ಬ್ರೇಕಿಂಗ್ ನ್ಯೂಸ್
29-08-21 10:29 pm Headline Karnataka News Network ಕರ್ನಾಟಕ
ಬೆಳಗಾವಿ, ಆಗಸ್ಟ್ 29: ಬಿಜೆಪಿಯವ್ರು ಪ್ರಣಾಳಿಕೆಯಲ್ಲಿ ಮೃತಪಟ್ಟವರಿಗೆ ಉಚಿತವಾಗಿ ಶವ ಸಂಸ್ಕಾರ ಮಾಡ್ತಿವಿ ಅಂತಾ ಹೇಳಿದ್ದಾರೆ. ಇದು ಬಿಜೆಪಿಯವರಿಗೆ ನಾಚೀಕೆ ಆಗಬೇಕು. ಇವರು ಜನರನ್ನ ಬದುಕಿಸುತ್ತೇವೆ ಅನ್ನೋದ್ರ ಬದಲು ಜನ ಸಾಯಲಿ ಅಂತಾ ಬಯಸ್ತಿದ್ದಾರೆ.. ಇದ್ಯಾವ ಸೀಮೆಯ ಪ್ರಣಾಳಿಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ಬೆಳಗಾವಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಸುದ್ದಿಗೋಷ್ಟಿ ನಡೆಸಿದ ಡಿಕೆಶಿ, ಬಿಜೆಪಿ ಪಾಲಿಕೆ ಚುನಾವಣೆಗೆ ನೀಡಿರುವ ಪ್ರಣಾಳಿಕೆಯನ್ನೇ ಮುಂದಿಟ್ಟು ವಾಗ್ದಾಳಿ ನಡೆಸಿದ್ದಾರೆ.
ಏನ್ರೀ ಈ ಬಿಜೆಪಿಯವ್ರಿಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ.. ಇವರು ಸತ್ತವರಿಗೆ ಸಂಸ್ಕಾರ ಮಾಡೋದನ್ನೇ ಬಯಸುತ್ತಿದ್ದಾರೆಯೇ ? ಪ್ರಣಾಳಿಕೆಯಲ್ಲೇ ಉಚಿತ ಶವ ಸಂಸ್ಕಾರ ನಡೆಸುವ ಬಗ್ಗೆ ಆಫರ್ ಕೊಟ್ಟಿದ್ದಾರೆ. ಇವರು ಜನರನ್ನು ಬದುಕಿಸೋದ್ರ ಬದಲು ಸಾಯೋದಕ್ಕೆ ಕಾಯ್ತಿದ್ದಾರೆ ಎಂದು ಮೂದಲಿಸಿದರು. ಸರ್ಕಾರ ಇನ್ನೂ ಕೋವಿಡ್ ಪರಿಹಾರವನ್ನೇ ಜನರಿಗೆ ತಲುಪಿಸಿಲ್ಲ. ಯಾವ ಬೀದಿ ವ್ಯಾಪಾರಿ, ನೇಕಾರರು, ಕೂಲಿ ಕಾರ್ಮಿಕರಿಗೆ ಪರಿಹಾರ ಕೊಟ್ಟಿದ್ದೀರಿ ಎಂದು ಡಿಕೆಶಿ ಪ್ರಶ್ನೆ ಮಾಡಿದರು.
ಬಿಜೆಪಿಯವರು ಒಂದೇ ಒಂದು ಪ್ರಣಾಳಿಕೆ ಕಾರ್ಯರೂಪಕ್ಕೆ ತಂದಿಲ್ಲ. ಹೈಸ್ಪೀಡ್ ರೈಲು ಬಿಡ್ತಿವಿ ಅಂದ್ರು. ಆದ್ರೆ ಬಿಜೆಪಿಯವರು ಎಲ್ಲಿ ರೈಲು ಬಿಟ್ಟರೋ ಗೊತ್ತಿಲ್ಲ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಬೆಳಗಾವಿಯಲ್ಲಿ ಇಬ್ಬರು ಡಬಲ್ ಎಂಜಿನನಂತೆ ಶಾಸಕರು ಇದ್ದಾರೆ. ನಾನು ನೀವು ಹೋರಾಟ ಮಾಡಿ ಸುವರ್ಣ ಸೌಧ ಕಟ್ಟಿಸಿದ್ದೇವೆ. ಕಳೆದ ಎರಡು ವರ್ಷದಲ್ಲಿ ಬೆಳಗಾವಿಯಲ್ಲಿ ಅಧಿವೇಶನ ಮಾಡ್ತಿಲ್ಲ. ಅಧಿವೇಶನ ಮಾಡಿದ್ರೆ ಬೆಳಗಾವಿ ನಗರಕ್ಕೆ ಆರ್ಥಿಕ ಚೈತನ್ಯ ಸಿಗುತ್ತದೆ. ಆದ್ರೆ ಇವರು ಯಾಕೆ ಅಧಿವೇಶನ ಮಾಡಿಲ್ಲ ಅನ್ನೋದನ್ನ ಜನರು ಈ ಬಾರಿ ತೀರ್ಮಾನ ಮಾಡ್ತಾರೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಜನರು ತಮ್ಮ ಶಕ್ತಿ ತೋರಿಸಿದ್ದಾರೆ. ಈ ಬಾರಿ ತಮ್ಮ ಪವರ್ ಏನೆಂದು ತೋರಿಸಲಿದ್ದಾರೆ ಎಂದು ಹೇಳಿದರು.
ಬೆಳಗಾವಿ ನಗರದ ಅಭಿವೃದ್ಧಿ ಆಗಬೇಕು. ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ಬೆಳಗಾವಿಯಲ್ಲಿ ಕಾರ್ಪೊರೇಟ್ ವ್ಯವಸ್ಥೆ ಅನುಷ್ಠಾನಕ್ಕೆ ಬರಬೇಕು. ಇದರಿಂದ ಉದ್ಯೋಗ, ಉದ್ಯಮದ ಅಭಿವೃದ್ಧಿ ಸಾಧ್ಯವಿದೆ. ಕಾಂಗ್ರೆಸ್ ಪಕ್ಷದಿಂದಲೇ ಬೇಕಾದ್ರೆ ನಾವು ಸರ್ಕಾರಕ್ಕೆ ಅಭಿವೃದ್ಧಿ ನೀಲನಕ್ಷೆ ಕೊಡುತ್ತೇವೆ ಎಂದ ಡಿಕೆಶಿ, ನನ್ನ ಮಿತ್ರ ಸುರೇಶ ಅಂಗಡಿ ಕೊರೊನಾದಿಂದ ಮೃತಪಟ್ಟರು. ಸುರೇಶ ಅಂಗಡಿಯವರ ಮೃತದೇಹವನ್ನ ಕನಿಷ್ಠ ಅವರ ಕುಟುಂಬಕ್ಕೆ ತಂದುಕೊಡಲಿಕ್ಕೂ ಆಗಲಿಲ್ಲ ಇವರಿಗೆ. ಇವರು ಏನು ಸರಕಾರ ನಡೆಸ್ತಿದಾರೆ. ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆ, ಔಷಧಿ, ಆಕ್ಸಿಜನ್ ಕೊಡಕ್ಕೂ ಆಗಲಿಲ್ಲ. ಇಂತವರಿಗೆ ಜನಾ ಓಟ್ ಹಾಕಬೇಕಾ ಎಂದು ಕೇಳಿದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಶೇ.25 ರಷ್ಟು ಕಮೀಷನ್, ಶೇ.50 ರಷ್ಟು ಕೆಲಸ ಆಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಕಮಿಟಿ ಮಾಡಿ ತನಿಖೆ ಮಾಡಿಸ್ತೀನಿ. ಎಲ್ಲ ಕಡೆಯ ಸ್ಮಾರ್ಟ್ ಸಿಟಿ ಕಾಮಗಾರಿ ಬಗ್ಗೆ ವರದಿ ತರೆಸಿಕೊಳ್ಳುತ್ತೇನೆ ಎಂದರು ಡಿಕೆಶಿ.
ಡಿಕೆಶಿಗೆ ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಅಂಜಲಿ ನಿಂಬಾಳಕರ, ಮಾಜಿ ಶಾಸಕ ಫಿರೋಜ್ ಸೇಠ್ ಸಾಥ್ ನೀಡಿದ್ರು.
Karnataka Pradesh Congress Committee president D K Shivakumar charged that Karnataka ranks first in corruption that occurred during the Covid-19 pandemic and the large-scale corruption resulted in chief minister B S Yediyurappa losing power.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm