರು ಇದ್ದಾರೆ. ಪೊಲೀಸ್ ಕಾನ್ಸ್‌ಟೆಬಲ್ ವಿದ್ಯಾರ್ಹತೆ ಪಿಯುಸಿ. ಆದರೆ ನಿಮ್ಮ ವಿದ್ಯಾರ್ಹತೆ ಪದವಿ, ಸ್ನಾತಕೋತ್ತರ ಇದೆ. 242 ಜನರಲ್ಲಿ ಹೆಚ್ಚು ಅಭ್ಯರ್ಥಿಗಳು ಪದವಿ ಪಡೆದಿದ್ದೀರಿ. ಇದರಿಂದ ಪೊಲೀಸ್ ಇಲಾಖೆಯಲ್ಲಿ ಶಿಸ್ತು ಸಂಯಮ ಹೆಚ್ಚಬೇಕು," ಎಂದು ತರಬೇತಿ ಪಡೆದು ನಿರ್ಗಮನ ಮಹಿಳಾ ಪೊಲೀಸರಿಗೆ ಕಿವಿಮಾತು ಹೇಳಿದರು.
ಪ್ರಕರಣದ ಶೇ.35 ರಷ್ಟು ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯವಾಗುತ್ತಿದೆ. ಮಹಿಳೆ ಎಲ್ಲವನ್ನು ಪುರುಷ ಅಧಿಕಾರಿ ಬಳಿ ಹೇಳಲು ಸಾಧ್ಯವಿಲ್ಲ. ಎಲ್ಲಾ ಪೊಲೀಸ್ ಠಾಣೆಯಲ್ಲಿ ಕನಿಷ್ಠ ಮೂವರು ಮಹಿಳಾ ಪೇದೆಯರು, ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆಯ ಗುರಿ ಇದೆ," ಎಂದು ಗೃಹ ಅರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
"ಅಲ್ಲದೇ ಮಂಗಳೂರಿನಲ್ಲಿ ನಡೆದ ಯುವತಿ ಮೇಲಿನ ಹಲ್ಲೆ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಇಂತಹ ಪ್ರಕರಣ ನಡೆಯದಂತೆ ಕ್ರಮ ವಹಿಸಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ಹಿಂದೂ ಮಹಿಳೆಯರ ಮೇಲೆ ಹಲ್ಲೆ ನಡೆಸುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು," ಎಂದರು.
ಇದಕ್ಕೂ ಮುನ್ನ ಮಹಿಳಾ ಪೊಲೀಸ್ ಕಾನ್ಸ್‌ಟೆಬಲ್‌ಗಳಿಂದ ಪಥಸಂಚಲನ ನೆರವೇರಿತು. ಕಳೆದ 8 ತಿಂಗಳ ತರಬೇತಿ ಪೂರೈಸಿರುವ 242 ಪ್ರಶಿಕ್ಷಣಾರ್ಥಿಗಳು ಗೃಹ ಸಚಿವ ಆರಗ ಜ್ಞಾನೇಂದ್ರ ಎದುರು ನಿರ್ಗಮನ ಪರೇಡ್ ನಡೆಸಿದರು. ಬಳಿಕ ಗೃಹ ಸಚಿವರು ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು.
Planning to make System to Complaints Against Police Abuse of Power says Araga Jnanendra
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 06:46 pm
HK News Desk
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
13-05-25 07:33 pm
Mangalore Correspondent
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm