ಬ್ರೇಕಿಂಗ್ ನ್ಯೂಸ್
23-08-21 04:19 pm Headline Karnataka News Network ಕರ್ನಾಟಕ
ಬೆಂಗಳೂರು, ಆಗಸ್ಟ್ 23 : ಸಿಎಂ ಅಂದರೆ ಕಾಮನ್ ಮ್ಯಾನ್. ಸಿನಿಮಾ ಥರ ಆರ್ಭಟಿಸಿದರೆ ಜನ ಕೇಳಬೇಕಲ್ಲಾ.. ಹೀಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ ಸರಳ ಮಾತುಗಳಿಂದ ಜನಮನ ಸೂರೆಗೊಂಡ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೀ ಕನ್ನಡ ವಾಹಿನಿಯ ವೇದಿಕೆಯಲ್ಲಿ ತುಂಬ ಲವಲವಿಕೆಯಿಂದ ಮಕ್ಕಳ ಜೊತೆ ಮಾತನಾಡಿದರು. ಜೀ ಕನ್ನಡದ 15ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ಅವರು ಅತಿಥಿಯಾಗಿ ಆಗಮಿಸಿದ್ದರು. ಆಗ ಅವರಿಗೆ ಮಕ್ಕಳು ಕೆಲವು ಪ್ರಶ್ನೆಗಳನ್ನು ಕೇಳಿದ್ದು ಅವುಗಳಿಗೆ ಉತ್ತರಿಸಿದ ಬಸವರಾಜ ಬೊಮ್ಮಾಯಿ ಎಲ್ಲರ ಮುಖದಲ್ಲೂ ನಗು ಮೂಡಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪುಟ್ಟ ಹುಡುಗನೋರ್ವ “ನಾವು ತುಂಬ ಸಿನಿಮಾಗಳಲ್ಲಿ ನೋಡಿರುವ ಸಿಎಂ ಬೇರೆ ಬೇರೆ ಥರ ಇದ್ದರು. ನೀವೇನು ಸರ್ ಇಷ್ಟು ಸಿಂಪಲ್ ಆಗಿದ್ದೀರಲ್ಲಾ?” ಎಂದು ಪ್ರಶ್ನೆ ಹಾಕಿದನು. ಇದಕ್ಕೆ ನಗುತ್ತಲೇ ಉತ್ತರಿಸಿದ ಸಿಎಂ ಸಾಹೇಬರು, ಅದು ಸಿನಿಮಾ ಕಣೋ. ಸಿನಿಮಾದಲ್ಲಿ ಆರ್ಭಟ ಇರಲೇಬೇಕು. ಹಾಗಿದ್ದಾಗಲೇ ಸಿನಿಮಾ ನೋಡೋಕೆ ಜನ ಬರೋದು. ಆದರೆ ನಿಜ ಜೀವನದಲ್ಲಿ ನಾವು ಆರ್ಭಟ ಮಾಡಿದರೆ ಜನರು ಕೇಳಲ್ಲ. ಹಾಗಾಗಿ ನಾವು ಇಲ್ಲಿ ಸಿಂಪಲ್ ಆಗಿ ಇರಲೇಬೇಕು.
ನಿಮ್ಮ ಫೇವರಿಟ್ ಹೀರೋಯಿನ್ ಯಾರು ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಿಎಂ, ಇದು ಬಹಳ ಕಷ್ಟದ ಪ್ರಶ್ನೆ. ಯಾಕೆಂದರೆ ಬಹಳ ಜನ ಇದ್ದಾರೆ. ಒಬ್ಬರ ಹೆಸರು ಹೇಳಿದರೆ ಇನ್ನೊಬ್ಬರಿಗೆ ಬೇಜಾರಾಗುತ್ತದೆ. ನನ್ನ ಆಲ್ಟೈಮ್ ಫೇವರಿಟ್ ಹೀರೋಯಿನ್ ಮಧುಬಾಲ. ಕನ್ನಡದಲ್ಲಿ ಹೇಳುವುದಾದರೆ, ನಮ್ಮ ಕಾಲದ ಟಾಪ್ 3 ಹೀರೋಯಿನ್ಗಳಾದ ಕಲ್ಪನಾ, ಜಯಂತಿ ಮತ್ತು ಭಾರತಿ ನನ್ನ ಫೇವರಿಟ್. ಡಾ. ರಾಜ್ಕುಮಾರ್ ಅವರು ನನ್ನ ಆಲ್ಟೈಮ್ ಫೇವರಿಟ್ ಹೀರೋ.
ವೇದಿಕೆಯಲ್ಲಿ ತಮ್ಮ ಅಮ್ಮ ಮಾಡಿಕೊಡುತ್ತಿದ್ದ ಬಿಸಿ ಬಿಸಿ ಜೋಳದ ರೊಟ್ಟಿ ನೆನಪಿಸಿಕೊಂಡರು. ಇದೇ ವೇಳೆ, ನಾನು ಸಿಎಂ ಅಂದರೆ ಕಾಮನ್ ಮ್ಯಾನ್ ಎಂದು ಬೊಮ್ಮಾಯಿ ಹೇಳಿದ್ದು ಎಲ್ಲರ ಗಮನಸೆಳೆಯಿತು.
ಬೊಮ್ಮಾಯಿ ಅವರು ಕಾರ್ಯಕ್ರಮದಲ್ಲಿ ಮಕ್ಕಳ ಜೊತೆ ತುಂಬ ಖುಷಿಯಿಂದ ಮಾತಾಡಿದರು. ಅವರ ಈ ಸರಳತೆಯ ವಿಡಿಯೋ ವೈರಲ್ ಆಗುತ್ತಿದೆ.
Video: Click
CM Basavaraj Bommai talks about his Favorite Heroines on Zee Kannada stage.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm