ಬ್ರೇಕಿಂಗ್ ನ್ಯೂಸ್
22-08-21 04:11 pm Headline Karnataka ಕರ್ನಾಟಕ
ವಿಜಯಪುರ, ಆಗಸ್ಟ್ 22: ಅಪ್ಘಾನಿಸ್ತಾನ್ ವಿಚಾರದಲ್ಲಿ ಮಾತನಾಡದ ಬುದ್ಧಿ ಜೀವಿಗಳ ವಿರುದ್ಧ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬುದ್ಧಿಜೀವಿಗಳು ತಾಲಿಬಾನ್‌ಗೆ ಹುಟ್ಟಿದ್ದಾರೆ.. ಬುದ್ಧಿಜೀವಿಗಳು ಲದ್ದಿ ತಿಂದಿದ್ದಾರೆ. ಬುದ್ಧಿಜೀವಿಗಳು ತಾಲಿಬಾನಿ ಸಂತಾನಿಗಳು ಎಂದು ಯತ್ನಾಳ್ ಹರಿಹಾಯ್ದಿದ್ದಾರೆ.
ಅಫ್ಘಾನಿಸ್ತಾನದ ತಾಲಿಬಾನಿಗಳ ಬಗ್ಗೆ ರಾಹುಲ್ ಗಾಂಧಿ ಯಾಕೆ ಮಾತಾಡಲ್ಲ..? ಡಿಕೆಶಿ ಯಾಕೆ ಮಾತಾಡಲ್ಲ? ಮೋದಿ ಏನಾದ್ರೂ ಪ್ರಧಾನಿಯಾಗಿರದೇ ಇದ್ದರೇ ಇವ್ರು ತಾಲಿಬಾನಿಗಳನ್ನ ಇಂಪೋರ್ಟ್ ಮಾಡಿಕೊಳ್ತಿದ್ರು. ಪ್ರಧಾನಿ ಮೋದಿಯಿಂದ ನಾವು ಹಿಂದೂಗಳು ಸುರಕ್ಷಿತವಾಗಿದ್ದೇವೆ. ದೇಶದ ಒಳಗಡೆ ಇರುವ ಇಂಥ ತಾಲಿಬಾನಿಗಳಿಗೆ ಗುಂಡು ಹಾಕಬೇಕು. ತಾಲಿಬಾನಿಗಳು ಅಲ್ಲಿ ಗುಂಡು ಹಾಕೋ ಹಾಗೇ ಇಲ್ಲಿ ಇವರಿಗೆ ಗುಂಡು ಹಾಕಬೇಕು. ಗುಂಡು ಹಾಕದಿದ್ದರೆ ಇವರೇ ದೇಶಕ್ಕೆ ಪಿಡುಗು ಆಗ್ತಾರೆ ಎಂದು ಹೇಳಿದರು.
ಅಫ್ಘಾನಿಸ್ತಾನದ ಹಿಂದು - ಸಿಖ್ ಬಿಟ್ಟರೆ ಉಳಿದ ಧರ್ಮದವರಿಗೆ ದೇಶಕ್ಕೆ ಪ್ರವೇಶ ಕೊಡಬಾರದು. ಇವರು ಬರ್ತೀವಿ ಎಂದ್ರೆ ಹಿಂದು -ಬೌದ್ಧ- ಜೈನ ಧರ್ಮ ಸ್ವೀಕರಿಸಿ ಬರಲಿ. ಪಠಾಣರು ಕಳ್ಳನನ್ ಮಕ್ಕಳು.. ಶೂರರು ವೀರರು ಎಂದು ಹೇಳಿಕೊಳ್ತಿದ್ದ ಪಠಾಣರು ಹೆಂಡರನ್ನ ಬಿಟ್ಟು ಓಡಿ ಬರ್ತಿದ್ದಾರೆ..
ಈಗ ಬಾಲಿವುಡ್ ಖಾನ್‌ಗಳು ಎಲ್ಲಿದ್ದಾರೆ. ಬಾಲಿವುಡ್ಡಿನ ಖಾನ್‌ಗಳೆಲ್ಲ ಈಗ ಅಪ್ಘಾನಿಸ್ತಾನಕ್ಕೆ ಹೋಗಲಿ. ಭಾರತ ಸುರಕ್ಷಿತ ಆಗಿಲ್ಲ ಅನ್ನುತ್ತಿದ್ದ ಖಾನ್ ನಟರು ಅಫ್ಘಾನಿಸ್ತಾನಕ್ಕೆ ಹೋಗಿ ಜೀವನ ಮಾಡಲಿ ಎಂದು ಯತ್ನಾಳ್ ಹೇಳಿದರು.
ರಾಹುಲ್ ಗಾಂಧಿ ಸಾಬರಿಗೆ ಹುಟ್ಟಿದಂತೆ ಇದ್ದಾನೆ. ಅವನು ಹಿಂದೂನು ಇಲ್ಲ, ಕ್ರಿಶ್ಚಿಯನ್ನೂ ಇಲ್ಲ, ಯಾರಿಗೆ ಹುಟ್ಟಿದ್ದಾನೋ ಗೊತ್ತಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯ ಬಗ್ಗೆ ಕಟುವಾಗಿ ಟೀಕಿಸಿದ ಯತ್ನಾಳ, ಪ್ರಧಾನಿಗಳು ದೇಶದ ವಿರುದ್ಧ ಮಾತನಾಡುವ ಓವೈಸಿಗಳಂತವರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂದು ಹೇಳಿದರು.
ಸ್ವಾಮೀಜಿಗಳ ವಿರುದ್ಧವೂ ವಾಗ್ದಾಳಿ ನಡೆಸಿದ ಯತ್ನಾಳ್, ಕೆಲವು ಸ್ವಾಮೀಜಿಗಳು ಅಯೋಗ್ಯರಿದ್ದಾರೆ. ಇಸ್ಲಾಂ ಧರ್ಮ ಯಾರನ್ನೂ ಸಹೋದರತ್ವದಿಂದ ನೋಡಿಲ್ಲ. ಕೆಲವು ಅಯೋಗ್ಯ ಸ್ವಾಮೀಜಿಗಳು ಇದ್ದಾರೆ. ಪ್ರವಚನದಲ್ಲಿ ಹಿಂದು - ಮುಸ್ಲಿಂ ಭಾಯಿಭಾಯಿ ಎನ್ನುತ್ತಾರೆ. ಮಾನವ ಧರ್ಮಕ್ಕೆ ಜಯವಾಗಲಿ ಎನ್ನುತ್ತಾರೆ. ನೆಹರು ಮಾಡಿಟ್ಟ ದುರಂತದಿಂದಾಗಿ ದೇಶ ನರಳುತ್ತಿದೆ ಎಂದು ಟೀಕಿಸಿದರು.
If Afghans are coming to India let them convert from Islam and come says Yatnal
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm